ಮತ್ತೆ ಸಂಭ್ರಮದಲ್ಲಿ ಮೆಗಾ ಫ್ಯಾಮಿಲಿ; ಹೊಸ ಅತಿಥಿಯ ಸ್ವಾಗತಕ್ಕೆ ಸಿದ್ಧತೆ

ಟಾಲಿವುಡ್ ಮೆಗಾ ಫ್ಯಾಮಿಲಿಯಲ್ಲಿ ಮತ್ತೆ ಸಡಗರ ಮನೆ ಮಾಡಿದೆ. ಒಂದೂವರೆ ವರ್ಷದ ಹಿಂದೆ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಚಿರಂಜೀವಿ ಸಹೋದರ ನಾಗಬಾಬು ಮಗ ವರುಣ್ ತೇಜ್ ಹಾಗೂ ಸೊಸೆ ಲಾವಣ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕಳೆದೆರಡು ದಿನಗಳಿಂದ ಲಾವಣ್ಯ ತ್ರಿಪಾಠಿ ಗರ್ಭಿಣಿ ಎನ್ನುವ ಊಹಾಪೋಹ ಶುರುವಾಗಿತ್ತು. ಇದೀಗ ಅಧಿಕೃತವಾಗಿ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಪತಿ, ಪತ್ನಿ ಇಬ್ಬರೂ ಕೈಕೈ ಹಿಡಿದು ಪುಟ್ಟ ಮಗುವಿನ ಶೋಗಳನ್ನು ಹಿಡಿದಿರುವಂತೆ ಫೋಟೊ ಹಂಚಿಕೊಂಡಿದ್ದಾರೆ. "ಜೀವನದ ಅತಿ ಮುಖ್ಯವಾದ ರೋಲ್ ಶೀಘ್ರದಲ್ಲೇ ಬರಲಿದೆ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Varun Tej And Lavanya Tripathi announce pregnancy with adorable picture

ನಾಗಬಾಬು ಪುತ್ರ ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. 2013ರ ನವೆಂಬರ್ 1ರಂದು ಇಟಲಿಯಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ಮೆಗಾ ಫ್ಯಾಮಿಲಿ ಸದಸ್ಯರು ಹಾಗೂ ಕೆಲವೇ ಆಪ್ತರು ಈ ಕಲ್ಯಾಣೋತ್ಸವದಲ್ಲಿ ಭಾಗಿ ಆಗಿದ್ದರು. ಇನ್ನು ಲಾವಣ್ಯ- ವರುಣ್ ಪೋಸ್ಟ್‌ಗೆ ಸಮಂತಾ, ರಕುಲ್ ಪ್ರೀತ್ ಸಿಂಗ್, ರಿತು ವರ್ಮಾ, ಡಿಂಪಲ್ ಹಯಾತಿ ಸೇರಿದಂತೆ ಹಲವರು ರಿಪ್ಲೇ ಮಾಡಿ ಅಭಿನಂದತೆ ತಿಳಿಸಿದ್ದಾರೆ.

ಮದುವೆ ಬಳಿಕ ಕೂಡ ಲಾವಣ್ಯ ಸಿನಿಮಾ, ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು. ಆದರೆ ಇತ್ತೀಚೆಗೆ ಕೊಂಚ ಬ್ರೇಕ್ ಪಡೆದಿದ್ದರು. ಇನ್ನು ವರುಣ್‌ ತೇಜ್‌ಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಆರೂವರೆ ಅಡಿ ಕಟೌಟ್ ವರುಣ್ ಮಾಸ್ ಹೀರೊ ಆಗಿ ಅಬ್ಬರಿಸುವ ಪ್ರಯತ್ನ ಮಾಡಿದ್ದರು. ಆದರೆ ಯಾಕೋ ಸಫಲವಾಗಲಿಲ್ಲ. ಆದರೆ ಪ್ರಯತ್ನ ಬಿಡದೇ ಮತ್ತೆ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮೆಗಾ ಫ್ಯಾಮಿಲಿಯಲ್ಲಿ ಸಾಲು ಸಾಲು ಸಂಭ್ರಮದ ಕ್ಷಣಗಳು ಎದುರಾಗುತ್ತಿದೆ. ಚರಣ್- ಉಪಾಸನಾ ದಂಪತಿಗೆ ಮಗಳು ಕ್ಲಿಂಕಾರ ಹುಟ್ಟಿದ್ದು ಬಳಿಕ ಪವನ್ ಕಲ್ಯಾಣ್ ಆಂಧ್ರದ ಡಿಸಿಎಂ ಆಗಿ ಆಯ್ಕೆ ಆಗಿದ್ದು ಈಗ ವರಣ್‌- ಲಾವಣ್ಯ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಮೆಗಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆದರೆ ಚಿರು, ಚರಣ್ ನಟಿಸಿದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ.

