ವರುಣ್‌ ತೇಜ್ ಭಾವಿ ಪತ್ನಿಗೆ ವಿಚಿತ್ರ ಕಾಯಿಲೆ: ಲಾವಣ್ಯ ತ್ರಿಪಾಠಿ ಭಯ ಏನು ಗೊತ್ತಾ?

By ಫಿಲ್ಮಿಬೀಟ್ ಡೆಸ್ಕ್

ಉತ್ತರ ಪ್ರದೇಶದ ಮೂಲದ ನಟಿ ಲಾವಣ್ಯ ತ್ರಿಪಾಠಿ ತೆಲುಗು ನಟ ವರಣ್ ತೇಜ್ ಕೈಹಿಡಿಯಲಿದ್ದಾರೆ. ಇತ್ತೀಚೆಗೆ ಇಬ್ಬರ ಮದುವೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಈ ವರ್ಷಾಂತ್ಯಕ್ಕೆ ಆಕೆ ಮೆಗಾ ಫ್ಯಾಮಿಲಿ ಸೊಸೆ ಆಗಲಿದ್ದಾರೆ. ವರುಣ್- ಲಾವಣ್ಯ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಗೆ ಮುಂದಾಗಿದ್ದಾರೆ. ಲಾವಣ್ಯಗೆ ಒಂದು ವಿಚಿತ್ರ ಸಮಸ್ಯೆ ಇದೆ.

6 ವರ್ಷಗಳ ಹಿಂದೆ ವರುಣ್ ತೇಜ್ ಹಾಗೂ ಲಾವಣ್ಯ 'ಮಿಸ್ಟರ್' ಎನ್ನುವ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಶೂಟಿಂಗ್ ವೇಳೆಯೇ ಇಬ್ಬರ ನಡುವೆ ಪರಿಚಯವಾಗಿ ಆ ಪರಿಚಯ ಪ್ರೀತಿಗೆ ತಿರುಗಿತ್ತು. ಬಹಳ ದಿನಗಳ ಕಾಲ ತಮ್ಮ ಪ್ರೀತಿಯನ್ನು ಇಬ್ಬರೂ ಗುಟ್ಟಾಗಿಯೇ ಇಟ್ಟಿದ್ದರು. ಇದೀಗ ಪೋಷಕರ ಒಪ್ಪಿಗೆ ಪಡೆದು ಇಬ್ಬರು ತಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮುಂದಾಗಿದ್ದಾರೆ. ಇತ್ತೀಚಿಗೆ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಮೆಗಾ ಫ್ಯಾಮಿಲಿ ಜೊತೆಗೆ ಕುಟುಂಬದ ಆಪ್ತರು ಭಾಗಿ ಆಗಿ ಜೋಡಿಗೆ ಶುಭ ಹಾರೈಸಿದ್ದರು.

Varun Tej-Lavanya Tripathi engaged: Mega daughter in law suffering from a rare phobia

ಲಾವಣ್ಯ ಮೆಗಾ ಫ್ಯಾಮಿಲಿ ಸೊಸೆಯಾಗುತ್ತಾರೆ ಎನ್ನುವ ವಿಷಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಇನ್ನು ಲಾವಣ್ಯ ಹಿನ್ನೆಲೆ ಏನು? ಆಕೆಯ ಜಾತಿ ಏನು? ಆಕೆಯ ಆಸ್ತಿ ಮೌಲ್ಯ ಎಷ್ಟು ಅಂತೆಲ್ಲಾ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಆಕೆ ತನಗಿರುವ ವಿಚಿತ್ರ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದ್ದ ವಿಡಿಯೋ ವೈರಲ್ ಆಗ್ತಿದೆ.

Varun Tej-Lavanya Tripathi engaged: Mega daughter in law suffering from a rare phobia

ಟ್ರಿಪೊಫೋಬಿಯಾದಿಂದ ಬಳಲುತ್ತಿರುವ ಲಾವಣ್ಯ

ಸೆಲೆಬ್ರೆಟಿಗಳು ಕೂಡ ಮನುಷ್ಯರೇ ಅಲ್ಲವೇ. ಅವರಿಗೂ ಖಾಯಿಲೆ- ಕಸಾಲೆ ಇರುತ್ತದೆ. ಸೂಪರ್ ಸ್ಟಾರ್‌ಗಳು ಕೂಡ ಚಿತ್ರವಿಚಿತ್ರ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಕ್ಯಾನ್ಸರ್‌ನಿಂದ ಬಳಲುವವರು ಕೂಡ ಇದ್ದಾರೆ. ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿರುತ್ತಾರೆ. ಆದರೆ ಸೆಲೆಬ್ರೆಟಿಗಳು ಎನ್ನುವ ಕಾರಣಕ್ಕೆ ಅವರ ಪ್ರತಿಯೊಂದು ವಿಚಾರ ದೊಡ್ಡದಾಗಿ ಸುದ್ದಿಯಾಗುತ್ತದೆ ಅಷ್ಟೇ. 2 ವರ್ಷಗಳ ಹಿಂದೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಫಾಲೋವರ್ಸ್ ಜೊತೆ ಮಾತನಾಡುತ್ತಾ ನಟಿ ಲಾವಣ್ಯ ತಮಗಿರುವ ವಿಚಿತ್ರ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು.

