ಗುರುತೇ ಸಿಗದಷ್ಟು ಬದಲಾದ ನಟಿ ನಿವೇತಾ ಥಾಮಸ್; ಅಭಿಮಾನಿಗಳು ಶಾಕ್
ತಮಿಳು ನಟಿ ನಿವೇತಾ ಥಾಮಸ್ ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. '35 ಚಿನ್ನ ಕಥ ಕಾದು' ಎನ್ನುವ ತೆಲುಗು ಚಿತ್ರದಲ್ಲಿ ಆಕೆ ನಟಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಆಗಿ ಭಾಗಿ ಆಗುತ್ತಿದ್ದಾರೆ.
ಬಹಳ ದಿನಗಳ ನಂತ್ರ ನಿವೇತಾ ಥಾಮಸ್ ಅವರನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅರೇ ನಿವೇತಾ ಯಾಕೆ ಇಷ್ಟು ದಪ್ಪ ಆಗಿಬಿಟ್ರು, ಆಕೆಗೆ ಏನಾದರೂ ಆರೋಗ್ಯ ಸಮಸ್ಯೆನಾ? ಅಂತೆಲ್ಲಾ ತಲೆಕೆಡಿಸಿಕೊಂಡಿದ್ದಾರೆ. ಈ ಹಿಂದೆ ತೆಲುಗಿನ 'ಶಾಕಿನಿ ಡಾಕಿನಿ' ಎನ್ನುವ ಚಿತ್ರದಲ್ಲಿ ನಿವೇತಾ ಬಣ್ಣ ಹಚ್ಚಿದ್ದರು. ಸದ್ಯ '35 ಚಿನ್ನ ಕಥ ಕಾದು' ಚಿತ್ರದ ಪ್ರಚಾರದ ವೇಳೆ ಆಕೆಯನ್ನು ನೋಡಿದವರು ಹುಬ್ಬೇರಿಸಿದ್ದಾರೆ.

ನಿವೇತಾ ಯಾಕೆ ಇಷ್ಟು ದಪ್ಪ ಆಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಿವೇತಾ ಛಾಯಾಗ್ರಾಹಕರಿಗೆ ಪೋಸ್ ಕೊಟ್ಟಿರುವ ವೀಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ತರಹೇವಾರಿ ಕಾಮೆಂಟ್ಸ್ ಬರುತ್ತಿದೆ. ನಿವೇತಾ ಚಿತ್ರದಲ್ಲಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳ ಶಿಕ್ಷಣದ ಬಗ್ಗೆ ಈ ಸಿನಿಮಾ ಕಥೆ ಸಾಗುತ್ತದೆ ಎನ್ನಲಾಗುತ್ತದೆ. ಎಲ್ಲಾ ತರಹದ ಪಾತ್ರ ಮಾಡಬೇಕು ಎಂದು ಈ ಪಾತ್ರವನ್ನು ಸವಾಲಾಗಿ ಸ್ವೀಕರಿಸಿರುವುದಾಗಿ ಹೇಳಿದ್ದಾರೆ.
ಇಷ್ಟು ಬರೀ ಮಾಡ್ರನ್ ಲುಕ್‌ನಲ್ಲೇ ನಿವೇತಾ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. '35 ಚಿನ್ನ ಕಥ ಕಾದು' ಚಿತ್ರದಲ್ಲಿ ಮಕ್ಕಳ ತಾಯಿಯಾಗಿ ಸೀರೆ ಉಟ್ಟು ಡೀ-ಗ್ಲಾಮರಸ್ ರೋಲ್‌ನಲ್ಲಿ ಮಿಂಚಿದ್ದಾರೆ. ಪಾತ್ರಕ್ಕಾಗಿಯೇ ಆಕೆ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ 'ಸೈಜ್ ಜೀರೊ' ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ತೂಕ ಹೆಚ್ಚಿಸಿಕೊಳ್ಳುವ ಸಾಹಸ ಮಾಡಿದ್ದರು. ಆದರೆ ಬಳಿಕ ಸಣ್ಣ ಆಗಿ ಮೊದಲಿನ ಪಿಜಿಕ್ ವಾಪಸ್ ಪಡೆಯಲು ಸಾಧ್ಯವಾಗಲಿಲ್ಲ.
