ನಮ್ಮ ಉಪೇಂದ್ರ ಈಗ ಆಂಧ್ರ ಕಿಂಗ್; ಎದ್ದು ನಿಲ್ತು ಭಾರೀ ಕಟೌಟ್

ನಟ, ನಿರ್ದೇಶಕ ಉಪೇಂದ್ರ ಈಗ ಪರಭಾಷಾ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ದಶಕಗಳ ಹಿಂದಿಯೇ ತೆಲುಗು, ತಮಿಳು ಸಿನಿಮಾಗಳಲ್ಲಿ ಉಪ್ಪಿ ನಟಿಸಿದ್ದರು. 'ಯುಐ' ಸಕ್ಸಸ್ ಬಳಿಕ ರಿಯಲ್ ಸ್ಟಾರ್ ನಟನೆಯ '45' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

'45' ನಂತರ ಕನ್ನಡದಲ್ಲಿ 'ಭಾರ್ಗವ' ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. ನಾಗಣ್ಣ ನಿರ್ದೇಶನದ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು 'ಬುದ್ಧಿವಂತ'-2 ಹಾಗೂ 'ತ್ರಿಶೂಲಂ' ಎಂಬ ಸಿನಿಮಾಗಳಲ್ಲಿ ನಟಿಸಿದ್ದು ಸದ್ಯಕ್ಕೆ ಬಿಡುಗಡೆ ಆಗುವ ಸುಳಿವು ಸಿಕ್ತಿಲ್ಲ. ಮತ್ತೊಂದು ಕಡೆ ರಜನಿಕಾಂತ್ ಜೊತೆ 'ಕೂಲಿ' ಚಿತ್ರದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಆಗಸ್ಟ್ 15ಕ್ಕೆ '45' ಜೊತೆ 'ಕೂಲಿ' ಸಿನಿಮಾ ತೆರೆಗೆ ಬರಲಿದೆ.

Upendra And Ram Pothineni Starrer Andhra King Taluka Title Glimpse released

ಇತ್ತೀಚೆಗೆ ಉಪೇಂದ್ರ ಒಂದು ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದರು. ರಾಮ್ ಪೋತಿನೇನಿ ಹೀರೊ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಉಪ್ಪಿ ಕೂಡ ಬಣ್ಣ ಹಚ್ಚುವ ಸುದ್ದಿ ಬಂದಿತ್ತು. ಇದೀಗ ಆ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಚಿತ್ರದಲ್ಲಿ ನಾಯಕ ರಾಮ್ ಹಾಗೂ ಉಪೇಂದ್ರ ಪಾತ್ರಗಳ ಬಗ್ಗೆ ಸುಳಿವು ಸಿಕ್ಕಿದೆ. ಅಚ್ಚರಿ ಎಂದರೆ ಚಿತ್ರದಲ್ಲಿ ಉಪೇಂದ್ರ ಅವರ ಅಭಿಮಾನಿ ಪಾತ್ರದಲ್ಲಿ ರಾಮ್ ನಟಿಸುತ್ತಿದ್ದಾರೆ.

ಅಚ್ಚರಿ ಎನಿಸಿದರೂ ಇದು ಸತ್ಯ. ರಾಮ್ ಪೋತಿನೇನಿ ಮುಂದಿನ ಚಿತ್ರಕ್ಕೆ 'ಆಂಧ್ರ ಕಿಂಗ್ ತಾಲೂಕಾ' ಎಂಬ ಟೈಟಲ್ ಫಿಕ್ಸ್ ಆಗಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ ಸಿನಿಮಾ ನಟ ಉಪೇಂದ್ರ ಅವರ ಅಭಿಮಾನಿ ಪಾತ್ರದಲ್ಲಿ ರಾಮ್ ನಟಿಸುತ್ತಿರುವುದು ಗೊತ್ತಾಗುತ್ತಿದೆ. ತೆಲುಗು ಚಿತ್ರದಲ್ಲಿ ಉಪ್ಪಿಗೆ ಇಂತಾದೊಂದು ಅವಕಾಶ ಗೌರವ ಸಿಗುತ್ತಿರುವುದು ವಿಶೇಷ.

