ಐದು ವರ್ಷಗಳ ನಂತರ ತೆಲುಗಿನತ್ತ ಉಪೇಂದ್ರ: ಹೀರೋ or ವಿಲನ್?
ನಟ ಉಪೇಂದ್ರ ಕನ್ನಡದಲ್ಲಷ್ಟೆ ಅಲ್ಲ ತೆಲುಗಿನಲ್ಲೂ ಜನಪ್ರಿಯ ನಟ. ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ ಉಪೇಂದ್ರ. ತೆಲುಗಿನಲ್ಲಿ ಒಂದು ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ ಉಪ್ಪಿ.
ತೆಲುಗು ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದ ಕೊನೆಯ ಸಿನಿಮಾ ಅಲ್ಲು ಅರ್ಜುನ್ ನಾಯಕ ನಟರಾಗಿದ್ದ ಸನ್ ಆಫ್ ಸತ್ಯಮೂರ್ತಿ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಹಿಟ್ ಆಯಿತು. ಉಪೇಂದ್ರ ಸಹ ತಮ್ಮ ಅಭಿನಯ ಚಾತುರ್ಯ ಮೆರೆದಿದ್ದರು.
ಸನ್ ಆಫ್ ಸತ್ಯಮೂರ್ತಿ ಸಿನಿಮಾ ಬಿಡುಗಡೆ ಆಗಿ ಐದು ವರ್ಷಗಳಾಗಿದ್ದು, ಇದೀಗ ಐದು ವರ್ಷದ ನಂತರ ಮತ್ತೆ ತೆಲುಗಿನ ಕಡೆಗೆ ಹೊರಟಿಸಿದ್ದಾರೆ ಉಪೇಂದ್ರ. ಹೀರೋ ಆಗಿ ನಟಿಸಲಿದ್ದಾರಾ ಅಥವಾ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರಾ ಎಂಬುದು ಕುತೂಹಲ ಕೆರಳಿಸಿದೆ.

ಮೆಗಾಸ್ಟಾರ್ ಕುಟುಂಬದ ಹೀರೋ
'ಬಾಕ್ಸರ್' ಹೆಸರಿನ ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿರುವುದು ಬಹುತೇಕ ಖಾತ್ರಿಯಾಗಿದೆ. ಈ ಸಿನಿಮಾಕ್ಕೆ ಮೆಗಾಸ್ಟಾರ್ ಕುಟುಂಬದ ವರುಣ್ ತೇಜ್ ನಾಯಕ. ಬಾಕ್ಸರ್ ಒಬ್ಬನ ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದೆ.

ಹೀರೋ or ವಿಲನ್?
ಸಿನಿಮಾದಲ್ಲಿ ಉಪೇಂದ್ರ ಹೀರೋ ಅಥವಾ ವಿಲನ್ ಆಗಿರಲಿದ್ದಾರೆಯೇ ಎಂಬ ಅನುಮಾನಕ್ಕೆ ಸ್ಪಷ್ಟ ಉತ್ತರವಿಲ್ಲ. ಬಾಕ್ಸಿಂಗ್ ಕೋಚ್ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಸನ್ ಆಫ್ ಸತ್ಯಮೂರ್ತಿ ಸಿನಿಮಾದ ಪಾತ್ರದಂತೆ ವಿಲನ್ ಆಗಿದ್ದರೂ ನಾಯಕ ಗುಣ ಹೊಂದಿರುವ ಪಾತ್ರ ಆಗಿರುವ ಸಾಧ್ಯತೆಯೂ ಇದೆ.

ಒಟ್ಟು ಎಂಟು ಸಿನಿಮಾಗಳಲ್ಲಿ ಉಪ್ಪಿ ನಟಿಸಿದ್ದಾರೆ
ಓಂ ಸಿನಿಮಾದ ತೆಲುಗು ರೀಮೇಕ್ ಓಂಕಾರಾ ದಿಂದ ಹಿಡಿದು ಸನ್ ಆಫ್ ಸತ್ಯಮೂರ್ತಿ ವರೆಗೆ ಉಪೇಂದ್ರ ಒಟ್ಟು ಎಂಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸತ್ಯಂ ಎನ್ನುವ ಒಂದು ತಮಿಳು ಸಿನಿಮಾದಲ್ಲಿ ಸಹ ಉಪ್ಪಿ ನಟಿಸಿದ್ದಾರೆ. ಬಾಕ್ಸರ್ ಉಪ್ಪಿ ಅವರ ಒಂಬತ್ತನೇ ತೆಲುಗು ಸಿನಿಮಾ.

ಕಬ್ಜ ಮತ್ತು ಬುದ್ಧಿವಂತ 2 ಸಿನಿಮಾ
ಕನ್ನಡದಲ್ಲಿ ಪ್ರಸ್ತುತ ಕಬ್ಜ ಮತ್ತು ಬುದ್ಧಿವಂತ 2 ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದು, ಬಿಡುಗಡೆಗೆ ತಯಾರಾಗಿವೆ. ಈ ಸಿನಿಮಾಗಳ ನಂತರ ನಿರ್ದೇಶಕ ಶಶಾಂಕ್ ಜೊತೆಗೆ ಪುಣ್ಯಾತ್ಮ ಸಿನಿಮಾದಲ್ಲಿ ಉಪ್ಪಿ ನಟಿಸಲಿದ್ದಾರೆ.


Click it and Unblock the Notifications











