For Quick Alerts
  ALLOW NOTIFICATIONS  
  For Daily Alerts

  ಉದ್ಯಮಿ ಕೈ ಹಿಡಿಯಲಿದ್ದಾರೆ ಅಂಜಲಿ? ಮದುವೆ ಬಗ್ಗೆ ನಟಿ ಏನಂದ್ರು?

  |

  ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಿದ ವಕೀಲ್ ಸಾಬ್ ಚಿತ್ರ ತೆರೆಕಂಡು ಅದ್ಭುತ ಯಶಸ್ಸು ಪಡೆದುಕೊಂಡಿದೆ. ಈ ಚಿತ್ರದಲ್ಲಿ ಅಂಜಲಿ, ನಿವೇತಾ ಥಾಮಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ವಕೀಲ್ ಸಾಬ್ ಸಕ್ಸಸ್ ಬೆನ್ನಲ್ಲೆ ನಟಿ ಅಂಜಲಿ ಮದುವೆ ವಿಚಾರ ಸುದ್ದಿಗೆ ಬಂದಿದೆ.

  ಅಂಜಲಿ ಶೀಘ್ರದಲ್ಲಿ ಮದುವೆಯಾಗಲಿದ್ದು, ಅದಕ್ಕೆ ತಯಾರಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಚೆನ್ನೈ ಉದ್ಯಮಿಯೊಬ್ಬರ ಜೊತೆ ಅಂಜಲಿ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಗಿರಿಕಿ ಹೊಡೆಯುತ್ತಿದೆ.

  'ತಮಿಳು ಮನೆಯ ಸೊಸೆ ಆಗಬೇಕು ಅನ್ನೋದು ನನ್ನ ಆಸೆ'- ರಶ್ಮಿಕಾ ಮಂದಣ್ಣ'ತಮಿಳು ಮನೆಯ ಸೊಸೆ ಆಗಬೇಕು ಅನ್ನೋದು ನನ್ನ ಆಸೆ'- ರಶ್ಮಿಕಾ ಮಂದಣ್ಣ

  ಆದರೆ, ಮದುವೆ ಸುದ್ದಿ ನಿರಾಕರಿಸಿರುವ 34 ವರ್ಷದ ಅಂಜಲಿ, ''ನಾನು ವೃತ್ತಿ ಜೀವನದ ಬಗ್ಗೆ ಹಚ್ಚು ಗಮನ ಕೊಡುತ್ತಿದ್ದೇನೆ, ಮದುವೆ ಬಗ್ಗೆ ನಾನು ಯೋಚನೆ ಮಾಡಿಲ್ಲ'' ಎಂದಿದ್ದಾರೆ.

  ''ಪ್ರಸ್ತುತ ನಾನು ನನ್ನ ವೃತ್ತಿ ಜೀವನದ ಬಗ್ಗೆ ಫೋಕಸ್ ಮಾಡ್ತಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ. ಕಾದಂಬರಿ ಆಧರಿತ ಪಾತ್ರ ನಿರ್ವಹಿಸುತ್ತ ಗಮನ ಇದೆ. ಮದುವೆ ಸದ್ಯಕ್ಕೆ ನನ್ನ ಮುಂದಿಲ್ಲ'' ಎಂದು ಅಂಜಲಿ ಸ್ಪಷ್ಟನೆ ನೀಡಿದ್ದಾರೆ.

  ನಟಿ ಅಂಜಲಿ ಮದುವೆ ವಿಚಾರಕ್ಕೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆಯೂ ಹಲವು ಬಾರಿ ಹೆಡ್‌ಲೈನ್ ಆಗಿದ್ದರು.

  ಅಂಜಲಿ ಮುಂದಿನ ಚಿತ್ರಗಳು

  ಕೊರೊನಾ ಲಾಕ್‌ಡೌನ್ ಕಾರಣದಿಂದ ಬ್ರೇಕ್‌ನಲ್ಲಿರುವ ಅಂಜಲಿ ಕರ್ರಿ ಬಾಲಾಜಿ ನಿರ್ದೇಶನದ ಆನಂದ ಭೈರವಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿಲ್ ರವಿಪುಡಿಯ ಎಫ್‌3 ಚಿತ್ರದಲ್ಲಿ ವೆಂಕಟೇಶ್ ಮತ್ತು ವರುಣ್ ತೇಜ, ತಮನ್ನಾ, ಮೆಹ್ರಿನ್ ಜೊತೆ ಅಂಜಲಿಯೂ ಇರಲಿದ್ದಾರೆ.

  ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಪಾತ್ರ ಮಾಡ್ತಿರೋ ನಟಿ ಯಾರು ಗೊತ್ತಾ? | Filmibeat Kannada

  ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆ ಶಿವಪ್ಪ ಎಂಬ ಸಿನಿಮಾದಲ್ಲೂ ಅಂಜಲಿ ನಟಿಸುತ್ತಿದ್ದಾರೆ. ತಮಳಿನಲ್ಲಿ ವೆಂಕಟ್ ಪ್ರಭು ಪ್ರಾಜೆಕ್ಟ್‌ವೊಂದಕ್ಕೂ ಸಹಿ ಮಾಡಿದ್ದಾರೆ.

  English summary
  South Indian Famous Actress Anjali to tie the knot soon with Chennai based businessman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X