ಸೂಪರ್ ಹಿಟ್ ವರ್ಷಂ ರೀ ರಿಲೀಸ್ ದಿನಾಂಕ ಪ್ರಕಟ

ಸದ್ಯ ಟಾಲಿವುಡ್ ಚಿತ್ರರಂಗದಲ್ಲಿ ಈ ಹಿಂದೆ ತೆರೆಕಂಡು ಬಿಗ್ಗೆಸ್ಟ್ ಸೂಪರ್ ಹಿಟ್ ಆಗಿದ್ದ ಚಿತ್ರಗಳ ಮರುಬಿಡುಗಡೆ ಮಾಡುವ ಟ್ರೆಂಡ್ ಶುರುವಾಗಿದೆ. ನಟರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿನಯದ ಹಿಂದಿನ ಸೂಪರ್ ಹಿಟ್ ಚಿತ್ರಗಳನ್ನು ಕೆಲ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಿ ಸಂಭ್ರಮಿಸಲಾಗುತ್ತಿತ್ತು.

ಈ ಟ್ರೆಂಡ್ ಇದೀಗ ದೊಡ್ಡ ಮಟ್ಟಕ್ಕೆ ತಲುಪಿದ್ದು, ನೂತನ ಚಿತ್ರ ಬಿಡುಗಡೆಯಾಗುವ ಮಟ್ಟಿಗೆ ಇನ್ನೂರಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರಗಳ ಮರುಬಿಡುಗಡೆ ಮಾಡಲಾಗುತ್ತಿದೆ. ಇತ್ತೀಚಿಗಷ್ಟೇ ಮಹೇಶ್ ಬಾಬು ಅಭಿನಯದ ಪೋಕಿರಿ, ಚಿರಂಜೀವಿ ಅಭಿನಯದ ಘರಾನಾ ಮೊಗಡು, ಪವನ್ ಕಲ್ಯಾಣ್ ಅಭಿನಯದ ಜಲ್ಸಾ ಹಾಗೂ ನಂದಮೂರಿ ಬಾಲಕೃಷ್ಣ ಅಭಿನಯದ ಚನ್ನಕೇಶವರೆಡ್ಡಿ ಚಿತ್ರಗಳ ಅಪ್ ಡೇಟೆಡ್ ವರ್ಷನ್ ಮರು ಬಿಡುಗಡೆಯಾಗಿದ್ದವು.

ಹೀಗೆ ಮರುಬಿಡುಗಡೆಗೊಂಡ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ ಕಾರಣ ವಿತರಕರು ಮತ್ತಷ್ಟು ಚಿತ್ರಗಳನ್ನು ಮರುಬಿಡುಗಡೆ ಮಾಡಲು ತಯಾರಾಗಿದ್ದಾರೆ. ಇದೇ ತಿಂಗಳು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹುಟ್ಟು ಹಬ್ಬ ಇರುವ ಕಾರಣ ಪ್ರಭಾಸ್ ಅಭಿನಯದ ಸೂಪರ್ ಹಿಟ್ ಚಿತ್ರವಾದ ವರ್ಷಮ್ ಚಿತ್ರವನ್ನು ಮರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

Varsham re releasing on October 23 on the occasion of Prabhas birthday

ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಅಕ್ಟೋಬರ್ 23ಕ್ಕೆ ವರ್ಷಂ ಚಿತ್ರ 4K ಕ್ವಾಲಿಟಿಯಲ್ಲಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿದ್ದು, ಈ ಬಿಡುಗಡೆಯನ್ನು ಇತ್ತೀಚಿಗಷ್ಟೇ ನಿಧನಹೊಂದಿದ ಪ್ರಭಾಸ್ ಅವರ ದೊಡ್ಡಪ್ಪ ಕೃಷ್ಣಂರಾಜು ಅವರಿಗೆ ಅರ್ಪಣೆ ಮಾಡಲು ವರ್ಷಂ ಚಿತ್ರದ ವಿತರಕರ ತಂಡ ತೀರ್ಮಾನಿಸಿದೆ.

ಸದ್ಯ ಮರು ಬಿಡುಗಡೆಯಾದಾಗ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ದಾಖಲೆಯನ್ನು ಪವನ್ ಕಲ್ಯಾಣ್ ಅಭಿನಯದ ಜಲ್ಸಾ ಚಿತ್ರ ಹೊಂದಿದ್ದು, ಜಲ್ಸಾ ಚಿತ್ರದ ಈ ದಾಖಲೆಯನ್ನು ಮುರಿದು ಹಾಕಲು ಪ್ರಭಾಸ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಪ್ರಭಾಸ್ ಅಭಿನಯದ ವರ್ಷಮ್ ಮಾತ್ರವಲ್ಲದೆ ಬಿಲ್ಲಾ ಚಿತ್ರವನ್ನು ಕೂಡ ಮರುಬಿಡುಗಡೆ ಮಾಡಲು ವಿತರಕರು ಚಿಂತಿಸುತ್ತಿದ್ದು, ಈ ಚಿತ್ರವೂ ಚಿತ್ರ ಮಂದಿರಕ್ಕೆ ಕಾಲಿಟ್ಟರೆ ಪ್ರಭಾಸ್ ಅಭಿಮಾನಿಗಳಿಗೆ ಡಬಲ್ ಟ್ರೀಟ್ ಸಿಗಲಿದೆ.

More from Filmibeat

English summary
Varsham re releasing on October 23 on the occasion of Prabhas birthday. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X