ಅನಿತಾ ಓ ಅನಿತಾ ; 08 ವರ್ಷದ ಬಳಿಕ ದಕ್ಷಿಣಕ್ಕೆ ಬಂದ ''ವೀರ ಕನ್ನಡಿಗ''ನ ಮೊನಾಲಿಸಾ..!
ಬಣ್ಣದ ಲೋಕದಲ್ಲಿ ''ಅದೃಷ್ಟ'' ಹೇಗೆ ಬೇಕಾದರೂ, ಎಲ್ಲಿ ಬೇಕಾದರೂ ಖುಲಾಯಿಸಬಹುದು. ''ಅದೃಷ್ಟ ದೇವತೆ''ಯನ್ನ ಒಲಿಸಿಕೊಳ್ಳಲು ಇಲ್ಲಿ ''ಪಶ್ಚಿಮ''ಕ್ಕೆ ತಲೆ ಮಾಡಿ ಮಲಗಬೇಕು ಅಂತೇನಿಲ್ಲ. ಕೆಲವೊಮ್ಮೆ ''ದಕ್ಷಿಣ'' ದಿಕ್ಕಿಗೆ ತಲೆ ಮಾಡಿ ಮಲಗಿದರು ಸಾಕು ''ಸಂತೋಷ, ಐಶ್ವರ್ಯ'' ಪ್ರಾಪ್ತಿಯಾಗುತ್ತೆ. ಉದಾಹರಣೆಗೆ ''ಅನಿತಾ ಹಸ್ಸಂದಾನಿ'' ಅವರನ್ನೇ ತೆಗೆದುಕೊಳ್ಳಿ.
ಹೌದು, ''ಅನಿತಾ ಹಸ್ಸಂದಾನಿ''.. ''ಅಪ್ಪು'' ಅಭಿನಯದ ''ವೀರ ಕನ್ನಡಿಗ'' ಚಿತ್ರದ ಮೂಲಕ ''ಕನ್ನಡಿಗರಿಗೆ'' ಪರಿಚಯವಾದ ''ಮರಾಠಿ ಮುಲ್ಗಿ''. ಬೆಸಿಕಲಿ ''ಮಹಾರಾಷ್ಟ್ರೀಯನ್ '' ಆದರೂ ''ಅನಿತಾ'' ತಮ್ಮ ಮೊದಲ ''ಕನ್ನಡ''ದ ಪ್ರಯತ್ನದಲ್ಲಿಯೇ ಕನ್ನಡಿಗರ ''ಹೃದಯ''ವನ್ನ ಗೆದ್ದಿದ್ದರು. ಇದಕ್ಕೆ ಸಾಕ್ಷಿ ಅನ್ನುವಂತೆ ''ವೀರ ಕನ್ನಡಿಗ'' ಚಿತ್ರದ ''ಮಸ್ತು ಹುಡುಗಿಯೇ ಯಾಕೆ ಸುಸ್ತು ಮಾಡ್ತಿಯೇ' ಹಾಗೂ''ಸೈ ಸೈ ಮೊನಾಲಿಸಾ'' ಹಾಡುಗಳನ್ನ ಅಪ್ಪು ಅಭಿಮಾನಿಗಳಷ್ಟೇ ಅಲ್ಲ, ಕನ್ನಡದ ಕಲಾರಸಿಕರು ಇವತ್ತು ಕೂಡ ಮರೆತಿಲ್ಲ.

ಇಂಥ ಅನಿತಾ, ವೀರ ಕನ್ನಡಿಗ ಚಿತ್ರದ ನಂತರ ''ಕನ್ನಡ''ದಲ್ಲಿಯೇ ''ನೆಲೆಯೂರುತ್ತಾರೆ '' ಎಂದೇ ಅನೇಕರು ಭಾವಿಸಿದ್ದರು. ಇದಕ್ಕೆ ಪೂರಕವಾಗಿ ''ಗಂಡುಗಲಿ ಕುಮಾರ ರಾಮ'' ಹಾಗೂ ''ಹುಡುಗ ಹುಡಗಿ'' ಚಿತ್ರಗಳಲ್ಲಿ ಅನಿತಾ ಅಭಿನಯಿಸಿದರು ಕೂಡ. ಆದರೆ ಆ ನಂತರ ''ದುರ್ಬಿನ್'' ಹಾಕಿ ಹುಡುಕಿದರು ಕೂಡ ''ಅನಿತಾ ಹಸ್ಸಂದಾನಿ '' ಕನ್ನಡಿಗರಿಗೆ ಕಾಣಲಿಲ್ಲ. ಕೇವಲ ''ಕರ್ನಾಟಕ''ದಿಂದ ಅಷ್ಟೇ ಅಲ್ಲ ''ದಕ್ಷಿಣ ಭಾರತ''ದಿಂದನೇ ಕಣ್ಮರೆಯಾದರು ಅನಿತಾ.
ಆದರೆ ಈಗ ವೃತ್ತಿ ಜೀವನದ ''ಆರಂಭ''ದಲ್ಲಿ ''ಹೆಸರು'' ಹಾಗೂ ''ಕೀರ್ತಿ''ಯನ್ನ ತಂದು ಕೊಟ್ಟ ''ದಕ್ಷಿಣ ಭಾರತೀಯ ಚಿತ್ರರಂಗ '' ಮತ್ತೊಮ್ಮೆ ಅನಿತಾಗೆ ರತ್ನಗಂಬಳಿಯನ್ನ ಹಾಸಿದೆ. ಸ್ವಾಗತವನ್ನೂ ಕೋರಿದೆ. ವ್ಯತ್ಯಾಸ ಏನೆಂದರೆ ಸ್ವಾಗತ ಭಾಷಣ ಇದ್ದಿದ್ದು ''ಕನ್ನಡ''ದಲ್ಲಿ ಅಲ್ಲ. ಬದಲಿಗೆ ತೆಲುಗಿನಲ್ಲಿ.

