ಇದೇನಿದು? ಗುರುವಾರ ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಅದರ ನಾಳೆಯೇ ಓಟಿಟಿಗೆ ಬರಲಿದೆ ಶಿವಣ್ಣನ ಈ ಚಿತ್ರ!

ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಈಗಲೂ ಸಹ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿ ಇದ್ದು, ಯುವ ನಟರೇ ಈ ರೀತಿ ಎನರ್ಜಿ ಇಂದ ಇರಲು ನಮ್ಮಿಂದ ಆಗುವುದಿಲ್ಲವಲ್ಲ ಎಂದೆನ್ನುಕೊಳ್ಳುವಂತೆ ಮಾಡುತ್ತಿರುವ ನಟ. ಹಳ್ಳಿಯ ಟೆಂಟ್‌ಗಳಲ್ಲಿ ಗಾಂಧಿ ಕ್ಲಾಸ್ ಟಿಕೆಟ್ ಲಭ್ಯವಾಗುತ್ತಿದ್ದ ನಮ್ಮ ಹಿರಿಯರ ಕಾಲದಿಂದ ಓಟಿಟಿ ಯುಗದವರೆಗೂ ಬಾಕ್ಸ್ ಆಫೀಸ್ ಅನ್ನು ಆಳುತ್ತಾ ಬಂದಿರುವ ಶಿವ ರಾಜ್‌ಕುಮಾರ್ ಇಂದಿಗೂ ಗಲ್ಲಾಪೆಟ್ಟಿಗೆ ಲೂಟಿ ಮಾಡುವಂತಹ ಚಿತ್ರಗಳನ್ನು ನೀಡುತ್ತಿದ್ದಾರೆ.

ಕಳೆದ ವರ್ಷದ ಡಿಸೆಂಬರ್ ತಿಂಗಳ ಅಂತಿಮ ವಾರದಲ್ಲಿ ಬಿಡುಗಡೆಗೊಂಡ ವೇದ ಚಿತ್ರದ ಮೂಲಕ ಸಕ್ಸಸ್ ಕಂಡು ಗೆಲುವಿನ ಹಾದಿಗೆ ಮರಳಿದ್ದ ಶಿವ ರಾಜ್‌ಕುಮಾರ್ ಸದ್ಯ ಘೋಸ್ಟ್ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ 45 ಎಂಬ ಚಿತ್ರಗಳನ್ನು ಶಿವ ರಾಜ್‌ಕುಮಾರ್ ಒಪ್ಪಿಕೊಂಡಿದ್ದಾರೆ.

ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶಿವ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರವಾದ ವೇದ ಚಿತ್ರವನ್ನು ಇದೀಗ ತೆಲುಗು ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ. ಹೌದು, ವೇದ ಚಿತ್ರವನ್ನು ಶಿವ ವೇದ ಎಂಬ ಶೀರ್ಷಿಕೆ ಅಡಿಯಲ್ಲಿ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಅದ್ದೂರಿಯಾಗಿ ಪ್ರಿ ರಿಲೀಸ್ ಇವೆಂಟ್ ಮಾಡಿ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡವೇನೋ ಮುಂದಾಗಿದ್ದು, ಈ ಚಿತ್ರದ ಓಟಿಟಿ ರಿಲೀಸ್ ಘೋಷಣೆ ಸಿನಿ ರಸಿಕರನ್ನು ಗೊಂದಲಕ್ಕೆ ತಳ್ಳಿದೆ. ಅಷ್ಟಕ್ಕೂ ವೇದ ತೆಲುಗು ಬಿಡುಗಡೆಯಿಂದ ಹಾಗೂ ಓಟಿಟಿ ಬಿಡುಗಡೆ ಘೋಷಣೆಯಿಂದ ಸಿನಿ ರಸಿಕರಲ್ಲಿ ಉಂಟಾಗಿರುವ ಗೊಂದಲವೇನು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಗುರುವಾರ ಥಿಯೇಟ್ರಿಕಲ್ ರಿಲೀಸ್, ಶುಕ್ರವಾರ ಓಟಿಟಿಗೆ!

ಗುರುವಾರ ಥಿಯೇಟ್ರಿಕಲ್ ರಿಲೀಸ್, ಶುಕ್ರವಾರ ಓಟಿಟಿಗೆ!

