Sreeleela: ನಟ ವಿಜಯ್ ದೇವರಕೊಂಡ ಸಿನಿಮಾದಿಂದ ಹೊರ ಬಂದ ನಟಿ ಶ್ರೀಲೀಲಾ! ಕಾರಣವೇನು?
ಕನ್ನಡ ಸಿನಿಮಾಗಳಿಂದ ಚಿತ್ರರಂಗಕ್ಕೆ ಕಾಲಿಟ್ಟು ಈಗ ತೆಲುಗಿನ ಮನೆ ಮಗಳಾಗಿರುವ ನಟಿ ಶ್ರೀಲೀಲಾ ಈಗ ಟಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು. ತಮ್ಮ ನಟನೆ, ಸೌಂದರ್ಯ ಮತ್ತು ನೃತ್ಯದಿಂದ ತೆಲುಗು ಪ್ರೇಕ್ಷಕರನ್ನು ಸೆಳೆದಿರುವ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.
ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವ ಶ್ರೀಲೀಲಾ ಅವರ ಕೈಯಲ್ಲಿ ಕಡಿಮೆ ಎಂದರು ಆರು ತೆಲುಗು ಸಿನಿಮಾಗಳ ಅಫರ್ ಇದೆ. ಇತ್ತೀಚೆಗೆ ತೆಲುಗು ನಟ ವಿಜಯ್ ದೇವರಕೊಂಡ ಅವರ ಸಿನಿಮಾಗೂ ಇವರೇ ನಾಯಕಿಯಾಗಿ ಆಯ್ಕೆಯಾಗಿದ್ದರು. ಸಿನಿಮಾದ ಮೂಹರ್ತದ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಕೈಯಲ್ಲಿರುವ ಸಿನಿಮಾಗಳಿಗೆ ಡೇಟ್ ಹೊಂದಿಸುವುದೇ ಅವರಿಗೆ ಕಷ್ಟವಾಗಿದೆ.

ವಿಜಯ್ ದೇವರಕೊಂಡ ಸಿನಿಮಾದಿಂದ ಶ್ರೀಲೀಲಾ ಹೊರಕ್ಕೆ
ಸದದಯ ಕಿಸ್ ಬೆಡಗಿ ಶ್ರೀಲೀಲಾ ಕೈಯಲ್ಲಿ 6 ಸಿನಿಮಾಗಳಿವೆ. ಇವುಗಳ ಜೊತೆಗೆ ಗೌತಮ್ ತಿನ್ನನೂರಿ ನಿರ್ದೇಶನದ ವಿಜಯ್ ದೇವರಕೊಂಡ ಅವರ ಮುಂದಿನ ಚಿತ್ರ ವಿಡಿ 12 ಸಿನಿಮಾ ಕೂಡ ಕೈಯಲಿತ್ತು. ಹೊಸ ಮಾಹಿತಿ ಪ್ರಕಾರ ಈ ವಿಡಿ 12 ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ ವಿಜಯ್ ದೇವರಕೊಂಡ ಅವರು 'ಫ್ಯಾಮಿಲಿ ಸ್ಟಾರ್' ಎಂಬ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ವಿಳಂಬವಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಶ್ರೀಲೀಲಾ ಅವರ ನಿರ್ಧಾರ ಬಂದಿದೆ.
ವಿಜಯ್ ದೇವರಕೊಂಡ ಹೊಸ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದು, ವಿಡಿ 12 ಸಿನಿಮಾ ಚಿತ್ರೀಕರಣ ವಿಳಂಬವಾಗಲಿದೆ. ಹೀಗಾಗಿ ಮುಂಬರುವ ವರ್ಷದಲ್ಲಿ ವಿಜಯ್ ದೇವರಕೊಂಡ ಅವರ ಸಿನಿಮಾಗೆ ಸಮಯ ನೀಡಲು ಆಗುವುದಿಲ್ಲ ಎಂದು ಶ್ರೀಲೀಲಾ ಅವರ ತಂಡ ಸಿನಿಮಾದಿಂದ ಹೊರ ಬಂದಿದೆ. ಪರಿಣಾಮವಾಗಿ, ಚಿತ್ರದ ನಿರ್ಮಾಪಕರು ಮುಂಬರುವ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಬದಲಿ ನಾಯಕಿಯನ್ನು ಹುಡುಕಲು ನಿರ್ಧರಿಸಿದ್ದಾರೆ.
ವಿಜಯ್ ದೇವರಕೊಂಡ ಸಿನಿಮಾದಲ್ಲಿ ಶ್ರೀಲೀಲಾ ಬದಲಿಗೆ ರಶ್ಮಿಕಾ!?
ಕೆಲವು ವಾರಗಳ ಹಿಂದೆ, ಚಿತ್ರದಲ್ಲಿ ಶ್ರೀಲೀಲಾ ಬದಲಿಗೆ ರಶ್ಮಿಕಾ ಮಂದಣ್ಣ ನಟಿಸಬಹುದು ಎಂಬ ವದಂತಿ ಇತ್ತು. ಆದರೆ, ಮೂಲಗಳು ವದಂತಿಗಳನ್ನು ತಳ್ಳಿಹಾಕಿವೆ. ಅಂತಹದ್ದು ಏನೂ ನಡೆಯುತ್ತಿಲ್ಲ ಎಂದು ಹೇಳಿವೆ. ರಶ್ಮಿಕಾ ಮಂದಣ್ಣ ಬದಲಿಗೆ 'ಏಜೆಂಟ್' ಚಿತ್ರದಲ್ಲಿ ನಟಿಸಿ ಗಮನ ಸೆಳೆದಿರುವ ಸಾಕ್ಷಿ ವೈದ್ಯ ಅವರನ್ನು ಸಂಪರ್ಕಿಸಲಾಗಿದೆ. ಚಿತ್ರದಲ್ಲಿ ಅವರು ನಟಿಸುವ ಬಗ್ಗೆ ಪಾಸಿಟಿವ್ ಆಗಿ ಇದ್ದಾರೆ ಎದು ಇತ್ತೀಚಿನ ವರದಿಗಳು ಸೂಚಿಸುತ್ತವೆ.