Upendra And Ram Pothineni Starrer Andhra King Taluka Title Glimpse released

ಸಿನಿಮಾಗಳಲ್ಲಿ ಹೀಗೆ ನಾಯಕ ನಟ ಸಿನಿಮಾ ತೆರೆಯರ ಅಭಿಮಾನಿಯಾಗಿ ಕಾಣಿಸಿಕೊಂಡಿರುವುದನ್ನು ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ತೆಲುಗಿನ ಕೆಲ ಸಿನಿಮಾಗಳಲ್ಲಿ ಇಂತಹ ಸನ್ನಿವೇಶಗಳನ್ನು ನೋಡಿದ್ದೇವೆ. ಕನ್ನಡದಲ್ಲಿ 'ರಾಜ್- ದಿ ಶೋಮ್ಯಾನ್' ಚಿತ್ರದಲ್ಲಿ ಪುನೀತ್ ಅಣ್ಣಾವ್ರ ಅಭಿಮಾನಿಯಾಗಿ, ಪಡ್ಡೆಹುಲಿ ಚಿತ್ರದಲ್ಲಿ ಶ್ರೇಯಸ್ ವಿಷ್ಣುವರ್ಧನ್ ಅಭಿಮಾನಿಯಾಗಿ ನಟಿಸಿದ್ದು ಅದಕ್ಕೆ ಉದಾಹರಣೆ.

28 ವರ್ಷಗಳ ಹಿಂದೆಯೇ ತೆಲುಗು ಚಿತ್ರರಂಗದಲ್ಲಿ ಉಪೇಂದ್ರ ಕ್ರೇಜ್ ಶುರುವಾಗಿತ್ತು. 'ಓಂ' ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಿದ್ದರು. ಬಳಿಕ ಕನ್ಯಾದಾನಂ, ಒಕೇ ಮಾಟ, ರಾ, ನೀತೊನೆ ಉಂಟಾನು ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದರು. ತಮ್ಮ ವಿಭಿನ್ನ ಮ್ಯಾನರಿಸಂ, ಸ್ಟೈಲ್‌ನಿಂದ ತೆಲುಗು ಪ್ರೇಕ್ಷಕರ ಮನಗೆದ್ದರು. ಅಷ್ಟೇ ಅಲ್ಲ ಕನ್ನಡದಲ್ಲಿ ಸಂಚಲನ ಸೃಷ್ಟಿಸಿದ್ದ 'ಎ' ಹಾಗೂ 'ಉಪೇಂದ್ರ' ತೆಲುಗಿಗೂ ಡಬ್ ಆಗಿ ಸಕ್ಸಸ್ ಕಂಡಿತ್ತು.

ಪೂರಿ ಜಗನ್ನಾಥ್ ಹಾಗೂ ಸಂದೀಪ್ ರೆಡ್ಡಿ ರೀತಿಯ ನಿರ್ದೇಶಕರು ಉಪೇಂದ್ರ ಸಿನಿಮಾಗಳಿಂದ ಸ್ಫೂರ್ತಿಗೊಂಡು ಸಿನಿಮಾಗಳನ್ನು ಮಾಡುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಾರೆ. ಅಷ್ಟರಮಟ್ಟಿಗೆ ಉಪ್ಪಿ ತಮ್ಮ ವಿಭಿನ್ ಶೈಲಿಯ ಸಿನಿಮಾಗಳಿಂದ ತೆಲುಗಿನಲ್ಲಿ ಕಮಾಲ್ ಮಾಡಿದ್ದರು. ಉಪ್ಪಿಗೆ ತೆಲುಗಿನಲ್ಲಿ ಭಾರೀ ಕ್ರೇಜ್ ಇದೆ. ಅದೇ ಕಾರಣಕ್ಕೆ ಇದೀಗ 'ಆಂಧ್ರ ಕಿಂಗ್ ತಾಲೂಕಾ' ಚಿತ್ರದಲ್ಲಿ ಉಪೇಂದ್ರ ಅಭಿಮಾನಿಯಾಗಿ ರಾಮ್ ನಟಿಸುತ್ತಿದ್ದಾರೆ. ಅಂತಾದೊಂದು ಕಥೆ ಸಿದ್ಧವಾಗಿದೆ. ಅಂದರೆ ಚಿತ್ರದಲ್ಲಿ 'ಆಂಧ್ರ ಕಿಂಗ್' ಉಪೇಂದ್ರ ಎನ್ನುವುದು ಗೊತ್ತಾಗುತ್ತಿದೆ.

'ಆಂಧ್ರ ಕಿಂಗ್ ತಾಲೂಕಾ' ಟೀಸರ್ ನೋಡಿ ಕನ್ನಡ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ತೆಲುಗು ರಾಜ್ಯಗಳಲ್ಲಿ ಉಪ್ಪಿ ಕ್ರೇಜ್ ನೋಡಿ ಫಿದಾ ಆಗಿದ್ದಾರೆ. ರಾಮ್‌ ಪೋತಿನೇನಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೈಟಲ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಚಿತ್ರದಲ್ಲಿ ಉಪ್ಪಿ ಪಾತ್ರ ಏನು ಎನ್ನುವ ಬಗ್ಗೆಯೂ ಕುತೂಹಲ ಗರಿಗೆದರಿದೆ.

More from Filmibeat

English summary
Ram Pothineni portrayed Real Star Upendra's Fan role in Andhra King Taluka film;
Read more about: upendra tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X