Just In
Don't Miss!
- News
ರೈತರ ಪ್ರತಿಭಟನೆ: ಭಾರತದ ವಿರುದ್ಧ ವಿಶ್ವಸಂಸ್ಥೆ ಮಾನವಹಕ್ಕು ಕಮಿಷನರ್ ಟೀಕೆ
- Lifestyle
ಶನಿವಾರದ ಭವಿಷ್ಯ ಹೇಗಿದೆ ನೋಡಿ
- Automobiles
17 ನಗರಗಳಲ್ಲಿ 22 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದ ಎಂಜಿ ಮೋಟಾರ್
- Sports
ಐಎಸ್ಎಲ್: ಕೇರಳಕ್ಕೆ ಸೋಲುಣಿಸಿದ ನಾರ್ಥ್ಈಸ್ಟ್ ಯುನೈಟೆಡ್ ಪ್ಲೇ ಆಫ್ ಗೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 26ರ ಮಾರುಕಟ್ಟೆ ದರ ಇಲ್ಲಿದೆ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಲುಗು ನಟ ವರುಣ್ ತೇಜ್ 'ಗನಿ' ಲುಕ್ ರಿಲೀಸ್; ಕುತೂಹಲ ಮೂಡಿಸಿದ ರಿಯಲ್ ಸ್ಟಾರ್ ಪಾತ್ರ
ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದ ಭರವಸೆಯ ನಟ ವರುಣ್ ತೇಜ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ವರುಣ್ ತೇಜ್ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿದ್ದಾರೆ.
ಹೌದು, ವರುಣ್ ತೇಜ್ ನಟನೆಯ ಬಹುನಿರೀಕ್ಷೆಯ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಆಗಿದೆ. ಫಿದಾ ನಟನ ಮುಂದಿನ ಸಿನಿಮಾದ ಫಸ್ಟ್ ಲುಕ್ ಅನ್ನು ನಟ ರಾಮ್ ಚರಣ್ ಬಿಡುಗಡೆ ಮಾಡಿ, ಸಿನಿಮಾತಂಡಕ್ಕೆ ವಿಶ್ ಮಾಡಿದ್ದಾರೆ. ಜೊತೆಗೆ ಸಹೋದರ ವರುಣ್ ತೇಜ್ ಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.
'ಕಬ್ಜ'ದ ಭೂಗತ ಜಗತ್ತಿಗೆ ಭಾರ್ಗವ್ ಬಕ್ಷಿಯಾಗಿ ಸುದೀಪ್ ಎಂಟ್ರಿ

ಗನಿ ಸಿನಿಮಾದ ಲುಕ್ ಔಟ್
ಚಿತ್ರಕ್ಕೆ ಗನಿ ಎಂದು ಟೈಟಲ್ ಇಡಲಾಗಿದ್ದು, ವರುಣ್ ತೇಜ್ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವರುಣ್ ತೇಜ್ ಕಿಲ್ಲಿಂಗ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರಕ್ಕೆ ಕಿರಣ್ ಕೊರಪತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಿರಣ್ ಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ.

ಪಾತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿರುವ ವರುಣ್
ಪಾತ್ರಕ್ಕಾಗಿ ವರುಣ್ ತೇಜ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ತೂಕ ಇಳಿಸಿಕೊಳ್ಳಲು ಮುಂಬೈನ ತರಬೇತುದಾರರ ಸಲಹೆಯಂತೆ ವರ್ಕೌಟ್ ಮಾಡಿದ್ದಾರೆ. ಇನ್ನು ಬಾಕ್ಸಿಂಗ್ ಟ್ರೈನಿಂಗ್ ಅನ್ನು ಲಾಸ್ ಏಂಜಲೀಸ್ ಟ್ರೈನರ್ ನಿಂದ ಕಲಿತಿದ್ದಾರಂತೆ. ವರುಣ್ ಹೇಳುವ ಪ್ರಕಾರ ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ಪ್ರಜಾಕೀಯ ಅಭ್ಯರ್ಥಿಗೆ ಜಯ: ಹಳ್ಳಿಗೆ ಭೇಟಿ ನೀಡಿ ನೀವೇ ನಮಗೆಲ್ಲ ಸ್ಫೂರ್ತಿ ಎಂದ ಉಪೇಂದ್ರ

ಕುತೂಹಲ ಮೂಡಿಸಿದೆ ರಿಯಲ್ ಸ್ಟಾರ್ ಪಾತ್ರ
ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ಕನ್ನಡದ ನಟ ರಿಯಲ್ ಸ್ಟಾರ್ ಉಪೇಂದ್ರ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮೂಲಗಳ ಪ್ರಕಾರ ಉಪೇಂದ್ರ ಬಾಕ್ಸಿಂಗ್ ಟ್ರೈನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಉಪೇಂದ್ರ ಪಾತ್ರದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಉಪೇಂದ್ರಗೆ ವಿಶ್ ಮಾಡಿದ್ದ ವರುಣ್
ಈ ಮೊದಲು ಉಪೇಂದ್ರ ಹುಟ್ಟುಹಬ್ಬದ ದಿನ ನಟ ವರುಣ್ ತೇಜ್, ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ರಿಯಲ್ ಸ್ಟಾರ್ ನಟಿಸುವ ಬಗ್ಗೆ ರಿವೀಲ್ ಮಾಡಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಉಪೇಂದ್ರ ಸರ್. ಶೀಘ್ರದಲ್ಲೇ ನಿಮ್ಮ ಜೊತೆ ಅಭಿನಯಿಸಲು ಎದುರು ನೋಡುತ್ತಿದ್ದೀನಿ' ಎಂದು ಟ್ವೀಟ್ ಮಾಡಿ ಉಪೇಂದ್ರ ಅಭಿನಯದ ಬಗ್ಗೆ ಅಧಿಕೃತವಾಗಿ ಬಹಿರಂಗ ಪಡಿಸಿದ್ದರು.
ಇದೀಗ ವರುಣ್ ತೇಜ್ ಫಸ್ಟ್ ಲುಕ್ ರಿವೀಲ್ ಆಗುತ್ತಿದ್ದಂತೆ, ರಿಯಲ್ ಸ್ಟಾರ್ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಉಪೇಂದ್ರ ಅಭಿಮಾನಿಗಳಲ್ಲಿ ಮನೆ ಮಾಡಿದೆ.