ಸುಳ್ಳು ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ 'ಉಪ್ಪೆನಾ' ಸುಂದರಿ ಕೃತಿ ಶೆಟ್ಟಿ

ಮೊದಲ ಚಿತ್ರದಲ್ಲೇ ದಕ್ಷಿಣ ಭಾರತೀಯ ಸಿನಿ ಪ್ರಿಯರ ಹೃದಯ ಗೆದ್ದವರು ಕರಾವಳಿ ಸುಂದರಿ ಕೃತಿ ಶೆಟ್ಟಿ. ತೆಲುಗಿನ ಉಪ್ಪೆನಾ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಕೃತಿಗೆ ಚೊಚ್ಚಲ ಚಿತ್ರವೇ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿದೆ.

ಉಪ್ಪೆನಾ ಬಳಿಕ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ಕೃತಿ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಮೊದಲ ಸಿನಿಮಾದಲ್ಲೇ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿರುವ ಕೃತಿ ಆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಸಿನಿಮಾಗೆ ಕೃತಿ ನಾಯಕಿ ಎಂದು ಕೆಲವು ನಿರ್ಮಾಪಕರು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಈಗ ಸ್ವತಃ ಕೃತಿ ಸ್ಪಷ್ಟನೆ ನೀಡಿದ್ದಾರೆ.

ಉಪ್ಪೆನಾ ಬಳಿಕ ಕೇವಲ 3 ಸಿನಿಮಾಗಳಿಗೆ ಸಹಿ ಮಾಡಿರುವುದಾಗಿ ಕೃತಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಸಿನಿಮಾಗಳ ಬಗ್ಗೆ ಬಹಿರಂಗ ಪಡಿಸುವ ಜೊತೆಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಕೃತಿ. 'ನನ್ನ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿದೆ. ನಾನು 3 ಚಿತ್ರಗಳಿಗೆ ಮಾತ್ರ ಸಹಿ ಹಾಕಿದ್ದೇನೆ. (ನಾನಿ, ಸುಧೀರ್ ಬಾಬು ಮತ್ತು ರಾಮ್ ಪೋತಿನೇನಿ ಅವರೊಂದಿಗೆ) ಈಗ ನನ್ನ ಏಕೈಕ ಗುರಿ ಎಂದರೆ ಈ ಯೋಜನೆಗಳನ್ನು ಮುಗಿಸುವುದು' ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

 Uppena Actress Krithi Shetty officially confirms three projects rubbishes rumours

ಉಪ್ಪೆನಾ ಬಳಿಕ ಕೃತಿ ಶೆಟ್ಟಿ, ತೆಲುಗು ಸ್ಟಾರ್ ನಾನಿ ನಟನೆಯ 'ಶ್ಯಾಮ್ ಸಿಂಗ ರಾಯ್' ಚಿತ್ರಕ್ಕೆ ಸಹಿ ಮಾಡಿದ್ದಾರೆ. ಚಿತ್ರದಲ್ಲಿ ಸಾಯಿ ಪಲ್ಲವಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಧೀರ್ ಬಾಬು ಜೊತೆ 'ಆ ಅಮ್ಮಾಯಿ ಗುರಿಯಿಂಚಿ ಮೀಕುಚೆಪ್ಪಾಲಿ' ಚಿತ್ರ ಮತ್ತು ಇನ್ನು ಹೆಸರಿಡದ ನಟ ರಾಮ್ ಪೋಥಿನೆನಿ ನಟನೆಯ ಚಿತ್ರದಲ್ಲಿ ಕೃತಿ ನಾಯಕಿಯಾಗಿ ನಟಿಸುತ್ತಿದ್ದಾರೆ.

 Uppena Actress Krithi Shetty officially confirms three projects rubbishes rumours

Recommended Video

Kuvempu ಅವರ ನೆನಪಿನ ಅಪರೂಪದ ತುಣುಕುಗಳು | Oneindia Kannada

ಈ ಮೂರು ಚಿತ್ರಗಳನ್ನು ಬಿಟ್ಟು ಇನ್ನು ಯಾವುದೇ ಸಿನಿಮಾಗಳಿಗೆ ಸಹಿ ಮಾಡಿಲ್ಲ ಎಂದು ಹೇಳಿದ್ದಾರೆ. ಮುಂದೆ ಯಾವುದೇ ಸಿನಿಮಾ ಒಪ್ಪಿಕೊಂಡರೂ ತಿಳಿಸುವುದಾಗಿ ಪೋಸ್ಟ್ ಮಾಡಿದ್ದಾರೆ. ನಾನು ಮುಂದಿನ ಸಿನಿಮಾಗಳಿಗೆ ಸಹಿ ಮಾಡಿದಾಗ ಖಂಡಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇನೆ' ಎಂದು ಹೇಳಿದ್ದಾರೆ.

More from Filmibeat

English summary
Uppena Actress Krithi Shetty officially confirms three projects rubbishes rumours about her projects.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X