ಸಿಎಂ ಜಗನ್ ಆದೇಶದಿಂದಾಗಿ ಬಂದ್ ಆದ ಪ್ರಭಾಸ್ ಒಡೆತನದ ದೇಶದ ದೊಡ್ಡ ಚಿತ್ರಮಂದಿರ!

ಆಂಧ್ರ ಪ್ರದೇಶದಲ್ಲಿ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರಗಳನ್ನು ಭಾರಿ ಮೊತ್ತದಲ್ಲಿ ಕಡಿತಗೊಳಿಸಿವೆ. ಈ ಬಗ್ಗೆ ಚಿತ್ರಮಂದಿರ ಮಾಲೀಕರು, ತೆಲುಗು ಚಿತ್ರರಂಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಜಗನ್ ಆದೇಶದಿಂದಾಗಿ ತೀವ್ರ ನಷ್ಟ ಅನುಭವಿಸುತ್ತಿರುವ ಭಾರತದ ಅತಿ ದೊಡ್ಡ ಚಿತ್ರಮಂದರ ಸಹ ಇಂದಿನಿಂದ ಚಿತ್ರ ಪ್ರದರ್ಶನ ನಿಲ್ಲಿಸಿದೆ.

ನಟ ಪ್ರಭಾಸ್ ಪಾಲುದಾರರಾಗಿ ಆಂಧ್ರದ ನೆಲ್ಲೂರಿನ ಸಮೀಪದ ಸುಲ್ಲೂರುಪೇಟದಲ್ಲಿ ವಿ ಎಪಿಕ್ ಹೆಸರಿನ ಅತಿದೊಡ್ಡ ಮೂರು ಸ್ಕ್ರೀನ್‌ನ ಚಿತ್ರಮಂದಿರವನ್ನು ಎರಡು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಆದರೆ ಇದೀಗ ಜಗನ್ ಸರ್ಕಾರದ ಆದೇಶದಿಂದಾಗಿ ಅತ್ಯಂತ ಕನಿಷ್ಟ ಬೆಲೆಗೆ ಟಿಕೆಟ್ ಮಾರಾಟ ಮಾಡಬೇಕಾಗಿರುವುದರಿಂದ ಚಿತ್ರಮಂದಿರಕ್ಕೆ ದೊಡ್ಡ ಮಟ್ಟದ ನಷ್ಟವಾಗುತ್ತದೆಂದು ಚಿತ್ರಮಂದಿರವನ್ನು ಸ್ಥಗಿತಗೊಳಿಸಲಾಗಿದೆ.

V EPIQ Theater Shuts Down Due To Andhra Governments Theater Ticket Price Order

ಜಗನ್ ಸರ್ಕಾರದ ಹೊಸ ಆದೇಶದ ಪ್ರಕಾರ ಹೈಟೆಕ್ ಚಿತ್ರಮಂದಿರವಾಗಿರುವ ವಿ-ಎಪಿಕ್ ಕೇವಲ 30 ರುಪಾಯಿ ಹಾಗೂ ಅದಕ್ಕಿಂತ ಕಡಿಮೆ ದರದಲ್ಲಿ ಮಾತ್ರವೇ ಟಿಕೆಟ್ ಮಾರಾಟ ಮಾಡಬೇಕಾಗಿದೆ. ಇಷ್ಟು ಕಡಿಮೆ ದರಕ್ಕೆ ಸಿನಿಮಾ ಪ್ರದರ್ಶಿಸಲು ಸಾಧ್ಯವಿಲ್ಲ, ಇದರಿಂದ ನಾವು ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತೇವೆ ಎಂದಿರುವ ಆಡಳಿತ ಮಂಡಳಿ ಇಂದಿನಿಂದ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಿದೆ.

ವಿ-ಎಪಿಕ್ ಚಿತ್ರಮಂದಿರವನ್ನು ಯುವಿ ಕ್ರಿಯೇಶನ್ಸ್ ಅವರು ನಿರ್ಮಿಸಿದ್ದರು. ಯುವಿ ಕ್ರಿಯೇಶನ್ಸ್‌ನಲ್ಲಿ ಪ್ರಭಾಸ್ ಸಹ ಪಾಲುದಾರರು. 2019ರ ಆಗಸ್ಟ್‌ನಲ್ಲಿ ಈ ಚಿತ್ರಮಂದಿರ ಲೋಕಾರ್ಪಣೆಗೊಂಡಿತ್ತು. ರಾಮ್ ಚರಣ್ ತೇಜ ಚಿತ್ರಮಂದಿರವನ್ನು ಉದ್ಘಾಟನೆ ಮಾಡಿದ್ದರು. ಮೊದಲ ಸಿನಿಮಾ ಆಗಿ ಪ್ರಭಾಸ್‌ರ 'ಸಾಹೋ' ಸಿನಿಮಾ ಪ್ರದರ್ಶನ ಕಂಡಿತ್ತು. ಆದರೆ ಚಿತ್ರಮಂದಿರ ಪ್ರಾರಂಭವಾದ ಕೆಲವೇ ತಿಂಗಳಲ್ಲಿ ಕೊರೊನಾ ಕಾರಣಕ್ಕೆ ಚಿತ್ರಮಂದಿರ ಬಂದ್ ಮಾಡಲಾಯ್ತು. ನಂತರ ಈಗ ಜಗನ್ ಸರ್ಕಾರದ ಹೊಸ ಆದೇಶದಿಂದ ಚಿತ್ರಮಂದಿರ ನಡೆಸಲು ಸಾಧ್ಯವಾಗದೆ ಬಂದ್ ಮಾಡಲಾಗುತ್ತಿದೆ.

