ಚಿತ್ರೀಕರಣದ ವೇಳೆ ಗಾಯಗೊಂಡು ನಟಿ ಊರ್ವಶಿ ರೌಟೇಲ ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟಿ ಊವರ್ಶಿ ರೌಟೇಲ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೆಲುಗು ನಟ ಬಾಲಕೃಷ್ಣ ಮುಂದಿನ ಚಿತ್ರದಲ್ಲಿ ಆಕೆ ನಟಿಸುತ್ತಿದ್ದರು. ಇನ್ನು ಹೆಸರಿಡದ ಈ ಚಿತ್ರದ ಕೆಲಸಗಳು NBK109 ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ನಡೆಯುತ್ತಿದೆ. ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಆಕ್ಷನ್ ಸನ್ನಿವೇಶವೊಂದರ ಚಿತ್ರೀಕರಣದ ವೇಳೆ ಊವರ್ಶಿ ಕಾಲಿಗೆ ಪೆಟ್ಟಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯದ ತೀವ್ರತೆ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬೇಕಿದೆ. ಬಾಲಿವುಡ್ ಬೆಡಗಿಗೆ ಪೆಟ್ಟಾಗಿರುವ ವಿಷಯ ತಿಳಿದು ಅಭಿಮಾನಿಗಳು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದಾರೆ. ಇನ್ನು NBK109 ಸಿನಿಮಾದಲ್ಲಿ ಊರ್ವಶಿ ರೌಟೇಲ ಜೊತೆ ತೆಲುಗು ನಟಿ ಚಾಂದಿನಿ ಚೌದರಿ ಕೂಡ ನಟಿಸುತ್ತಿದ್ದಾರೆ.

Urvashi Rautela Hospitalized After Injury on the Sets of telugu film NBK 109

ಅನಿಲ್ ರಾವಿಪುಡಿ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ವಿಲನ್ ಆಗಿ ನಟಿಸುತ್ತಿದ್ದಾರೆ. ಸಿತಾರ ಎಂಟರ್ಟೈನ್ಮೆಂಟ್ಸ್ ಹಾಗೂ ಫಾರ್ಚ್ಯೂನ್ ಫೋರ್ ಸಿನಿಮಾಸ್ ಸಂಸ್ಥೆಗಳು ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಲಕೃಷ್ಣ ಜನ್ಮದಿನದ ಸಂದರ್ಭದಲ್ಲಿ ಮೇಕರ್ಸ್ ಸಣ್ಣ ವೀಡಿಯೊ ಗ್ಲಿಂಪ್ಸ್ ರಿಲೀಸ್ ಮಾಡಿದ್ದರು. ಊರ್ವಶಿ ರೌಟೇಲ ಕನ್ನಡದ 'ಐರಾವತ' ಚಿತ್ರದಲ್ಲಿ ಕೂಡ ನಟಿಸಿದ್ದರು.

ಊರ್ವಶಿ ಒಳ್ಳೆ ಪಾತ್ರಗಳಲ್ಲಿ ನಟಿಸಿರುವುದಕ್ಕಿಂತ ಗ್ಲಾಮರ್ ಡಾಲ್ ಆಗಿ ಮಿಂಚಿರುವುದೇ ಹೆಚ್ಚು. ಶ್ರೀಮಂತರ ಮನೆ ಹುಡುಗಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ದೇಶ ವಿದೇಶದ ರ್ಯಾಂಪ್‌ ಶೋಗಳಲ್ಲಿ ಹೆಜ್ಜೆ ಹಾಕುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ರಿಷಬ್ ಶೆಟ್ಟಿ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಊರ್ವಶಿ ಪೋಸ್ಟ್ ಮಾಡಿದ್ದರು. ಇನ್ನು ಕ್ರಿಕೆಟಿಗ ರಿಷಬ್ ಪಂತ್ ಜೊತೆಗಿನ ಕಿರಿಕ್‌ನಿಂದಲೂ ಸುದ್ದಿ ಆಗಿದ್ದರು.

Urvashi Rautela Hospitalized After Injury on the Sets of telugu film NBK 109

'ಸಿಂಗ್‌ ಸಾಬ್‌ ದಿ ಗ್ರೇಟ್' ಸಿನಿಮಾ ಮೂಲಕ ಊರ್ವಶಿ ಚಿತ್ರರಂಗಕ್ಕೆ ಬಂದರು. 'ಹೇಟ್‌ ಸ್ಟೋರಿ-4', 'ದಿ ಲೆಜೆಂಡ್', 'ಜೆಎನ್‌ಯು' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. NBK109 ಜೊತೆಗೆ 'ದಿಲ್‌ ಹೈ ಗ್ರೇ' ಹಾಗೂ 'ಬ್ಲ್ಯಾಕ್ ರೋಸ್' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಬಾಲಯ್ಯ ಜೊತೆಗಿನ NBK109 ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬರಲಿದೆ.

More from Filmibeat

English summary
Urvashi Rautela hospitalized in Hyderabad after suffering fracture during NBK 109 shoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X