ಮಹಿಳೆಯರ ಬ್ರಾ* ಹೊರಗಡೆ ಕಂಡ್ರೆ ಏನಾಗಿಬಿಡುತ್ತೆ? ನಟಿ ವರಲಕ್ಷ್ಮಿ ಶರತ್‌ಕುಮಾರ್ ಪ್ರಶ್ನೆ

ಮಹಿಳೆಯರ ವಸ್ತ್ರಧಾರಣೆ ಬಗ್ಗೆ ಇತ್ತೀಚೆಗೆ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಟಿಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧರಿಸುವ ಬಟ್ಟೆ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತು. ಇದೇ ವಿಚಾರದ ಬಗ್ಗೆ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಹೇಳಿಕೆ ಸಖತ್ ವೈರಲ್ ಆಗ್ತಿದೆ.

ವರಲಕ್ಷ್ಮಿ ಶರತ್‌ಕುಮಾರ್ ನಿರ್ಮಿಸಿ ನಿರ್ದೇಶಿಸಿ ನಟಿಸಿದ 'ಸರಸ್ವತಿ' ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಚಿತ್ರದ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಆಕೆ ಭಾಗಿ ಆಗಿದ್ದರು. Movies4u Max ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು. ಮಹಿಳೆಯರ ವಸ್ತ್ರಧಾರಣೆ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದರು. ಆ ವೀಡಿಯೋ ವೈರಲ್ ಆಗುತ್ತಿದೆ.

Varalakshmi Sarathkumar Sparks Debate with Statement on Women s Clothing Amid Controversy

"ನಿಮಗೆ ಒಬ್ಬ ತಂಗಿ ಇದ್ದರೆ. ಆಕೆ ಒಂದು ಶಾರ್ಟ್ಸ್ ಹಾಕಿಕೊಂಡು ಓಡಾಡುತ್ತಾಳೆ.. ಆಕೆಯ ಮೇಲೆ ಅತ್ಯಾ*ಚಾರ ಮಾಡ್ಬೇಕು ಅಂತ ನಿಮಗೆ ಅನ್ಸುತ್ತಾ? ಇಲ್ಲ ಅಲ್ವಾ.. ಹಾಕಿದ್ದ ಮೇಲೆ ಬೇರೆಯವರು ಧರಿಸುವ ಬಟ್ಟೆ ಬಗ್ಗೆ ಹೇಗೆ ದೂಷಿಸುತ್ತೀರಾ? ಎಂದು ವರಲಕ್ಷ್ಮಿ ಶರತ್‌ಕುಮಾರ್ ಪ್ರಶ್ನಿಸಿದ್ದಾರೆ.

ಕೆಲ ಪುರುಷರು ಕೂಡ ಚಡ್ಡಿ ಮೇಲೆ ಜೀನ್ಸ್ ಪ್ಯಾಂಟ್ ತೊಟ್ಟಿರುತ್ತಾರೆ. ಬಗ್ಗಿದರೆ ಚಡ್ಡಿ ಕಾಣಿಸುತ್ತೆ.. ಹಾಗಂತ ಅವರ ಮೇಲೆ ನಾನು ಬೀಳೋಕ್ಕಾಗುತ್ತಾ ಎಂದು ವರಲಕ್ಷ್ಮಿ ಕೇಳಿದ್ದಾರೆ. "ಪುರುಷರು ಧರಿಸುವ ಚಡ್ಡಿ ಕಂಡರೆ ಪರವಾಗಿಲ್ಲ.. ಆದ್ರೆ ಮಹಿಳೆಯರ ಬ್ರಾ* ಸ್ಟ್ರಿಪ್ ಕಂಡುಬಿಟ್ಟರೆ ಅಯ್ಯಯ್ಯೋ ಎಲ್ಲಾ ಹೋಯ್ತು ಎನ್ನುವಂತೆ ಹೌರಾರುತ್ತಾರೆ. ಅದರಲ್ಲೇನಿದೆ.. ಅದು ಕೂಡ ಒಂದು ಒಳಉಡುಪು ಅಷ್ಟೇ ಅಲ್ವಾ? ಈ ದ್ವಂದ್ವ ಯಾಕೆ? ಅವರಿಷ್ಟದ ಬಟ್ಟೆ ಅವ್ರು ಧರಿಸುತ್ತಾರೆ. ಸಹೋದರಿ, ತಾಯಿ ವಿಚಾರದಲ್ಲಿ ತಪ್ಪು ಅಲ್ಲ ಅಂದಮೇಲೆ ಬೇರೆಯವರ ಬಗ್ಗೆ ಯಾಕೆ ಹೀಗೆ ಮಾತನಾಡುತ್ತೀರಾ?" ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಸೌಂದರ್ಯದ ವರ್ಣನೆ ಸರಿ.. ವಾಹ್ ಎಷ್ಟು ಚೆನ್ನಾಗಿದ್ದಾಳೆ ಎನ್ನುವುದು ಪರವಾಗಿಲ್ಲ. ಆದರೆ ಹೀಗೆ ತಪ್ಪಾಗಿ ಮಾತನಾಡುವುದು ಬೇಡ ಎಂದು ವರಲಕ್ಷ್ಮಿ ಶರತ್‌ಕುಮಾರ್ ಹೇಳಿದ್ದಾರೆ. ಮತ್ತೊಂದು ಸಂದರ್ಶನದಲ್ಲಿ ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ ಎಂದು ಹೇಳಿದ್ದು ವೈರಲ್ ಆಗಿತ್ತು. ಮಕ್ಕಳನ್ನು ಸಾಕುವ ತಾಕತ್ತು ಇದ್ದರೆ ಮಾತ್ರ ಹಡೆಯಬೇಕು. ಇಲ್ಲದಿದ್ದರೆ ಯಾಕೆ? ಎಂದಿದ್ದರು.

ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ನೇರಾನೇರ ಮಾತುಗಳಿಂದ ಸದಾ ಗಮನ ಸೆಳೆಯುತ್ತಾರೆ. ತಮಿಳು ನಟ ಶರತ್‌ಕುಮಾರ್ ಪುತ್ರಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಆಕೆ ಮಿಂಚಿದ್ದರು. 'ಮ್ಯಾಕ್ಸ್' ಚಿತ್ರದ ಸಣ್ಣ ಪಾತ್ರಕ್ಕೆ ಜೀವ ತುಂಬಿದ್ದರು.

ಬೆಂಗಳೂರಿನಲ್ಲಿ ಹುಟ್ಟಿ ಚೆನ್ನೈನಲ್ಲಿ ಓದಿ ಬೆಳೆದ ವರಲಕ್ಷ್ಮಿ ಬಳಿಕ ಚಿತ್ರರಂಗ ಪ್ರವೇಶಿಸಿದ್ದರು. ಮುಂಬೈನಲ್ಲಿ ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆಯ ಎಬಿಸಿಡಿ ಕಲಿತು 2012ರಲ್ಲಿ 'ಪೊಡ ಪೊಡಿ' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಅದರ ಬೆನ್ನಲ್ಲೇ ಕನ್ನಡದ 'ಮಾಣಿಕ್ಯ' ಚಿತ್ರದಲ್ಲಿ ನಾಯಕಿ ಆಗುವ ಅವಕಾಶ ಸಿಕ್ಕಿತ್ತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ರಫ್ ಅಂಡ್ ಟಫ್ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ 'ರಿಜಾನ' ಸಿನಿಮಾ ಶ್ರೀಲಂಕಾದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ವೈದ್ಯೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

More from Filmibeat

Read more about: tamil varalakshmi sarath kumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X