ಇನ್ನು, ನಟ ವಿಜಯ್ ದೇವರಕೊಂಡ ಅವರು 'ಫ್ಯಾಮಿಲಿ ಸ್ಟಾರ್' ಸಿನಿಮಾ ಮುಗಿದ ಬಳಿಕೆ ಈ ಚಿತ್ರದ ಚೊತ್ರೀಕರಣ ಪ್ರಾತಂಭವಾಗಲಿದೆ. ಅದು ಮುಂದಿನ ವರ್ಷದಿಂದ. ಸದ್ಯ ಶ್ರೀಲೀಲಾ ವಿಡಿ 12 ಸಿನಿಮಾದಿಂದ ಹೊರನಡೆದಿದ್ದು, ಇಬ್ಬರನ್ನು ತೆರೆಯ ಮೇಲೆ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ನಟಿ ಶ್ರೀಲೀಲಾ ಚಿತ್ರದಿಂದ ಹೊರ ಬಂದಿರುವ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕಾಗಿದೆ.
ತೆಲುಗಿನಲ್ಲಿ ಶ್ರೀಲೀಲಾ
ಕನ್ನಡದ ಕಿಸ್, ಭರಾಟೆ ಸಿನಿಮಾಗಳ ನಂತರ ತೆಲುಗಿನಲ್ಲಿ ಪೆಳ್ಳಿ ಸಂದಡಿ ಮೂಲಕ ಹೆಜ್ಜೆ ಇಟ್ಟ ಇವರು ಬಳಿಕ ಹಿಂತಿರುಗಿ ನೋಡಲಿಲ್ಲ. ಮೊದಲ ಸಿನಿಮಾ ಗಲ್ಲಾ ಪೆಡ್ಡಿಗೆಯಲ್ಲಿ ಸದ್ದು ಮಾಡದಿದ್ದರೂ, ಅವರ ನಟನೆ ಮತ್ತು ಡ್ಯಾನ್ಸ್‌ಗೆ ತೆಲುಗು ಪ್ರೇಕ್ಷಕರು ಮತ್ತು ಚಿತ್ರರಂಗ ಫಿದಾ ಆಗಿತ್ತು. ಬಳಿಕ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಇತ್ತೀಚೆಗೆ ಬಾಲಣ್ಣ ಜೊತೆಗೆ 'ಭಗವಂತ್ ಕೇಸರಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು 28ನೇ ಸಿನಿಮಾದಲ್ಲಿ, ಪವನ್ ಕಲ್ಯಾಣ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.


Click it and Unblock the Notifications











