ತೆಲುಗು ಚಿತ್ರರಂಗದಲ್ಲಿ ವಶಿಷ್ಠ ಸಿಂಹ: ನಟೋರಿಯಸ್ ಪಾತಕಿ ಪಾತ್ರದಲ್ಲಿ ಅಬ್ಬರ

ಕನ್ನಡ ಪ್ರತಿಭಾವಂತ ನಟ ವಸಿಷ್ಠ ಸಿಂಹ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ನಯೀಮ್ ಡೈರೀಸ್' ಹೆಸರಿನ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ.

ನಯೀಮ್ ತೆಲುಗು ರಾಜ್ಯಗಳ ನಟೋರಿಯಸ್ ಕ್ರಿಮಿನಲ್ ಆಗಿ ಹೆಸರಾಗಿದ್ದವನು. ಅಂಥಹವನ ಪಾತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದು, ಸಿನಿಮಾ ನಿರ್ದೇಶನ ಮಾಡಿರುವುದು ಮಾಜಿ ನಕ್ಸಲ್ ಎಂಬುದು ವಿಶೇಷ.

ನಕ್ಸಲ್‌ ಆಗಿ ಆ ನಂತರ ಗ್ಯಾಂಗ್‌ಸ್ಟರ್ ಆದ ನಯೀಮ್ ಪಾತಕಿ ಮಾತ್ರವೇ ಅಲ್ಲದೆ ರಾಜಕೀಯದಲ್ಲಿಯೂ ಪ್ರಭಾವ ಹೊಂದಿದ್ದ. ಐಜಿಯನ್ನೇ ಗುಂಡಿಟ್ಟು ಕೊಂದಿದ್ದ ಕಿರಾತಕ ನಯೀಮ್ ಕತೆಯನ್ನು ಇದೀಗ 'ನಯೀಮ್ ಡೈರೀಸ್' ಹೆಸರಿನಲ್ಲಿ ತೆರೆಗೆ ತರಲಾಗಿದೆ.

Vasishta Simhas Telugu Movie Nayeem Dairies Releasing On December 10

ಸಿನಿಮಾವು ಡಿಸೆಂಬರ್ 10 ರಂದು ತೆರೆಗೆ ಬರಲಿದ್ದು, ಡಿಸೆಂಬರ್ 09ರಂದು ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಮಾಧ್ಯಮಗಳು ಸಿನಿಮಾ ಬಗ್ಗೆ ಧನಾತ್ಮಕ ಅಭಿಪ್ರಾಯವನ್ನೇ ವ್ಯಕ್ತಪಡಿಸಿವೆ. ಆದರೆ ಸಿನಿಮಾ ವಿವಾದ ಎಬ್ಬಿಸುವ ಸಾಧ್ಯತೆ ಇದೆಯೆಂದೂ ಕೆಲವು ಪತ್ರಿಕೆಗಳು ವರದಿ ಮಾಡಿವೆ.

ನಯೀಮ್ ಈಗಿನ ತೆಲಂಗಾಣ ಪ್ರಾಂತ್ಯದ ನಟೋರಿಯಸ್ ಗ್ಯಾಂಗ್‌ಸ್ಟರ್, ನಕ್ಸಲೈಟ್ ಆಗಿದ್ದ ನಯೀಮ್ ಆ ನಂತರ ಪೊಲೀಸ್ ಮಾಹಿತಿದಾರನಾಗಿ ಬದಲಾಗಿ ನಂತರ ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ಗ್ಯಾಂಗ್‌ಸ್ಟರ್ ಆದ. ಆಂಧ್ರ-ತೆಲಂಗಾಣಗಳಲ್ಲಿ ಹಲವಾರು ಕೊಲೆಗಳಿಗೆ, ರಾಜಕೀಯ ಏರು-ಪೇರುಗಳಿಗೆ ನಯೀಮ್ ಕಾರಣವಾಗಿದ್ದ. ತೀವ್ರ ಆಟಾಟೋಪ ಮೆರೆದಿದ್ದ ನಯೀಮ್ ಅನ್ನು 2016ರಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದರು.

ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು ವಶಿಷ್ಠ ಸಿಂಹ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ರಕ್ತ ಪಾತದ ಜೊತೆಗೆ ಹಸಿ-ಬಿಸಿ ದೃಶ್ಯಗಳು ಸಹ ಇವೆ. ''ಕೆಜಿಎಫ್' ಹಾಗೂ 'ನಾರಪ್ಪ' ಬಳಿಕ ಈ ಪಾತ್ರ ಅತ್ಯಂತ ಸವಾಲಿನದ್ದಾಗಿತ್ತು'' ಎಂದು ವಶಿಷ್ಠ ಸಿಂಹ ಹೇಳಿದ್ದಾರೆ.

ಇನ್ನು ವಶಿಷ್ಠ ಸಿಂಹಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. ಈ ಮೊದಲು ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದ ತೆಲುಗು ರೀಮೇಕ್ 'ಕಿರಾಕ್ ಪಾರ್ಟಿ' ಸಿನಿಮಾಕ್ಕಾಗಿ ಹಾಡೊಂದನ್ನು ವಶಿಷ್ಠ ಸಿಂಹ ಹಾಡಿದ್ದರು. ಆ ನಂತರ ವೆಂಕಟೇಶ್ ಜೊತೆಗೆ 'ನಾರಪ್ಪ' ಸಿನಿಮಾದಲ್ಲಿ ನಟಿಸಿದರು. ಇದೀಗ 'ನಯೀಮ್ ಡೈರೀಸ್' ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Vasishta Simha's new Telugu movie Nayeem Daires releasing on December 10. This is his second Telugu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X