ಸಾಮಾನ್ಯವಾಗಿ ನಾಯಕ ನಟರು ಹೀಗೆ ಪಾತ್ರಕ್ಕಾಗಿ ದೇಹದ ತೂಕ ಹೆಚ್ಚಿಸಿಕೊಳ್ಳುವುದು, ಸಣ್ಣ ಆಗುವುದು ಮಾಡುತ್ತಿರುತ್ತಾರೆ. ಇತ್ತೀಚೆಗೆ ಕೆಲ ನಟಿಯರು ಇಂತಹ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಹಾಮೋರ್ನ್ ಸಮಸ್ಯೆಯಿಂದಲೂ ಕೆಲವೊಮ್ಮೆ ಹೆಣ್ಣು ಮಕ್ಕಳು ದಿಢೀರ್ ದಪ್ಪ ಆಗಿಬಿಡುವ ಸಾಧ್ಯತೆ ಇರುತ್ತದೆ. ನಿವೇತಾ ಮತ್ತೆ ಸಣ್ಣ ಆಗಿ ತೂಕ ಇಳಿಸುವ ಪ್ರಯತ್ನ ಆರಂಭಿಸಲಿದ್ದಾರೆ.
'35 ಚಿನ್ನ ಕಥ ಕಾದು' ಚಿತ್ರದಲ್ಲಿ ಗೃಹಿಣಿ ಆಗಿ ನಟಿಸಿರುವ ಬಗ್ಗೆ ನಿವೇತಾ ಮಾತನಾಡಿದ್ದಾರೆ. ಹೆಣ್ಣು ಮಕ್ಕಳಿಗೆ 20 ವರ್ಷ ವಯಸ್ಸಾಗುತ್ತಿದ್ದಂತೆ ಯಾವಾಗ ಮದುವೆ ಎಂದು ಕೇಳುತ್ತಾರೆ. ಹಾಗಿರುವಾಗನನಗೆ 20 ದಾಟಿದ ಮೇಲೆ ಈ ಪಾತ್ರ ಮಾಡುವುದರಲ್ಲಿ ತಪ್ಪೇನಿದೆ. ಇದು ನನ್ನ ಮುಂದಿನ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಅಂದುಕೊಳ್ಳಲ್ಲ. ಎಲ್ಲಾ ತರಹದ ಪಾತ್ರಗಳಲ್ಲಿ ನಟಿಸಬೇಕು. ಹಾಗಾಗಿ ಇಂತಹ ಪಾತ್ರ ಒಪ್ಪಿಕೊಂಡೆ ಎಂದಿದ್ದಾರೆ.
'ಜಿಲ್ಲಾ', 'ಜೆಂಟಲ್‌ಮನ್', 'ಜೈ ಲವಕುಶ', 'ಪಾಪನಾಶನಂ', 'ದರ್ಬಾರ್', 'ವಕೀಲ್ ಸಾಬ್' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಿವೇತಾ ಥಾಮಸ್ ನಟಿಸಿದ್ದಾರೆ. ತಮಿಳು ಕಿರುತೆರೆ ಕಾರ್ಯಕ್ರಮಗಳಲ್ಲಿ ಸಹ ಮಿಂಚಿದ್ದಾರೆ. ಬಾಲನಟಿಯಾಗಿಯೇ ಕೇರಳ ರಾಜ್ಯಪ್ರಶಸ್ತಿ ಪಡೆದಿದ್ದ ನಿವೇತಾ ಬಳಿಕ ನಾಯಕಿಯಾಗಿ ಮೊದಲ ಚಿತ್ರಕ್ಕೆ ಸೈಮಾ ಪ್ರಶಸ್ತಿ ಪಡೆದಿದ್ದರು. ಇನ್ನು ಆಕೆ ದಪ್ಪ ಆಗಿರುವುದನ್ನು ನೋಡಿದ ಕೆಲ ಅಭಿಮಾನಿಗಳು ಈಗ ಕೂಡ ಕ್ಯೂಟ್ ಆಗಿ ಇದ್ದಾರೆ ಎಂದು ಕಾಮೆಂಟ್ ಮಾಡ್ತಿದ್ದಾರೆ.


Click it and Unblock the Notifications