ಹೌದು. ತೇಜಾ ನಿರ್ದೇಶನದಲ್ಲಿ ಬಂದಿದ್ದ ''ನುವ್ವು ನೇನು'' ಮೂಲಕ ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ಅಖಂಡ ಆಂಧ್ರದೆಲ್ಲೆಡೆ ಮನೆ ಮಾತಾಗಿದ್ದ ಅನಿತಾ, ತೆಲುಗಿನಲ್ಲಿಯೇ ತಮ್ಮ ''ಮೂರನೇ ಇನಿಂಗ್ಸ್'' ನ ಆರಂಭ ಮಾಡಿದ್ದಾರೆ. ''ಓ ಭಾಮಾ ಅಯ್ಯೋ ರಾಮ'' ಚಿತ್ರದ ಮೂಲಕ ''ಟಾಲಿವುಡ್'' ಗೆ ಮರಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ ನೆರವೇರಿದೆ.
''ರಾಮ್ ಗೋಧಾಲ'' ಈ ಚಿತ್ರದ ಡೈರೆಕ್ಟರ್. ''ಹರೀಶ್ ನಲ್ಲ ಮತ್ತು ಪ್ರದೀಪ್ ತಲ್ಲಪು ರೆಡ್ಡಿ'' ಚಿತ್ರದ ನಿರ್ಮಾಪಕರು. ಇನ್ನೂ ''ಸುಹಾಸ್'' ಚಿತ್ರದ ಕಥಾ ನಾಯಕ. ''ಅಂಬಾಜಿ ಪೇಟ್ ಮ್ಯಾರೇಜ್ ಬ್ಯಾಂಡ್'', ''ರೈಟರ್ ಪದ್ಮಭೂಷಣ್'' ಸೇರಿ ಹತ್ ಹತ್ರ ಒಂದೂವರೆ ಡಜನ್ ಸಿನಿಮಾ ಮಾಡಿದ ಅನುಭವ ಇವರದ್ದು.

ಅಂದ್ಹಾಗೇ ಅನಿತಾ ಹಸ್ಸಂದಾನಿ ಈ ಚಿತ್ರದ ''ನಾಯಕಿ'' ಅಲ್ಲ. ಬದಲಿಗೆ ಚಿತ್ರದಲ್ಲಿ ''ಪ್ರಮುಖ ಪಾತ್ರ'' ನಿರ್ವಹಿಸುತ್ತಿದ್ದಾರೆ. ಚಿತ್ರತಂಡ ಹೇಳಿಕೊಂಡಂತೆ ಬಹುಮುಖ್ಯವಾದ ಪಾತ್ರ. ಇವರ ಪಾತ್ರದಿಂದನೇ ಚಿತ್ರಕ್ಕೆ ಒಂದು ''ತಿರುವು'' ಸಿಗಲಿದೆ. ನಾಯಕಿಯ ಪಾತ್ರವನ್ನ ''ಮಾಳವಿಕಾ ಮನೋಜ್'' ನಿರ್ವಹಿಸುತ್ತಿದ್ದಾರೆ.
ಒಟ್ನಲ್ಲಿ ''08 ವರ್ಷ''ದ ಬಳಿಕ ''ಅನಿತಾ'' ಮರಳಿ ''ದಕ್ಷಿಣ''ಕ್ಕೆ ಬಂದಿದ್ದಾರೆ. ತಮ್ಮ ಮೂರನೇ ಇನಿಂಗ್ಸ್ ನ ಆರಂಭ ಮಾಡಿದ್ದಾರೆ. ಅನಿತಾಗೆ ಬೇಕಿರುವ ದೊಡ್ಡ ಗೆಲುವನ್ನ ''ಓ ಭಾಮಾ ಅಯ್ಯೋ ರಾಮ'' ಸಿನಿಮಾ ತಂದು ಕೊಡುತ್ತಾ..? ಅನಿತಾ ದಕ್ಷಿಣದಲ್ಲಿಯೇ ಬ್ಯುಸಿಯಾಗ್ತಾರಾ...? ಉತ್ತರ ಸದ್ಯದಲ್ಲಿಯೇ ಸಿಗಲಿದೆ


Click it and Unblock the Notifications