2016ರಲ್ಲಿ ತೆರೆಗೆ ಬಂದಿದ್ದ 'ಮಿಸ್ಟರ್' ಎಂಬ ಚಿತ್ರದಲ್ಲಿ ವರುಣ್ ತೇಜ್ ಜೋಡಿಯಾಗಿ ಲಾವಣ್ಯ ತ್ರಿಪಾಠಿ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಶುರುವಾಗಿ ಬಳಿಕ ಅದು ಪ್ರೀತಿಗೆ ತಿರುಗಿತ್ತು. ಆದರೆ ಇಬ್ಬರೂ ಈ ವಿಚಾರವನ್ನು ಗುಟ್ಟಾಗಿ ಕಾಪಾಡಿಕೊಂಡಿದ್ದರು. ಕರಿಯರ್ ಕಡೆ ಹೆಚ್ಚು ಗಮನ ಹರಿಸಿದ್ದರಿಂದ ಅಷ್ಟು ಬೇಗ ನಮ್ಮ ರಿಲೇಷನ್‌ಶಿಪ್ ಬಗ್ಗೆ ಮಾತನಾಡುವುದು ಬೇಡ ಎಂದುಕೊಂಡಿದ್ದೆವು ಎಂದು ವರುಣ್ ತೇಜ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇಬ್ಬರು ಸೆಲೆಬ್ರೆಟಿಗಳು ಹೀಗೆ ರಿಲೇಷನ್‌ಶಿಪ್ ಅನ್ನು ಗುಟ್ಟಾಗಿ ಇಟ್ಟುಕೊಳ್ಳುವುದು ಕಷ್ಟ. ಬಹಳ ಒತ್ತಡ ಕೂಡ. ವಿಚಾರ ಬಹಿರಂಗ ಪಡಿಸಿ ಇಬ್ಬರೂ ಕೈ ಕೈ ಹಿಡಿದು ಆರಾಮಾಗಿ ಸುತ್ತಾಡೋಣ ಎನಿಸಿದ್ದು ಕೂಡ ನಿಜ. ಆದರೂ ನಾವು ಒಂದಷ್ಟು ವರ್ಷ ಈ ವಿಚಾರವನ್ನು ಗುಟ್ಟಾಗಿ ಕಾಪಾಡಿಕೊಂಡಿದ್ದೆವು ಎಂದಿದ್ದರು.

ವರುಣ್ ತೇಜ್ ಕೊನೆಯದಾಗಿ 'ಮಟ್ಕಾ' ಎಂಬ ಚಿತ್ರದಲ್ಲಿ ನಟಿಸಿದ್ದರು. ತಿಂಗಳ ಹಿಂದೆ ವರುಣ್ ತೇಜ್ ನಟನೆಯ ಹೊಸ ಸಿನಿಮಾ ಸೆಟ್ಟೇರಿತ್ತು. ಉತ್ತರಪ್ರದೇಶದ ಅಯೋಧ್ಯೆ ಮೂಲದ ಲಾವಣ್ಯ ಈಗ ಹೈದರಾಬಾದ್ ಸೊಸೆಯಾಗಿದ್ದಾರೆ. 'ಸತಿ ಲೀಲಾವತಿ' ಎಂಬ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.

More from Filmibeat

English summary
Varun Tej And Lavanya Tripathi are expecting their first child together. couple took to Instagram to share a joint post sharing the news with their fans.
Read more about: tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X