ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ; ತೆಲುಗು ನಿರ್ಮಾಪಕರಿಗೆ ಭರ್ಜರಿ ಆಫರ್ ನೀಡಿದ ಕೃತಿ ಶೆಟ್ಟಿ ..?

ಬಣ್ಣದ ಲೋಕದಲ್ಲಿ ''ಡಿಮ್ಯಾಂಡ್'' ಇದ್ದಾಗ, ''ಬ್ರ್ಯಾಂಡ್'' ವ್ಯಾಲ್ಯೂ ಹೆಚ್ಚಿಸಿಕೊಂಡು.. ಹೋದಲ್ಲಿ.. ಬಂದಲ್ಲಿ.. ''ಗಾರ್ಲ್ಯಾಂಡ್'' ಹಾರ ಹಾಕಿಸಿಕೊಳ್ಳುವರೆ ಹೆಚ್ಚು. ಹೇಗೂ ''ಓಡುವ ಕುದುರೆ'' ಎಂದು ಬಣ್ಣದ ಮಂದಿ ಇವರ ಮೇಲೆ ''ಬಾಜಿ'' ಕಟ್ತಾರೆ ಕೂಡ. ಆದರೆ.. ''ಸಮಯ'', ಕೆಲವೊಮ್ಮೆ ಸಮಸ್ಯೆಯನ್ನ ತಂದೊಡ್ಡುತ್ತದೆ. ಪುರಸೊತ್ತ್ ಇಲ್ಲದೇ ಕೆಲಸ ಮಾಡ್ತಿದ್ದವರ ಬದುಕಿನಲ್ಲಿಯೂ ''ಅವಕಾಶದ ಕೊರತೆ'' ಕಾಡುತ್ತೆ. ''ಕೃತಿ ಶೆಟ್ಟಿ'' ಬದುಕಿನಲ್ಲಿಯೂ ಸದ್ಯಕ್ಕೆ ಇದೇ ಆಗಿದೆ.

ಹೌದು. ''ಕೃತಿ ಶೆಟ್ಟಿ'' .. ಮೂರು ವರ್ಷದ ಹಿಂದೆ, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಬೇಡಿಕೆಯಲ್ಲಿದ್ದ ''ಮಂಗ್ಳೂರು ಮೀನು''. ''ಉಪ್ಪೇನ'' ಚಿತ್ರದ ಮೂಲಕ, ಸಿಹಿಯಾದ ಲಿಂಬು ಉಪ್ಪಿನಕಾಯಿಯನ್ನ ಸವಿದ ''ಕೃತಿ'', ಆ ನಂತರ ಎರಡು ಬ್ಲಾಕ್ ಬಸ್ಟರ್ ಚಿತ್ರಗಳನ್ನ ನೀಡುವುದರ ಮೂಲಕ ಬೇಡಿಕೆಯನ್ನ ಹೆಚ್ಚಿಸಿಕೊಂಡಿದ್ದರು. ''ಎರಡು ಕೋಟಿ'' ಕಡಿಮೆ ಒಂದು ರೂಪಾಯಿಯನ್ನೂ ತೆಗೆದುಕೊಳ್ಳಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಸುದ್ದಿಯಾಗಿದ್ದರು. ಸಂಚಲನವನ್ನೂ ಸೃಷ್ಟಿಸಿದ್ದರು.

Uppena Fame Krithi Shetty Reduces Her Remuneration Gave Offer To Producers

ಇನ್ನೂ.. ''ಬಿಕಿನಿ''ಯಲ್ಲಿ ಕಾಣಿಸಿಕೊಳ್ಳಬೇಕೆಂದರೆ ಎರಡಲ್ಲ ''ಐದು ಕೋಟಿ''ಯನ್ನ ಕೋಡಬೇಕೆಂದು, ಕೃತಿ ಶೆಟ್ಟಿ ಹಿಂದೆ ಪಟ್ಟು ಹಿಡಿದಿದ್ದರು ಕೂಡ. ''ಆಂಧ್ರ''ದಲ್ಲಿ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೀಡಾಗಿತ್ತು. ''ಹಣ''ದ ಮೇಲೆ ''ಕೃತಿ''ಗೆ ಇರುವ ''ಪ್ರೀತಿ''ಯನ್ನ ಕಂಡು ಟಾಲಿವುಡ್ಡಿಗೆ ಟಾಲಿವುಡ್ಡೇ ಬೆಚ್ಚಿ ಬಿದ್ದಿತ್ತು. ಆದರೆ ಆ ನಂತರ ಹಣದ ಮೇಲೆ ಕೃತಿ ಶೆಟ್ಟಿಗೆ ಇದ್ದ ಇದೇ ''ಮೋಹ-ದಾಹ'' ಇವರನ್ನ ಮೂಲೆಗುಂಪಾಗಿಸಿತು. ಬದಲಾದ ಕಾಲಘಟ್ಟ.. ''ಕೃತಿ ಶೆಟ್ಟಿ'' ಜಾಗಕ್ಕೆ ''ಶ್ರೀಲೀಲಾ'' ಬಂದು ಕುಳಿತುಕೊಂಡಾಗಿತ್ತು. ಇವತ್ತು.. ಕೃತಿ ಶೆಟ್ಟಿಗಿಂತ ಶ್ರೀಲೀಲಾ ಅವರ ''ಕಲೆ''ಗೆ ಹೆಚ್ಚಿನ ''ಬೆಲೆ'' ಟಾಲಿವುಡ್ ನಲ್ಲಿದೆ.

