Exclusive: ಪ್ರಶಾಂತ್ ನೀಲ್ ಆಯ್ತು.. ಈಗ ಹರ್ಷ: ಟಾಲಿವುಡ್ ಸ್ಟಾರ್ ಜೊತೆ 'ವೇದ' ಸಾರಥಿ ಸಿನಿಮಾ
ನಿರ್ದೇಶಕ ಎ. ಹರ್ಷ 'ವೇದ' ಸಿನಿಮಾ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. 'ವೇದ' ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ಎ. ಹರ್ಷ ಟಾಲಿವುಡ್‌ಗೆ ಹೊರಟು ನಿಂತಿದ್ದಾರೆ. ತೆಲುಗು ಸೂಪರ್ ಸ್ಟಾರ್ ಜೊತೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಶೀಘ್ರದಲ್ಲೇ ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಸಿಗಲಿದೆ.
ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಿವೆ. ಕನ್ನಡ ನಟರಿಗೆ, ತಂತ್ರಜ್ಞರಿಗೆ ಪರಭಾಷೆಯಿಂದಲೂ ಅವಕಾಶಗಳು ಅರಸಿ ಬರ್ತಿವೆ. ಇತ್ತೀಚೆಗೆ ನರ್ತನ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡ್ತಿತ್ತು. ಹರ್ಷ ನಿರ್ದೇಶನದ 'ಭಜರಂಗಿ-2' ಸಿನಿಮಾ ಕಾರಣಾಂತರಗಳಿಂದ ಸೋಲುಂಡಿತ್ತು. ಆದರೆ 'ವೇದ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇದೀಗ ಎ. ಹರ್ಷ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಗುಸುಗುಸು ಶುರುವಾಗಿದೆ. ಸದ್ದಿಲ್ಲದೇ ಮಾತುಕತೆ ಕೂಡ ನಡೀತಿದೆ.

ತೆಲುಗು ನಟ ಗೋಪಿಚಂದ್ ನಟನೆಯ ಚಿತ್ರಕ್ಕೆ ಎ. ಹರ್ಷ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ. ಈ ಬಗ್ಗೆ ಚರ್ಚೆ ನಡೀತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಫಿಲ್ಮಿಬೀಟ್ ನಿರ್ದೇಶಕ ಹರ್ಷ ಅವರನ್ನು ಸಂಪರ್ಕಿಸಿತ್ತು. ಈ ಬಗ್ಗೆ ಹೆಚ್ಚೇನು ಹೇಳದ ಹರ್ಷ, ಇನ್ನು ಮಾತುಕತೆ ಹಂತದಲ್ಲಿದೆ. ಶೀಘ್ರದಲ್ಲಿ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಅಲ್ಲಿಗೆ ಅಂತಾದೊಂದು ಪ್ರಯತ್ನ ನಡೀತಿರೋದಂತು ಪಕ್ಕಾ ಎನ್ನುವಂತಾಗಿದೆ. ಈಗಾಗಲೇ ಪ್ರಶಾಂತ್ ನೀಲ್ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ಹರ್ಷ ಅದೇ ಹಾದಿಯಲ್ಲಿದ್ದಾರೆ.
ವಿಲನ್ ಆಗಿ ಅಬ್ಬರಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದ ಗೋಪಿಚಂದ್ ಮುಂದೆ ಹೀರೊ ಆಗಿ ಸಕ್ಸಸ್ ಕಂಡರು. ಆಕ್ಷನ್ ಅಡ್ವೆಂಚರ್ಸ್ ಸಿನಿಮಾಗಳಲ್ಲಿ ಗೋಪಿಚಂದ್ ಹೆಚ್ಚು ನಟಿಸುತ್ತಾ ಬರ್ತಿದ್ದಾರೆ. ಹರ್ಷ ಕೂಡ ಫ್ಯಾಂಟಸಿ ಅಡ್ವೆಂಚರಸ್ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ನಿಸ್ಸೀಮರು. ಹಾಗಾಗಿ ಇಬ್ಬರ ಕಾಂಬಿನೇಷನ್‌ನಲ್ಲಿ ಒಂದು ಮಾಸ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರುವ ಸುಳಿವು ಸಿಗುತ್ತಿದೆ. ಸದ್ಯ ಗೋಪಿಚಂದ್ 'ರಾಮಬಾಣಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಶೀಘ್ರದಲ್ಲೇ ಎ. ಹರ್ಷ- ಗೋಪಿಚಂದ್ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. 'ವೇದ' ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಗೋಪಿಚಂದ್ ಕನ್ನಡ ನಿರ್ದೇಶನ ಎ. ಹರ್ಷ ಜೊತೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ. ರಾಧ ಮೋಹನ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.

ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಬಂದ ಎ. ಹರ್ಷ ಮುಂದೆ ಸ್ಟಾರ್ ಕೊರಿಯೋಗ್ರಫರ್ ಆದರು. 2007ರಲ್ಲಿ 'ಗೆಳೆಯಾ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟರು. 'ಬಿರುಗಾಳಿ', 'ಚಿಂಗಾರಿ' ಶಿವಣ್ಣನ ಜೊತೆ ಮಾಡಿದ 'ಭಜರಂಗಿ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. 'ವಜ್ರಕಾಯ', 'ಜೈ ಮಾರುತಿ 800', 'ಅಂಜನಿಪುತ್ರ', 'ಸೀತಾ ರಾಮ ಕಲ್ಯಾಣ', 'ಭಜರಂಗಿ-2', 'ವೇದ' ಸೇರಿ ಒಟ್ಟು 10 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.


Click it and Unblock the Notifications