ಸದ್ಯ ವೇದ ಚಿತ್ರದ ತೆಲುಗು ವರ್ಷನ್ ಶಿವ ವೇದ ಚಿತ್ರ ಇದೇ ಗುರುವಾರ ( ಫೆಬ್ರವರಿ 9 ) ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದ್ದು, ಚಿತ್ರದ ಬಿಡುಗಡೆಗೆ ಸಾಲು ಸಾಲು ಪೋಸ್ಟ್‌ಗಳನ್ನು ಮಾಡಿ ಭರ್ಜರಿ ತಯಾರಿ ನಡೆಸಿ ಪ್ರಮೋಟ್ ಮಾಡ್ತಿದೆ. ಆದರೆ ವೇದ ಚಿತ್ರ ಓಟಿಟಿಯಲ್ಲಿ ಇದೇ ಶುಕ್ರವಾರ ( ಫೆಬ್ರವರಿ 10 ) ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬುದು ಸಿನಿ ರಸಿಕರನ್ನು ಗೊಂದಲಕ್ಕೆ ದೂಡಿದೆ.

ವೇದ ತೆಲುಗು ಕೂಡ ಬಿಡುಗಡೆಯಾಗಲಿದೆ!

ವೇದ ತೆಲುಗು ಕೂಡ ಬಿಡುಗಡೆಯಾಗಲಿದೆ!

ಹೀಗೆ ವೇದ ತೆಲುಗು ವರ್ಷನ್ ಬಿಡುಗಡೆಯಾದ ನಾಳೆಯೇ ಓಟಿಟಿಯಲ್ಲಿ ಬಿಡುಗಡೆಯಾಗಲಿರುವ ಸುದ್ದಿ ಗೊಂದಲ ಮೂಡಿಸಲು ಕಾರಣ ಜೀ 5 ಹಂಚಿಕೊಂಡಿರುವ ವಿಡಿಯೊ. ಈ ವಿಡಿಯೊದಲ್ಲಿ ವೇದ ಫೆಬ್ರವರಿ 10ಕ್ಕೆ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದ್ದು, ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲೂ ಚಿತ್ರ ಲಭ್ಯವಿರಲಿದೆ ಎಂದು ತಿಳಿಸಿದೆ. ಹೀಗೆ ತೆಲುಗಿನಲ್ಲಿಯೂ ಓಟಿಟಿ ಬಿಡುಗಡೆ ಮಾಡುವುದಾದರೆ ವೇದ ಚಿತ್ರದ ತೆಲುಗು ವರ್ಷನ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಅವಶ್ಯಕತೆ ಏನಿತ್ತು, ಒಂದು ದಿನದ ಪ್ರದರ್ಶನಕ್ಕಾಗಿ ಎಷ್ಟೆಲ್ಲಾ ಯಾಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಿರಿಲೀಸ್ ಇವೆಂಟ್ ಸಹ ನಡೆಯಲಿದೆ

ಪ್ರಿರಿಲೀಸ್ ಇವೆಂಟ್ ಸಹ ನಡೆಯಲಿದೆ

ಇನ್ನು ವೇದ ಸಿನಿಮಾದ ತೆಲುಗು ವರ್ಷನ್ ಶಿವ ವೇದ ಬಿಡುಗಡೆಗೆ ದೊಡ್ಡದಾಗಿ ಪ್ರಿ ರಿಲೀಸ್ ಇವೆಂಟ್ ಅನ್ನೂ ಸಹ ಆಯೋಜಿಸಲಾಗಿದೆ. ಇಂದು ( ಫೆಬ್ರವರಿ 7 ) ಸಂಜೆ ಆರು ಗಂಟೆಗೆ ಹೈದರಾಬಾದ್‌ನ ದಾಸ್ಪಲ್ಲದಲ್ಲಿ ಶಿವ ವೇದ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ನಂದಮೂರಿ ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದಾರೆ. ಇನ್ನು ಇದನ್ನೆಲ್ಲಾ ಗಮನಿಸಿದ ಸಿನಿ ರಸಿಕರು ವೇದ ಓಟಿಟಿ ಬಿಡುಗಡೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿ ಒಂದು ದಿನದ ಅಂತರದಲ್ಲಿ ಈ ರೀತಿ ಬಿಡುಗಡೆ ಮಾಡಿದರೆ ಚಿತ್ರಮಂದಿರದಲ್ಲಿ ಚಿತ್ರವನ್ನು ಯಾರು ನೋಡ್ತಾರೆ ಎಂದು ಬೇಸರ ಹೊರಹಾಕಿದ್ದಾರೆ.

More from Filmibeat

English summary
Vedha telugu version releasing in theatres on February 9th and in OTT on February 10th. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X