ಈ ಕಾರಣಕ್ಕೆ ಹೈರಾಣಾಗಿರುವ ಕೃತಿ ಶೆಟ್ಟಿ, ತೆಲುಗು ನಿರ್ಮಾಪಕರಿಗೆ ಭರ್ಜರಿ ''ಆಫರ್‌'' ನೀಡಿದ್ದಾರೆ ಎಂಬ ಸುದ್ದಿ, ಸದ್ಯಕ್ಕೆ.. ಹೈದ್ರಾಬಾದ್‌ನೆಲ್ಲೆಡೆ ಕೇಳಿ ಬರುತ್ತಿದೆ. ಹಿಂದೆ ಎರಡು ಕೋಟಿ ಸಂಭಾವನೆ ಕೊಟ್ರಷ್ಟೇ ಮುಂದಿನ ಮಾತು-ಕಥೆ ಅನ್ನುತ್ತಿದ್ದ ಕೃತಿ, ಇದೀಗ ''ಒಂದೂವರೆ ಕೋಟಿ'' ಕೊಡಿ ಸಾಕು ಎನ್ನುತ್ತಿದ್ದಾರೆ ಎಂಬ ಮಾತು ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ.

ಇಷ್ಟೇ ಅಲ್ಲ.. ಹಿಂದೆ ''ಟು ಪೀಸ್‌''ನಲ್ಲಿ ಕಾಣಿಸಿಕೊಳ್ಳಲು ಐದು ಕೋಟಿ ''ಫೀಸ್'' ಕೇಳ್ತಿದ್ದ ಕೃತಿ ಶೆಟ್ಟಿ, ಈಗ ''ಒಂದೂವರೆ ಕೋಟಿ ಸ್ಕಿಮ್‌''ನಡಿಯಲ್ಲಿಯೇ ''ಬಿಕಿನಿ'' ಹಾಕಿಕೊಳ್ಳಲು ರೆಡಿಯಾಗಿದ್ದಾರೆ ಎಂದು ಹೈದ್ರಾಬಾದ್‌ನ ಚಾರ್ ಮಿನಾರ್ ಮುಂದೆ ನಿಂತು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಕೃತಿ ಶೆಟ್ಟಿಯ ಈ ಆಫರ್‌ ಕೇಳಿ, ''ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಹಣ ಗ್ಯಾರಂಟಿ ಹೊಂದಿಸುತ್ತೇನೆ ಎಂದು ಅನೇಕ ನಿರ್ಮಾಪಕರು'' ನಿಜಾಮ್ ನಗರದ ಸುತ್ತ ಮುತ್ತ ಓಡಾಡುತ್ತಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

Uppena Fame Krithi Shetty Reduces Her Remuneration Gave Offer To Producers

ಒಟ್ನಲ್ಲಿ ''ಕೆಟ್ಟ ಮೇಲೆ ಬುದ್ದಿ ಬಂತು'' ಅನ್ನುವಂತೆ ಕೃತಿ ಶೆಟ್ಟಿ ಈಗ ತಮ್ಮ ''ಸಂಭಾವನೆ''ಯ ದರ ಕಡಿತಗೊಳಿಸಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಪಸರ್ ಆಗಿದೆ. ಎಲ್ಲವೂ ''ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ'' ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಕೈಯಲ್ಲಿ ಎರಡು ಮತ್ತೊಂದು ಸಿನಿಮಾವನ್ನ ಹೊಂದಿರುವ ಕೃತಿ ಶೆಟ್ಟಿ ಟಾಲಿವುಡ್‌ ''ರೇಸ್‌''ನಲ್ಲಿ ಮತ್ತೆ ಮುಂದೆ ಬರ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ

More from Filmibeat

English summary
According To The Latest Reports Uppena Fame Krithi Shetty Reduces Her Remuneration, Gave Offer To Producers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X