For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ-2' ದಾಖಲೆ ಮುರಿದ ಪವನ್ ಕಲ್ಯಾಣ್ 'ವಕೀಲ್ ಸಾಬ್'

  |

  ಮೂರು ವರ್ಷದ ನಂತರ ಪವರ್ ಸ್ಟಾರ್ ಪವನ್ ಕಲ್ಯಾಣ್ ಟಾಲಿವುಡ್‌ಗೆ ಮರಳಿದ್ದಾರೆ. ರಾಜಕೀಯದಲ್ಲಿ ಹಿನ್ನಡೆ ಅನುಭವಿಸಿದ 'ವಕೀಲ್ ಸಾಬ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪುನರಾಗಮಿಸುತ್ತಿದ್ದಾರೆ.

  ಏಪ್ರಿಲ್ 9 ರಂದು ವಕೀಲ್ ಸಾಬ್ ಸಿನಿಮಾ ತೆರೆಕಾಣುತ್ತಿದೆ. ಅದಕ್ಕೂ ಮುಂಚೆ ಟ್ರೈಲರ್ ರಿಲೀಸ್ ಆಗಿದ್ದು, ತೆಲುಗು ಇಂಡಸ್ಟ್ರಿಯ ಹಳೆ ದಾಖಲೆಗಳು ಪುಡಿ ಪುಡಿ ಮಾಡಿದೆ ಎಂದು ವರದಿಯಾಗಿದೆ. ಅದರಲ್ಲೂ ಬಾಹುಬಲಿ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  ಪವನ್ ಕಲ್ಯಾಣ್ ಟ್ರೈಲರ್ ನೋಡಲು ಅಭಿಮಾನಿಗಳ ನೂಕುನುಗ್ಗಲು; ಚಿತ್ರಮಂದಿರದ ಗ್ಲಾಸ್ ಪುಡಿಪುಡಿಪವನ್ ಕಲ್ಯಾಣ್ ಟ್ರೈಲರ್ ನೋಡಲು ಅಭಿಮಾನಿಗಳ ನೂಕುನುಗ್ಗಲು; ಚಿತ್ರಮಂದಿರದ ಗ್ಲಾಸ್ ಪುಡಿಪುಡಿ

  ಬಾಹುಬಲಿ 2 ಟ್ರೈಲರ್ ಹೆಸರಿನಲ್ಲಿದ್ದ ಆಲ್ ಟೈಂ ದಾಖಲೆಯನ್ನು ವಕೀಲ್ ಸಾಬ್ ಮುರಿದಿದೆ. ರಾಜಮೌಳಿ ದಾಖಲೆ ಹಿಂದಿಕ್ಕಲು ಪವರ್ ಸ್ಟಾರ್ ಮತ್ತೆ ಬರಬೇಕಾಯಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿ ಕೊಂಡಾಡುತ್ತಿದ್ದಾರೆ.

  ಲೈಕ್ಸ್ ವಿಚಾರದಲ್ಲಿ ಬಾಹುಬಲಿ 2 ಟ್ರೈಲರ್ 24 ಗಂಟೆಯಲ್ಲಿ 497 K ಲೈಕ್ ಪಡೆದಿತ್ತು. ಇದೀಗ, ವಕೀಲ್ ಸಾಬ್ ಟ್ರೈಲರ್ 24 ಗಂಟೆಯಲ್ಲಿ 1 ಮಿಲಿಯನ್ ಲೈಕ್ ಸಂಪಾದಿಸಿದೆ. ಲೈಕ್ಸ್ ವಿಚಾರದಲ್ಲಿ ಬಾಹುಬಲಿಯನ್ನು ಹಿಂದಿಕ್ಕಿ ವಕೀಲ್ ಸಾಬ್ ದಾಖಲೆ ನಿರ್ಮಿಸಿದೆ.

  ಆದರೆ, ಟ್ರೈಲರ್ ವಿಚಾರದಲ್ಲಿ ಬಾಹುಬಲಿ ದಾಖಲೆ ಹಾಗೆ ಉಳಿದಿದೆ. ರಿಯಲ್ ಟೈಂ ವೀಕ್ಷಣೆಯಲ್ಲಿ ಬಾಹುಬಲಿ 2 ಟ್ರೈಲರ್ 24 ಗಂಟೆಯಲ್ಲಿ 21.81 ಮಿಲಿಯನ್ ವೀಕ್ಷಣೆ ಕಂಡಿದೆ. ವಕೀಲ್ ಸಾಬ್ ಟ್ರೈಲರ್ 18.05 ಮಿಲಿಯನ್ ವೀಕ್ಷಣೆ ಕಂಡಿದೆ. ಹಾಗಾಗಿ, ಬಾಹುಬಲಿ ನಂತರದ ಎರಡನೇ ಸ್ಥಾನದಲ್ಲಿ ಪವನ್ ಸಿನಿಮಾ ಇದೆ.

  ''Are you a virgin?'' ಪ್ರಶ್ನೆ ಕೇಳುತ್ತಿದ್ದಾರೆ ಪವನ್ ಕಲ್ಯಾಣ್!''Are you a virgin?'' ಪ್ರಶ್ನೆ ಕೇಳುತ್ತಿದ್ದಾರೆ ಪವನ್ ಕಲ್ಯಾಣ್!

  ಯುವರತ್ನ ಸಿನಿಮಾದಲ್ಲಿ ಅಪ್ಪು ಎಂಟ್ರಿಗೆ ಪ್ರೇಕ್ಷಕರು ಫಿದಾ!! | Filmibeat Kannada

  ಇನ್ನುಳಿದಂತೆ ವೇಣು ಶ್ರೀರಾಮ್ ನಿರ್ದೇಶನದ ವಕೀಲ್ ಸಾಬ್ ಚಿತ್ರಕ್ಕೆ ಬೋನಿ ಕಪೂರ್, ದಿಲ್ ರಾಜು ಬಂಡವಾಳ ಹಾಕಿದ್ದಾರೆ. ನಿವೇತಾ ಥಾಮಸ್, ಅಂಜಲಿ, ಅನನ್ಯ ನಾಗಲ್ಲ, ಪ್ರಕಾಶ್ ರಾಜ್, ಶ್ರುತಿ ಹಾಸನ್, ನರೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಹಿಂದಿಯ ಪಿಂಕ್ ಚಿತ್ರದ ತೆಲುಗು ರೀಮೇಕ್ ಇದಾಗಿದೆ.

  English summary
  Pawan Kalyan Starrer Vakeel Saab movie trailer breaks Baahubali 2 trailer record.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X