Salaar: ಅಮೆರಿಕಾದಲ್ಲಿ ಆಗಲೇ ಶುರು ಸಲಾರ್ ಕಲೆಕ್ಷನ್ ಅಬ್ಬರ; ಜವಾನ್ ಹಿಂದಿಕ್ಕಿದ ನೀಲ್ ಚಿತ್ರ!

ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಸಲಾರ್ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಸೆಪ್ಟೆಂಬರ್ 28ರಂದು ಸಲಾರ್ ಬೆಳ್ಳಿಪರದೆಗೆ ಲಗ್ಗೆ ಇಡಲು ಸಲಾರ್ ತಯಾರಾಗಿದೆ. ಇನ್ನು ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಚಿತ್ರತಂಡ ಚಿತ್ರದ ಹೈಪ್ ಹೆಚ್ಚಿಸಲು ಟೀಸರ್ ಬಿಡುಗಡೆಗೊಳಿಸಿತ್ತು.

ಕಳೆದ ಜುಲೈ 6ರ ಬೆಳಗ್ಗೆ 5.12ಕ್ಕೆ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಸಲಾರ್ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್‌ನಲ್ಲಿ ನಾಯಕನಿಗೆ ವೃದ್ಧನಿಂದ ಬಿಲ್ಡಪ್ ಕೊಡಿಸುವುದು ಹಾಗೂ ಪ್ರಭಾಸ್ ಮುಖವನ್ನೇ ತೋರಿಸದೇ ಹೊಡೆದಾಡುವ ಒಂದಷ್ಟು ದೃಶ್ಯಗಳ ಕಟ್‌ಗಳು ಬಿಟ್ಟರೆ ಇನ್ಯಾವ ಅಂಶವನ್ನೂ ನಿರ್ದೇಶಕ ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿರಲಿಲ್ಲ. ಹೀಗೆ ಸಿಂಪಲ್ ಟೀಸರ್ ಬಿಡುಗೆಡ ಮಾಡುವ ಮೂಲಕವೇ ಪ್ರಶಾಂತ್ ನೀಲ್ ಸಲಾರ್ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದರು.

USA pre sale business: Salaar beats Jawan movie with huge margin

ಇನ್ನು ಸಲಾರ್ ಚಿತ್ರದ ಬಿಡುಗಡೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ವಿದೇಶದಲ್ಲಿ ಈಗಲೇ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ. ಹೌದು, ಯುಎಸ್ಎನಲ್ಲಿ ಸಲಾರ್ ಚಿತ್ರದ ಅಡ್ವಾನ್ಸ್ ಬುಕಿಂಗ್ ಅನ್ನು ಕಳೆದ ವಾರ ಆರಂಭಿಸಲಾಗಿದೆ. ಬುಕಿಂಗ್ ಆರಂಭವಾಗಿದ್ದೇ ತಡ ಅಮೆರಿಕಾದಲ್ಲಿ ನೆಲೆಸಿರುವ ಸಿನಿ ರಸಿಕರು ಸಲಾರ್ ಟಿಕೆಟ್‌ಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ.

ಪರಿಣಾಮವಾಗಿ ಸಲಾರ್ ಚಿತ್ರ ಅಡ್ವಾನ್ಸ್ ಬುಕಿಂಗ್‌ನಲ್ಲಿ ಶಾರುಖ್ ಖಾನ್ ನಟನೆಯ ಜವಾನ್ ಚಿತ್ರವನ್ನೇ ಹಿಂದಿಕ್ಕಿದೆ. ಇನ್ನು ಜವಾನ್ ಚಿತ್ರ ಸೆಪ್ಟೆಂಬರ್ ಮೊದಲ ವಾರ ಬಿಡುಗಡೆಯಾಗಲಿದ್ದು, ಸಲಾರ್ ಚಿತ್ರ ಸೆಪ್ಟೆಂಬರ್ ಕೊನೆಯ ವಾರ ಬಿಡುಗಡೆಯಾಗಲಿದೆ. ಹಾಗಿದ್ದರೂ ಸಹ ಸಲಾರ್ ಮುಂಗಡ ಬುಕಿಂಗ್‌ನಲ್ಲಿ ತನಗಿಂತ ಮುಂಚಿತವಾಗಿ ಬಿಡುಗಡೆಯಾಗಲಿರುವ ಚಿತ್ರ ಜವಾನ್ ಅನ್ನು ಹಿಂದಿಕ್ಕಿರುವುದು ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಶನ್‌ನ ಚಿತ್ರದ ಮೇಲೆ ಸಿನಿ ರಸಿಕರಿಗೆ ಇರುವ ನಿರೀಕ್ಷೆಗೆ ಹಿಡಿದ ಕೈಗನ್ನಡಿಯಾಗಿದೆ.

ಸೆಪ್ಟೆಂಬರ್ 7ರಂದು ತೆರೆಗೆ ಅಪ್ಪಳಿಸಲಿರುವ ಶಾರುಖ್ ಖಾನ್, ವಿಜಯ್ ಸೇತುಪತಿ ಹಾಗೂ ನಯನತಾರಾ ನಟನೆಯ ಮತ್ತು ಅಟ್ಲಿ ನಿರ್ದೇಶನದ ಜವಾನ್ ಚಿತ್ರ ಯುಎಸ್‌ಎನಲ್ಲಿ 1700 ಪ್ರದರ್ಶನಗಳಿಗಾಗಿ ಮುಂಗಡ ಬುಕಿಂಗ್ ಆರಂಭಿಸಿದ್ದು, ಈ ಪೈಕಿ 161000 ಯುಎಸ್ ಡಾಲರ್ ಕಲೆಕ್ಷನ್ ಮಾಡಿದೆ. ಅತ್ತ ಸಲಾರ್ ಕೇವಲ 400 ಶೋಗಳಿಗೆ ಮುಂಗಡ ಬುಕಿಂಗ್ ತೆರೆದಿದ್ದು 184000 ಯುಎಸ್ ಡಾಲರ್ ಕಲೆಕ್ಷನ್ ಅನ್ನು ಮಾಡಿದೆ.

More from Filmibeat

English summary
USA pre sale business: Salaar beats Jawan movie with huge margin
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X