ಲಾವಣ್ಯಗೆ ಟ್ರಿಪೋಫೋಬಿಯಾ ಸಮಸ್ಯೆ

ಹೌದು ಸ್ವತಃ ಲಾವಣ್ಯ ತ್ರಿಪಾಠಿ ತಾವು ಟ್ರಿಪೋಫೋಬಿಯಾದಿಂಧ ಬಳಲುತ್ತಿರುವ ಬಗ್ಗೆ ಮಾತನಾಡಿದ್ದರು. ಚರ್ಮದ ರಂಧ್ರಗಳು, ಜೇನುಗೂಡು, ಕಮಲದ ಕಣ್ಣುಗಳ ರಂಧ್ರಗಳ ಅಥವಾ ಉಬ್ಬುಗಳನ್ನು ಹೊಂದಿರುವ ವಸ್ತುವನ್ನು ನೋಡಲು ಆಕೆ ಪ್ರಜ್ಞಾಪೂರ್ವಕವಾಗಿ ಹೆದರುತ್ತಾರಂತೆ. ಇದರಿಂದ ಸಾಕಷ್ಟು ಬಾರಿ ಸಮಸ್ಯೆ ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಹೊರ ಬರಲು ಪ್ರಯತ್ನ ನಡೆಸುತ್ತಿರುವುದಾಗಿ ವಿವರಿಸಿದ್ದರು.

ಸದಾ ಖುಷಿಯಾಗಿ ಇರಬೇಕು

ಇನ್ನು ತಮಗಿರುವ ಸಮಸ್ಯೆಯ ಬಗ್ಗೆ ಹೇಳಿದ್ದ ಲಾವಣ್ಯ "ನಾವು ಸಂತೋಷವಾಗಿ ಇರಬೇಕು. ನಮ್ಮು ಸುತ್ತಲಿನ ಪ್ರಪಂಚದಲ್ಲಿ ಸಂತಸ ಹರಡಬೇಕು, ಇದನ್ನು ನಾನು ನಂಬುತ್ತೇನೆ. ನಮ್ಮ ಸ್ವಂತ ಯೋಗಕ್ಷೇಮಕ್ಕಾಗಿ ಆಗೊಮ್ಮೆ ಈಗೊಮ್ಮೆ ನಮ್ಮ ವೈಯಕ್ತಿಕ ಜೀವನವನ್ನು ರಿವೈಂಡ್ ಮಾಡುವುದು ನೋಡುವುದು ಮತ್ತು ವಿಶ್ಲೇಷಿಸುವುದು ಅತ್ಯಗತ್ಯ ಎಂದಿದ್ದರು.

ಒಂದೆರಡು ಸಿನಿಮಾಗಳಲ್ಲಿ ಬ್ಯುಸಿ

ಹಿಂದಿ ಕಿರುತೆರೆ ಮೂಲಕ ಲಾವಣ್ಯ ಬಣ್ಣದ ಲೋಕಕ್ಕೆ ಕಾಲಿಟ್ಟರು. 'ಅಂದಾಲ ರಾಕ್ಷಸಿ' ಆಕೆಯ ಚೊಚ್ಚಲ ಸಿನಿಮಾ. ಅಲ್ಲಿಂದ ಮುಂದೆ 'ಭಲೆ ಭಲೆ ಮಾಗಾಡಿವೋ', 'ಸೊಗ್ಗಾಡೆ ಚಿನ್ನಿನಾಯನ', 'ರಾಧ' ಸೇರಿದಂತೆ ಒಂದಷ್ಟು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಸ್ಯ 'ತನಲ್' ಎನ್ನುವ ತಮಿಳು ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಮತ್ತೆರಡು ಸಿನಿಮಾಗಳು ಆಕೆಯ ಕೈಯಲ್ಲಿವೆ.

More from Filmibeat

English summary
Varun Tej-Lavanya Tripathi engaged: Mega daughter in law suffering from a rare phobia. She Herself revealed that in a old Instagram interaction. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X