ವಿ ಎಪಿಕ್ ಮಾತ್ರವೇ ಅಲ್ಲದೆ ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ವಿಶೇಷವಾಗಿ ಪಟ್ಟಣ ಪಂಚಾಯಿತಿ ಪ್ರದೇಶಗಳಲ್ಲಿನ ಚಿತ್ರಮಂದಿರಗಳನ್ನು ಮಾಲೀಕರುಗಳು ಬಂದ್ ಮಾಡುತ್ತಿದ್ದಾರೆ. ಕಡಿಮೆ ಟಿಕೆಟ್ ದರದಲ್ಲಿ ಚಿತ್ರಮಂದಿರ ನಡೆಸಲು ಸಾಧ್ಯವಿಲ್ಲವಾದ್ದರಿಂದ ಬಂದ್ ಮಾಡುತ್ತಿರುವುದಾಗಿ ಕಾರಣ ನೀಡಿದ್ದಾರೆ.

ಆಂಧ್ರ ಪ್ರದೇಶದ ನಗರ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿತ್ರಮಂದಿರಗಳಿಗೆ ಬೇರೆ-ಬೇರೆ ಟಿಕೆಟ್ ದರವನ್ನು ನಿಗದಿ ಪಡಿಸಿ ಸರ್ಕಾರವು ಆದೇಶ ಹೊರಡಿಸಿದ್ದು, ಅಷ್ಟೇ ಹಣವನ್ನು ಪಡೆಯಬೇಕೆಂದು ಸೂಚಿಸಿದೆ. ಇದೀಗ ಬಂದ್ ಆಗಿರುವ ವಿ-ಎಪಿಕ್ ಚಿತ್ರಮಂದಿರ ಸುಲ್ಲೂರುಪೇಟ ಎಂಬ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಸ್ಥಳದಲ್ಲಿರುವ ಕಾರಣ ಅತ್ಯಂತ ಕಡಿಮೆ ದರಕ್ಕೆ ಟಿಕೆಟ್ ಮಾರಾಟ ಮಾಡಬೇಕಿದೆ.

ಸಿಎಂ ಜಗನ್ ಮೋಹನ್ ರೆಡ್ಡಿ ಹೊಸ ಆದೇಶದಂತೆ, ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರೀಮಿಯಂ ಟಿಕೆಟ್ ದರ 250ರೂ ರು ದಾಟುವಂತಿಲ್ಲ. ಡಿಲಕ್ಸ್ ವಿಭಾಗದ ದರ 150 ರು. ದಾಟುವಂತಿಲ್ಲ. ಎಕಾನಮಿ ಕ್ಲಾಸ್ ಟಿಕೆಟ್ 75 ರು. ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ರು ದಾಟುವಂತಿಲ್ಲ, ಡಿಲಕ್ಸ್ 60 ರು. ಹಾಗೂ ಎಕಾನಮಿ 40 ರು ದಾಟುವಂತಿಲ್ಲ. ನಾನ್ ಎಸಿ ಚಿತ್ರಮಂದಿರಗಳಲ್ಲಿ, ಪ್ರೀಮಿಯಂ ಟಿಕೆಟ್ ದರ 60, ಡಿಲಕ್ಸ್ 40, ಎಕಾನಮಿ 20 ಇರಬೇಕು ಎಂದು ಆದೇಶಿಸಲಾಗಿದೆ.

ಅದೇ ಮುನ್ಸಿಪಾಲಿಟಿ ಪ್ರಾಂಥ್ಯದಲ್ಲಿ ಮಲ್ಟಿಫ್ಲೆಕ್ಸ್‌ಗಳ ಪ್ರೀಮಿಯಂ ಟಿಕೆಟ್ ದರ 150, ಡಿಲಕ್ಸ್ 100, ಎಕಾನಮಿ 60 ರುಗಳನ್ನು ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 70 ರು, ಡಿಲಕ್ಸ್ 50 ರು, ಎಕಾನಮಿ 30 ರು ದಾಟುವಂತಿಲ್ಲ. ನಗರ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್‌ನ ಪ್ರೀಮಿಯಂ ಟಿಕೆಟ್ ದರ 120 ರು, ಡಿಲಕ್ಸ್ ಟಿಕೆಟ್ ದರ 80 ರು, ಎಕಾನಮಿ 40 ರುಪಾಯಿ ಬೆಲೆ ದಾಟುವಂತಿಲ್ಲ. ಎಸಿ ಹೊಂದಿದ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 35 ರು, ಡಿಲಕ್ಸ್ 25 ರು, ಎಕಾನಮಿ 15 ರು ದಾಟುವಂತಿಲ್ಲ. ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಮಲ್ಟಿಫ್ಲೆಕ್ಸ್‌ ಪ್ರೀಮಿಯಂ ಟಿಕೆಟ್ ಬೆಲೆ 80 ರು, ಡಿಲಕ್ಸ್ 50 ರು, ಎಕಾನಮಿ 30 ರು. ಎಸಿ ಹೊಂದಿದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 20 ರು. ಡಿಲಕ್ಸ್ 15 ರು, ಎಕಾನಮಿ 10 ರು. ಇನ್ನು ಎಸಿ ಇರದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 15, ಡಿಲಕ್ಸ್ 10, ಎಕಾನಮಿ ಕ್ಲಾಸ್‌ನ ಟಿಕೆಟ್ ದರ 5 ರುಪಾಯಿ ದಾಟುವಂತಿಲ್ಲ.

More from Filmibeat

English summary
Nelluru's V EPIQ theater shuts down its operations due to Andhra Pradesh government's theater ticket price order. Vi EPIQ said we can not run our theater in low ticket price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X