ಮೆಗಾಸ್ಟಾರ್ ಕುಟುಂಬದಲ್ಲಿ ಅದ್ಧೂರಿ ಮದುವೆ, ಇಟಲಿಯಲ್ಲಿ ಭಾವಿ ದಂಪತಿ ವರುಣ್ ತೇಜ್, ಲಾವಣ್ಯ ತ್ರಿಪಾಠಿ

ಇನ್ನು ಕೆಲವೇ ದಿನಗಳಲ್ಲಿ ನಟ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನವೆಂಬರ್ 1 ರಂದು ಇಟಲಿಯ ಟಸ್ಕನಿಯ ಬೊರ್ಗೊ ಸ್ಯಾನ್ ಫೆಲಿಸ್ ರೆಸಾರ್ಟ್‌ನಲ್ಲಿ ಈ ಮುದ್ದು ಜೋಡಿಯ ವಿವಾಹ ನೆರವೇರಲಿದೆ. ಈಗಾಗಲೇ ಇಬ್ಬರು ಇಟಲಿಯತ್ತ ಪಯಣ ಪ್ರಾರಂಭಿಸಿದ್ದಾರೆ.

ಇಟಲಿಯ ಟಸ್ಕನಿ ಐತಿಹಾಸಿಕ ಗ್ರಾಮವಾಗಿದ್ದು ನಂತರ ಅದನ್ನು ರೆಸಾರ್ಟ್ ಆಗಿ ಪರಿವರ್ತಿಸಲಾಗಿದೆ. ಅಲ್ಲಿಯೇ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸುಮಾರು ಐದು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ವರುಣ್ ತೇಜ್ ಮತ್ತು ಲಾವಣ್ಯ ಇಬ್ಬರೂ ಈಗಾಗಲೇ ಟಸ್ಕನಿಗೆ ಹೊರಟಿದ್ದಾರೆ. ಈ ಬಗ್ಗೆ ಇಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿತ್ರ ಹಂಚಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಮತ್ತು ಅವರ ಕುಟುಂಬದವರು ಕೂಡ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Varun Tej and Lavanya Tripathi jet off to Italy for lavish wedding

ಇಟಲಿಗೆ ಹೊರಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ

ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ವಿವಾಹ ಸಂಭ್ರಮ ಮನೆಮಾಡಿದೆ. ಕಳೆದ ಕೆಲವು ದಿನಗಳಿಂದ ಹಲವು ಕಾರ್ಯಕ್ರಮಗಳು ಹೈದರಾಬದ್‌ನಲ್ಲಿಯೇ ನಡೆಯುತ್ತಿವೆ. ಇನ್ನು, ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥವು ಜೂನ್ 9 ರಂದು ಹೈದರಾಬಾದ್‌ನಲ್ಲಿ ಕೆಲವೇ ಕೆಲವು ಕುಟುಂಬ ಸದಸ್ಯರೊಂದಿಗೆ ನಡೆಯಿತು. ನವೆಂಬರ್ 1 ರಂದು ವಿವಾಹ ಜರುಗಲಿದೆ.

ಇಟಲಿಯ ಟಸ್ಕನಿಯ ಬೊರ್ಗೊ ಸ್ಯಾನ್ ಫೆಲಿಸ್ ರೆಸಾರ್ಟ್‌ನಲ್ಲಿ ಹಳದಿ ಶಾಸ್ತ್ರ, ಮೆಹೆಂದಿ, ಸಂಗೀತ, ಮದುವೆ ಮತ್ತು ನಂತರದ ಪಾರ್ಟಿ ಸೇರಿದಂತೆ ನಾಲ್ಕು ದಿನಗಳ ಕಾಲ ವಿವಾಹ ಆಚರಣೆಗಳು ನಡೆಯುತ್ತವೆ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್, ಉಪಾಸನಾ ಕಾಮಿನೇನಿ, ಪವನ್ ಕಲ್ಯಾಣ್, ನಾಗ ಬಾಬು ಮತ್ತು ಅವರ ಕುಟುಂಬ, ಅಲ್ಲು ಅರ್ಜುನ್ ಮತ್ತು ಅವರ ಕುಟುಂಬ, ಸಾಯಿ ಧರಂ ತೇಜ್ ಮತ್ತು ವೈಷ್ಣವ್ ತೇಜ್ ಮದುವೆಯಲ್ಲಿ ಭಾಗವಹಿಸಲಿದ್ದಾರೆ.

ವರುಣ್ ತೇಜ್ ಮತ್ತು ಲಾವಣ್ಯ ತಮ್ಮ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಮಾನದ ಕಿಟಕಿಯಿಂದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದೇ ರೀತಿ ನಟ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಕೂಡ ಮದುವೆಗಾಗಿ ಟಸ್ಕನಿ ತಲುಪಿದ್ದಾರೆ ತೆಗೆದುಕೊಂಡರು. ಅವರು ಈಗ ಟಸ್ಕನಿಯಲ್ಲಿ ಬಂದಿಳಿದಿದ್ದಾರೆ. ಉಪಾಸನಾ ಡಬಲ್ ಮಳೆಬಿಲ್ಲಿನ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದು, ಟಸ್ಕನಿ, ಇಟಲಿ ಎಂದು ಸ್ಥಳವನ್ನು ಟ್ಯಾಗ್ ಮಾಡಿದ್ದಾರೆ.

Varun Tej and Lavanya Tripathi jet off to Italy for lavish wedding

ಇನ್ನು, ಮಾಹಿತಿಯಂತೆ ಮದುವೆಯ ನಂತರ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಒಂದು ತಿಂಗಳ ವಿಶ್ವ ಪ್ರವಾಸಕ್ಕೆ ಹೋಗಲಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಹೈದರಾಬಾದ್‌ನಲ್ಲಿರುವ ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗಾಗಿ ಹೈದರಾಬಾದ್‌ನಲ್ಲಿ ಆರತಕ್ಷತೆಯನ್ನು ಸಹ ಯೋಜಿಸಲಾಗಿದೆ. ಆದರೆ, ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇತ್ತೀಚೆಗೆ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ಮದುವೆ ಹಿನ್ನೆಲೆ ಪಾರ್ಟಿ ಆಯೋಜಿಲಾಗಿತ್ತು. ಮೆಗಾಸ್ಟಾರ್ ಚಿರಂಜೀವಿ ಇಡೀ ಕುಟುಂಬ ಕಾರ್ಯಕ್ರಮಗಳಲ್ಲಿ ಭಾಗಿಯಾಗಿತ್ತು. ನಟ ರಾಮ್ ಚರಣ್ , ತಮ್ಮ ಪತ್ನಿ ಉಪಾಸನಾ ಕೊನಿಡೆಲಾ ಮತ್ತು ಅವರ ಕುಟುಂಬದೊಂದಿಗೆ ಭಾಗಿಯಾಗಿದ್ದಾರೆ. ಎಲ್ಲರೂ ಭಾವಿ ದಂಪತಿಯ ಜೊತೆಗೆ ಗ್ರೂಪ್ ಫೋಟೋಗೆ ಫೋಸ್ ನೀಡಿದ್ದರು. ನಟ ಮೆಗಾಸ್ಟಾಋf ಚಿರಂಜೀವಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದರು.

More from Filmibeat

English summary
Varun Tej and Lavanya Tripathi wedding upadate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X