ಷಡ್ಯಂತ್ರ, ಪಿತೂರಿ, ಹಗೆತನ, ಸಮಂತಾ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವವರು ಯಾರು..?
ಬದುಕಿನಲ್ಲಿ ಹತ್ತು ಹಲವು ನೋವುಗಳನ್ನು ಅನುಭವಿಸಿದವರು ಸಮಂತಾ. ವ್ಯೆಯಕ್ತಿಕ ಬದುಕಿನಲ್ಲಿ ಲಯ ತಪ್ಪಿದ ಸಂಸಾರದಿಂದ ಅವಮಾನಗಳನ್ನೇದುರಿಸಿ, ಶೋಷಣೆಗೊಳಗಾದ ಸಮಂತಾ ಅವರನ್ನು ಆ ನಂತರ ಮೈಯೋಸಿಟಿಸ್ ಕಾಯಿಲೆಗೆ ತುತ್ತಾದರು.
ಅಲ್ಲಿಂದಾಚೆ.. ಆಸ್ಪತ್ರೆ-ಮನೆಯ ನಡುವೆ ಕಳೆದು ಹೋದ ಸಮಂತಾ ಮರಳಿ ಚಿತ್ರರಂಗಕ್ಕೆ ಬಂದರು. ಬಣ್ಣಗಳಲ್ಲಿ ತಮ್ಮ ನೋವನ್ನು ಮರೆಯುವ ಪ್ರಯತ್ನ ಮಾಡಿದರು.ಆದರೆ, ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕುಂತಿರುತ್ತಾರೆ. ಅಪಪ್ರಚಾರವನ್ನು ಮಾಡುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸಮಂತಾ ಕುರಿತು ಕೆಲವರು ಅಪಪ್ರಚಾರ ಮಾಡಿದ್ದರು. ಆಕೆಯ ಜೊತೆ ತೆರೆ ಹಂಚಿಕೊಂಡರೆ ನಿಮ್ಮ ಕಥೆ ಅಷ್ಟೇ ಎಂದು ಹೆದರಿಸಿದ್ದರು. ಈ ವಿಚಾರವನ್ನು ವರುಣ್ ಧವನ್ ಈಗ ಬಹಿರಂಗಗೊಳಿಸಿದ್ದಾರೆ.

ಹೌದು, ಅಸಲಿಗೆ ಸಮಂತಾ ಮತ್ತು ವರುಣ್ ಧವನ್ ಅಭಿನಯದ ಹನಿ ಬನಿ ವೆಬ್ ಸರಣಿ ಈ ನವೆಂಬರ್ 07ಕ್ಕೆ ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಸಹಜವಾಗಿ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಚಿತ್ರತಂಡ ಪ್ರಚಾರವನ್ನು ಮಾಡುತ್ತಿದೆ. ಇದೇ ಸಮಯದಲ್ಲಿ ವರುಣ್ ಧವನ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಜೊತೆ ಆಕ್ಟ್ ಮಾಡಲು ಮುಂದಾದಾಗ ಹೇಗೆಲ್ಲ ಅವರನ್ನು ಕೆಲವರು ಹೆದರಿಸಿದರು ಎಂದು ಹೇಳಿದ್ದಾರೆ.
ನಾನು ಸಮಂತಾ ಅವರ ದಿ ಪ್ಯಾಮಿಲಿ ಮ್ಯಾನ್ ವೆಬ್ ಸರಣಿ ನೋಡಿ ಅವರ ಅಭಿನಯಕ್ಕೆ ಮನ ಸೋತಿದ್ದೆ ಎಂದಿರುವ ವರುಣ್ ಧವನ್ ಆ ನಂತರ ಸಮಂತಾ ಅವರ ಜೊತೆ ತೆರೆಹಂಚಿಕೊಳ್ಳಬೇಕು ಎನ್ನುವ ಕನಸು ಕಂಡಿದ್ದೆ ಎಂದಿದ್ದಾರೆ. ನನ್ನ ಅದೃಷ್ಟ ಅದೇ ಸಮಯಕ್ಕೆ ಸರಿಯಾಗಿ ನನಗೆ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ತು, ಇದರಿಂದ ಸಹಜವಾಗಿ ನಾನು ಖುಷಿಯಾಗಿದ್ದೇ ಎಂದಿರುವ ವರುಣ್ ಧವನ್ ಇದೇ ವೇಳೆ ಅನೇಕರು ಸಮಂತಾ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡಿದರು ಎಂದು ಹೇಳಿದ್ದಾರೆ.
