ಮದುವೆ, ನಿಶ್ಚಿತಾರ್ಥ ; ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅವರಿಂದ ನಾಳೆ ಸುದ್ದಿಗೋಷ್ಠಿ?

ರಶ್ಮಿಕಾ ಮಂದಣ್ಣಗೆ ಈಗ ಚಿನ್ನದಂತಹ ಬೇಡಿಕೆ ಇದೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಜೊತೆ ಕೆಲಸ ಮಾಡಲು ತುದಿಗಾಲಿನಲ್ಲಿ ನಿಂತವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದರ ನಡುವೆ ಕೇವಲ ಒಂದು ತಿಂಗಳ ಅಂತರದಲ್ಲಿ ಬಿಡುಗಡೆಯಾದ ತಮ್ಮ ''ಥಮ್ಮ'' ಮತ್ತು ''ದಿ ಗರ್ಲ್‌ಫ್ರೆಂಡ್'' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಮತ್ತು ಪ್ರಶಂಸೆಗಳಿಂದ ರಶ್ಮಿಕಾ ಮಂದಣ್ಣ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ.

ಕೇವಲ ವೃತ್ತಿ ಬದುಕಿನಲ್ಲಿ ಮಾತ್ರ ಅಲ್ಲ ರಶ್ಮಿಕಾ ಮಂದಣ್ಣ ಅವರ ವ್ಯೆಯಕ್ತಿಕ ಬದುಕಿನಲ್ಲಿ ಕೂಡ ಸಂಭ್ರಮದ ವಾತಾವರಣ ಮನೆ ಮಾಡಿದೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ಧಾರೆ ಎನ್ನುವ ಸುದ್ದಿ ಹಬ್ಬಿದೆ.

VD-RASMIKA WEDDING FRENZY After Secret Hyderabad Engagement What s Next for the Power Duo

ನಿಜಾ.. ಹೀಗೆ ಹರಡಿರುವ ಈ ಸುದ್ದಿಯ ಮೇಲೆ ವಿಜಯ್ ದೇವರಕೊಂಡ ಅಧಿಕೃತವಾದ ಮುದ್ರೆಯನ್ನು ಒತ್ತಿಲ್ಲ. ಆದರೆ.. ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ಈ ಸುದ್ದಿಯನ್ನು ಒಪ್ಪಿಕೊಂಡಿದ್ದಾರೆ. ಮದುವೆ ಆದರೆ ಅದು ವಿಜಯ್ ದೇವರಕೊಂಡ ಅವರ ಜೊತೆಯಲ್ಲಿಯೇ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಹೀಗಿರುವಾದ ಇದೀಗ ತಮ್ಮ ಮದುವೆಯ ಕುರಿತು ಮಾಹಿತಿಯನ್ನು ನೀಡಲು ನಾಳೆ ( ನವೆಂಬರ್ 12) ಈ ಜೋಡಿ ಹಕ್ಕಿ ಮಾಧ್ಯಮದವರ ಎದುರು ಬರಲಿದೆ ಎನ್ನುವ ಮತ್ತೊಂದು ಸುದ್ದಿ ಸದ್ಯ ಆಂಧ್ರದೆಲ್ಲೆಡೆ ಕೇಳಿ ಬರುತ್ತಿದೆ.

ಹೌದು, ಅಸಲಿಗೆ ''ದಿ ಗರ್ಲ್‌ಫ್ರೆಂಡ್‌'' ಚಿತ್ರದ ಗಳಿಕೆಯಿಂದ ಖುಷಿಯಾಗಿರುವ ರಶ್ಮಿಕಾ ಮಂದಣ್ಣ ಮತ್ತು ತಂಡ ನಾಳೆ ( ನವೆಂಬರ್ 12 ) ಹೈದರಾಬಾದ್‌ನಲ್ಲಿ ಈ ಗೆಲುವನ್ನು ಆಚರಿಸಲು ಪ್ಲ್ಯಾನ್ ಮಾಡಿದೆ. ಇದೇ ಪತ್ರಿಕಾಗೋಷ್ಠಿಗೆ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಆಗಮಿಸುವ ಸಾಧ್ಯತೆ ಇದೆ. ಚಿತ್ರದ ಕುರಿತು ಗಳಿಕೆಯ ಕುರಿತು ಇಡೀ ''ದಿ ಗರ್ಲ್‌ಫ್ರೆಂಡ್'' ತಂಡ ಮಾತನಾಡಿದ ನಂತರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಮದುವೆಯ ಕುರಿತು ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ. ಹೀಗೆಂದು ''ಸಿಯಾಸತ್.ಕಾಮ್'' ವರದಿಯನ್ನು ಮಾಡಿದೆ.

