‘ಓದೆಲಾ ರೇಲ್ವೆ ಸ್ಟೇಷನ್’ನಲ್ಲಿ ವಸಿಷ್ಠ ಸಿಂಹ: ಕನ್ನಡಿಗನ ನಟನೆಗೆ ತೆಲುಗು ಪ್ರೇಕ್ಷಕ ಫಿದಾ

ವಸಿಷ್ಠ ಸಿಂಹ, ಕನ್ನಡದ ಪ್ರತಿಭಾವಂತ ನಟ ಮತ್ತು ಗಾಯಕ. ಆದರೆ ವಸಿಷ್ಠ ಸಿಂಹಗೆ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷಿತ ಯಶಸ್ಸು ದೊರಕಿಲ್ಲವೆಂದೇ ಹೇಳಬೇಕು. ಆದರೆ ವಸಿಷ್ಠ ಸಿಂಹರ ಪ್ರತಿಭೆ ಗುರುತಿಸಿ ಬೇರೆ ಬೇರೆ ಚಿತ್ರರಂಗದಿಂದಲೂ ಅವಕಾಶಗಳು ಅರಸಿ ಬರುತ್ತಿವೆ.

ತೀಕ್ಷಣ ನೋಟ, ಗಮನ ಸೆಳೆಯುವ ಅಭಿನಯ, ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುವ ಕಂಚಿನ ಕಂಠದ ಗಾಯಕ ಕಂ ನಾಯಕ ವಸಿಷ್ಠ ಸಿಂಹ 'ಓದೆಲಾ ರೇಲ್ವೇ ಸ್ಟೇಷನ್' ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರ ಈಗ ಆಹಾ ಒಟಿಟಿಯಲ್ಲಿ ಆಗಸ್ಟ್ 26ರಂದು ಬಿಡುಗಡೆಯಾಗಿದ್ದು, ಚಿಟ್ಟೆ ಅಭಿನಯಕ್ಕೆ ತೆಲುಗು ಸಿನಿ ಪ್ರೇಕ್ಷಕ ಫಿದಾ ಆಗಿದ್ದಾರೆ.

ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯೊಬ್ಬನ ಪಾತ್ರದಲ್ಲಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಅಮೋಘವಾಗಿ ಅಭಿನಯಿಸಿದ್ದು, ಚೊಚ್ಚಲ ತೆಲುಗು ಸಿನಿಮಾದಲ್ಲಿಯೇ ಸಿಂಹ ಗೆದ್ದಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ ನಾಯಕನಾಗಿಯೂ ಹಾಗೂ ಖಳನಾಯಕ ಎರಡೂ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

Vasishta Simha Odela Railway Station Telugu Movie

ಓದೆಲಾ ಹೆಸರಿನ ಊರಿನಲ್ಲಿ ಒಂದರಹಿಂದೊಂದು ಕೊಲೆ, ಅತ್ಯಾಚಾರಗಳು ನಡೆಯುತ್ತವೆ. ಐಪಿಎಸ್ ಮುಗಿಸಿ ತರಬೇತಿಗೆಂದು ಅಧಿಕಾರಿಯೊಬ್ಬ ಅದೇ ಊರಿಗೆ ಬರುತ್ತಾನೆ. ಮದುವೆಯಾಗಿ ಫರ್ಸ್‌ನೈಟ್ ಆದ ಯುವತಿಯರೇ ಕೊಲೆಗಾರನ ಗುರಿಯಾಗುವುದನ್ನು ಗಮನಿಸಿ ಅದೇ ಹಾದಿಯಲ್ಲಿ ತನಿಖೆ ಮುಂದುವರೆಸುತ್ತಾರೆ ಪೊಲೀಸರು. ಈ ಕೊಲೆಗಳನ್ನು ಯಾರು ಮಾಡುತ್ತಿದ್ದಾರೆ, ಯಾಕೆ ಮಾಡುತ್ತಿದ್ದಾರೆ, ಕೊಲೆಗಾರ ಸಿಗುವುದು ಹೇಗೆ ಎಂಬುದೇ ಸಿನಿಮಾದ ಕತೆ.

ಅಂದಹಾಗೇ 'ಓದೆಲಾ ರೇಲ್ವೇ ಸ್ಟೇಷನ್' ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಖರೀಮ್ ನಗರದಲ್ಲಿ ನಡೆದ ಘಟನೆಯೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಯುವ ನಿರ್ದೇಶಕ ಅಶೋಕ್ ತೇಜ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೆಬಾ ಪಟೇಲ್ ವಸಿಷ್ಠನಿಗೆ ಜೋಡಿಯಾಗಿ ನಟಿಸಿದ್ದಾರೆ.

ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ ಈಗ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜೊತೆಗೆ ಕಲಾ ಸೇವೆಯನ್ನೂ ಮುಂದುವರೆಸಲಿದ್ದಾರೆ. ಸದ್ಯ ವಸಿಷ್ಠ Love..ಲಿ, ಹೆಡ್ ಬುಷ್, ಸಿಂಬಾ, ತಲ್ವಾರ್ ಪೇಟೆ, ಡೇವಿಲ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Actor Vasishta Simha acted in Telugu movie Odela Railway Station. Telugu audience loved his performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X