1000 ಕೋಟಿ ರೂ. ಕ್ಲಬ್ ಸೇರಿದ 'ಕಲ್ಕಿ 2898 AD'; ಬೈ 1 ಗೆಟ್ 1 ಟಿಕೆಟ್ ಫ್ರೀ ಆಫರ್.. ಆದ್ರೆ..
ಮಿಶ್ರ ಪ್ರತಿಕ್ರಿಯೆ ನಡುವೆಯೂ 'ಕಲ್ಕಿ 2898 AD' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈಗಾಗಲೇ ಸಿನಿಮಾ ಗಳಿಕೆ 1000 ಕೋಟಿ ರೂ. ದಾಟಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಕಳೆದೆರಡು ವಾರಗಳಿಂದ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗದಿರುವುದುವುದು 'ಕಲ್ಕಿ'ಗೆ ಪ್ಲಸ್ ಆಗಿದೆ.
ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಜೂನ್ 27ಕ್ಕೆ ತೆರೆಗೆ ಬಂದಿತ್ತು. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್‌ರಂತಹ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಎರಡು ಭಾಗಗಳಾಗಿ ಕಥೆಯನ್ನು ಕಟ್ಟಿಕೊಡುತ್ತಿದ್ದಾರೆ. ಮೊದಲ ಭಾಗ ನೋಡಿ ಸಿನಿರಸಿಕರು ಮೆಚ್ಚಿಕೊಂಡಿದ್ದಾರೆ. ಆದರೆ ಸಾಕಷ್ಟು ಜನರಿಗೆ ಸಿನಿಮಾ ಇಷ್ಟವಾಗುತ್ತಿಲ್ಲ. ಆದರೂ ಬೇರೆ ಯಾವುದೇ ಸಿನಿಮಾಗಳಿಲ್ಲದೇ ಈ ಸಿನಿಮಾ ನೋಡುವಂತಾಗಿದೆ.

ಮಹಾಭಾರತ ಹಾಗೂ ಕಲ್ಕಿ ಪುರಾಣದ ವಿಚಾರಗಳನ್ನು ಸೇರಿಸಿ ನಾಗ್ ಅಶ್ವಿನ್ ಈ ಚಿತ್ರ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕರ ಪ್ರಯತ್ನಕ್ಕೆ ಬಹುಪರಾಕ್ ಎನ್ನಲಾಗ್ತಿದೆ. ಆದರೆ ಮೊದಲಾರ್ಧ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಇಡೀ ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳಿ ಮುಗಿಸಿದ್ದರೆ ಚೆನ್ನಾಗಿತ್ತು ಎನ್ನುವ ಮಾತುಗಳು ಕೇಳಿಬರ್ತಿದೆ. ಒಂದಷ್ಟು ಟೀಕೆಗಳ ನಡುವೆಯೂ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಸಿನಿಮಾ ಒಳ್ಳೆ ಪ್ರದರ್ಶನ ಕಾಣುತ್ತಿರುವುದು ನಿಜ. ಆದರೆ 2 ವಾರಕ್ಕೆ 1000 ಕೋಟಿ ರೂ. ಗಳಿಕೆ ಎನ್ನುವುದನ್ನು ಕೆಲವರು ನಂಬಲು ಸಿದ್ಧರಿಲ್ಲ. ಆದರೆ ಚಿತ್ರತಂಡವೇ ಘೋಷಣೆ ಮಾಡಿರುವುದರಿಂದ ನಂಬಬೇಕೋ, ಬಿಡಬೇಕೋ ಗೊತ್ತಾಗುತ್ತಿಲ್ಲ. 'ಕಲ್ಕಿ 2898 AD' ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದು ಬಂಫರ್ ಆಫರ್ ಸಿಕ್ಕಿದೆ. ಅದೇನು ಅಂದ್ರೆ ಮಹಿಳೆಯರು ಹಾಗೂ ಕುಟುಂಬ ಸದಸ್ಯರು ಚಿತ್ರದ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಫ್ರೀ ಎಂದು ಘೋಷಿಸಲಾಗಿದೆ. ಆದರೆ ಇದು ಭಾರತ ದೇಶದಲ್ಲಿ ಅಲ್ಲ.
ಅಮೆರಿಕಾದ ಲಾಸ್ ಎಂಜೆಲ್ಸ್‌ನ ಬಿಗ್ಗೆಸ್ಟ್ ಐಮ್ಯಾಕ್ಸ್ ಸ್ಕ್ರೀನ್ ಟೀಸೀಎಲ್ ಚೈನೀಸ್ ಥಿಯೇಟರ್‌ನಲ್ಲಿ ಮಾತ್ರ ಈ ಆಫರ್ ಇದೆ. ಇದನ್ನು ನೋಡಿ ಭಾರತದಲ್ಲೂ ಈ ಆಫರ್ ಕೊಟ್ಟಿದ್ದರೆ ಚೆನ್ನಾಗಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಫ್ರೀ ಕೊಡೋದು ಇರಲಿ ಮೊದಲ ವಾರ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಈ ಬಗ್ಗೆ ಪ್ರೇಕ್ಷಕರು ಬೇಸರ ಹೊರ ಹಾಕಿದ್ದರು.
ಈ ವಾರ ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಹಾಗೂ ಅಕ್ಷಯ್‌ಕುಮಾರ್ 'ಸರ್ಫಿರಾ' ಸಿನಿಮಾಗಳು ಬಿಡುಗಡೆಯಾಗಿವೆ. ಎರಡೂ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ವಿಫಲವಾಗಿವೆ. ಹಾಗಾಗಿ ಇದು 'ಕಲ್ಕಿ 2898 AD' ಸಿನಿಮಾ ಗಳಿಕೆಗೆ ವರದಾನವಾಗಿದೆ. ಎರಡೂ ಸಿನಿಮಾಗಳು ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಕಡಿಮೆ ಕಲೆಕ್ಷನ್ ಮಾಡಿದೆ. ಚಿತ್ರಗಳಿಗೆ ಸಿಕ್ಕಿರುವ ರೆಸ್ಪಾನ್ಸ್ ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ.
'ಕಲ್ಕಿ 2898 AD' ಸೀಕ್ವೆಲ್ ಬಗ್ಗೆ ನಿರೀಕ್ಷೆ ಮೂಡಿದೆ. ಚಿತ್ರದ ಕ್ಲೈಮ್ಯಾಕ್ಸ್ ಅಷ್ಟರಮಟ್ಟಿಗೆ ಕ್ರೇಜ್ ಹುಟ್ಟಾಕ್ಕಿದೆ. ಅದರಲ್ಲೂ ಕರ್ಣನಾಗಿ ಪ್ರಭಾಸ್ ಆರ್ಭಟ ನೋಡಲು ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಮೊದಲ ಭಾಗಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನೋಡುತ್ತಿದ್ದರೆ 2ನೇ ಮುಂದಿನ ಭಾಗ ಮತ್ತಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡೋದು ಗ್ಯಾರೆಂಟಿ.


Click it and Unblock the Notifications