ಅಂದ್ಹಾಗೇ ಇದು ಡೆಸ್ಟಿನೇಶನ್ ವೆಡ್ಡಿಂಗ್ ಕಾಲ. ಹಲವಾರು ತಾರೆಯರು ತಮ್ಮ ತಮ್ಮ ನೆಚ್ಚಿನ ಸ್ಥಳದಲ್ಲಿ ಸಪ್ತಪದಿಯನ್ನು ತುಳಿದಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಗೆ ರಾಜಸ್ತಾನದ ಉದಯಪುರದಲ್ಲಿರುವ ಭವ್ಯವಾದ ಅರಮನೆ ಸಾಕ್ಷಿಯಾಗಲಿದೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ. ಮುಂದಿನ ವರ್ಷದ ಫೆಬ್ರವರಿ 26ರಂದು ನಡೆಯುವ ಈ ಮದುವೆಗೆ ಕೇವಲ ಕೆಲವೇ ಕೆಲ ಅತ್ಯಾಪ್ತರು ಸಾಕ್ಷಿಯಾಗಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

VD-RASMIKA WEDDING FRENZY After Secret Hyderabad Engagement What s Next for the Power Duo

ಇನ್ನುಳಿದಂತೆ ಹೈದರಾಬಾದ್‌ನ ಸೊಸೆಯಾಗುತ್ತಿರುವ ರಶ್ಮಿಕಾ ಮಂದಣ್ಣ ಪ್ರತಿ ವರ್ಷ ವಿಜಯ್ ದೇವರಕೊಂಡ ಅವರ ಮನೆಯಲ್ಲಿಯೇ ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿದ್ಧಾರೆ. ಜೊತೆಯಲ್ಲಿಯೇ ಇದ್ದರೂ ಕೂಡ ಪ್ರತ್ಯೇಕವಾಗಿರುವಂತೆ ಬಿಂಬಿಸುವ ಪ್ರಯತ್ನವನ್ನು ಆಗಾಗ ಇಬ್ಬರು ಮಾಡುತ್ತಿರುತ್ತಾರೆ. ಆದರೆ. ಮಾಲ್ಡೀವ್ಸ್‌ಗೆ ಹೋಗಿರಲಿ.. ಗೋವಾದಲ್ಲಿಯೇ ಇಬ್ಬರು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿರಲಿ.. ಅಭಿಮಾನಿಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಇಬ್ಬರಿಗೂ ಕೂಡ ಸಾಧ್ಯವಾಗಿಲ್ಲ. ಇಬ್ಬರು ಫೋಟೊ ಹಂಚಿಕೊಂಡ ಕ್ಷಣಾರ್ಧದಲ್ಲಿಯೇ ಇಬ್ಬರು ಎಲ್ಲಿದ್ದಾರೆ ಎನ್ನುವುದನ್ನು ಥಟ್ ಅಂತ ಇವರ ಅಭಿಮಾನಿಗಳು ಕಂಡು ಹಿಡಿದು ಬಿಡುತ್ತಾರೆ.

ಒಟ್ನಲ್ಲಿ ನಾಳೆ (ನವೆಂಬರ್ 12) ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಕುರಿತು ಮಾಹಿತಿಯನ್ನು ನೀಡುವ ನಿರೀಕ್ಷೆ ಇದೆ. ಇಬ್ಬರು ಯಾವೆಲ್ಲಾ ವಿಚಾರ ಹಂಚಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Inside the VD-Rashmika wedding frenzy! Unconfirmed rumors suggest a secret engagement in Hyderabad. Get the latest updates on the power couple's relationship status.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X