'ವಕೀಲ್ ಸಾಬ್' ಹೊಸ ಪೋಸ್ಟರ್ ಬಿಡುಗಡೆ: ಜಾಲಿ ಲುಕ್‌ನಲ್ಲಿ ಪವನ್ ಕಲ್ಯಾಣ್
ನಟ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾಕ್ಕಾಗಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಆದರೆ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬರುತ್ತಿದೆ.
ಆದರೆ ಹೊಸ ವರ್ಷವಾದ ಇಂದು ಸಿನಿಮಾದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಇಷ್ಟು ದಿನ ಗಡ್ಡ ಬಿಟ್ಟುಕೊಂಡು, ಕರಿ ಕೋಟ್‌ನಲ್ಲಿ 'ವಕೀಲ್ ಸಾಬ್' ಪವನ್ ನೋಡಿದ್ದ ಅಭಿಮಾನಿಗಳಿಗೆ ಪವನ್ ರ ಹೊಸ ಲುಕ್ ಸಖತ್ ಹಿಡಿಸಿದೆ.
ಪವನ್ ಕಲ್ಯಾಣ್ ಹಾಗೂ ನಟಿ ಶ್ರುತಿ ಹಾಸನ್ ಬೈಕ್‌ನಲ್ಲಿ ಜಾಲಿ ರೈಡ್ ಹೋಗುತ್ತಿರುವ ಚಿತ್ರ ಒಳಗೊಂಡ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ 'ವಕೀಲ್ ಸಾಬ್' ತಂಡ. ಪೋಸ್ಟರ್‌ನಲ್ಲಿ ಸಖತ್ ಯಂಗ್ ಆಗಿ ಕಾಣುತ್ತಿದ್ದಾರೆ ಪವನ್ ಕಲ್ಯಾಣ್.

ವಕೀಲ್ ಸಾಬ್ ಸಿನಿಮಾದಲ್ಲಿ ಮೊದಲು ಪ್ರೇಮಿಯಾಗಿ ನಂತರ ಭಗ್ನಪ್ರೇಮಿಯಾಗಿ ಅದರ ನಂತರ ಮಹಿಳೆಯರ ಪರ ನಿಲ್ಲುವ ವಕೀಲನಾಗಿ ಒಟ್ಟು ಮೂರು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪವನ್ ಕಲ್ಯಾಣ್.
ಇದೇ ದಿನ ಸಿನಿಮಾದ ಟೀಸರ್ ಬಗ್ಗೆ ಅಪ್‌ಡೇಟ್ ಒಂದನ್ನು ನೀಡಿದೆ ಚಿತ್ರತಂಡ. ಸಿನಿಮಾದ ಮೊದಲ ಟೀಸರ್ ಇದೇ ತಿಂಗಳ ಸಂಕ್ರಾಂತಿ ಹಬ್ಬದಂದು ಬಿಡುಗಡೆ ಆಗಲಿದೆಯಂತೆ.
Recommended Video
ವಕೀಲ್ ಸಾಬ್ ಸಿನಿಮಾವು ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್. ಆದರೆ ಆ ಸಿನಿಮಾದಿಂದ ಕತೆಯ ಎಳೆಯನ್ನಷ್ಟೇ ಎತ್ತಿಕೊಂಡು ಹಲವು ಬದಲಾವಣೆಗಳೊಂದಿಗೆ, ಇನ್ನಷ್ಟು ಮನರಂಜನೆ, ಮಸಾಲದೊಂದಿಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.


Click it and Unblock the Notifications