ಮುಂದುವರೆದು ಸಮಂತಾ ಜೊತೆ ಯಾವುದೇ ಕಾರಣಕ್ಕೂ ಕೆಲಸ ಮಾಡಬೇಡ ಆಕೆಗೆ ದುರಂಹಕಾರ ಎಂದೆಲ್ಲ ನನ್ನೆದುರು ಹೇಳಿದ್ದರು ಎಂದು ಹೇಳಿರುವ ವರುಣ್ ಧವನ್ ಆಕೆಗೆ ಆರೋಗ್ಯ ಸಮಸ್ಯೆ ಇದೆ, ಚಿತ್ರದ ಚಿತ್ರೀಕರಣ ಮುಕ್ತಾಯವಾಗುವುದಿಲ್ಲ, ಸುಖಾ ಸುಮ್ಮನೆ ನಿಮ್ಮ ಸಮಯ ಹಾಳು ಮಾಡಿಕೊಳ್ಳಬೇಡ ಎಂದು ಕೂಡ ನನಗೆ ಹೇಳಿದ್ದರು ಎಂದಿರುವ ವರುಣ್ ಧವನ್, ಸಮಂತಾ ಮತ್ತು ನಿನ್ನ ಕೆಮೆಸ್ಟ್ರೀ ಬೆಳ್ಳಿ ತೆರೆಯ ಮೇಲೆ ಚೆನ್ನಾಗಿರಲ್ಲ ನೆಪ ಹೇಳಿ ಚಿತ್ರದಿಂದ ಹೊರ ಬಂದು ಬಿಡು ಎಂದು ಸಲಹೆಯನ್ನು ಕೂಡ ಕೊಟ್ಟಿದ್ದರು ಎಂದಿದ್ದಾರೆ. ಹಾಗೊಂದು ವೇಳೆ ಈ ಚಿತ್ರ ಮಾಡಲೇಬೇಕು ಎಂದು ನಿರ್ಧಾರ ಮಾಡಿದ್ದರೆ, ಸಮಂತಾ ಬದಲು ಬಾಲಿವುಡ್‌ನ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ನಿರ್ದೇಶಕ ಮತ್ತು ನಿರ್ಮಾಪಕ ರಾಜ್ ಮತ್ತು ಡಿಕೆ ಅವರಲ್ಲಿ ಹೇಳು ಎಂದು ಕೂಡ ನನಗೆ ಹೇಳಿದ್ದರು ಎಂದು ವರುಣ್ ಧವನ್ ಹೇಳಿದ್ದಾರೆ.
ಆದರೂ ನನಗೆ ಸಮಂತಾ ಅವರ ಜೊತೆ ಕೆಲಸ ಮಾಡಬೇಕಿತ್ತು ಈ ಕಾರಣಕ್ಕೆ ನಾನು ಈ ಚಿತ್ರ ಮಾಡಿದೆ ಎಂದು ತಮ್ಮ ಮಾತುಗಳಿಗೆ ಪೂರ್ಣ ವಿರಾಮವನ್ನು ವರುಣ್ ಧವನ್ ಹಾಕಿದ್ದಾರೆ. ಸದ್ಯಕ್ಕೆ ವರುಣ್ ಧವನ್ ಅವರ ಈ ಹೇಳಿಕೆ ವ್ಯಾಪಕವಾದ ಚರ್ಚೆಗೆ ಕಾರಣವಾಗಿದೆ. ಸಮಂತಾ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಆ ಕಾಣದ ಕೈಗಳು ಯಾರದ್ದು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಅನೇಕರು ಇದೆಲ್ಲದಕ್ಕೂ ನಾಗಚೈತನ್ಯ ಕಾರಣ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮಾಜಿ ಪತ್ನಿಯ ಕುರಿತು ನಾಗ ಚೈತನ್ಯ ಅವರೇ ಅಪಪ್ರಚಾರ ಮಾಡುತ್ತಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ನಾಗಚೈತನ್ಯ ಅವರೇ ಸಮಂತಾ ವಿರುದ್ಧ ಪಿತೂರಿ ಮಾಡುತ್ತಿದ್ದಾರಾ ಉತ್ತರ ವರುಣ್ ಧವನ್ ಅವರಿಗೆ ಗೊತ್ತು.


Click it and Unblock the Notifications











