ಕರ್ನಾಟಕದಲ್ಲಿ ವೀರಸಿಂಹರೆಡ್ಡಿ ಮೊದಲ ದಿನ ಗಳಿಸಿದ್ದೆಷ್ಟು? ಸೇಲ್ ಆಗಿದ್ದು ಎಷ್ಟು ಟಿಕೆಟ್?

ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡಿರುವ ತಮಿಳು ಹಾಗೂ ತೆಲುಗು ಸಿನಿಮಾಗಳ ಪೈಪೋಟಿ ಜೋರಾಗಿದೆ. ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಬಿಡುಗಡೆಗೊಂಡರೆ, ತೆಲುಗಿನಲ್ಲಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ತುನಿವು ಚಿತ್ರಗಳು ಬಿಡುಗಡೆಗೊಂಡಿವೆ.

ಇನ್ನು ಈ ಚಿತ್ರಗಳ ಪೈಕಿ ಮೊದಲ ದಿನ ಯಾವ ಚಿತ್ರ ಹೆಚ್ಚು ಗಳಿಸಿ ಮುನ್ನಡೆ ಸಾಧಿಸಬಹುದು ಎಂಬ ಕುತೂಹಲ ಸಿನಿ ರಸಿಕರಲ್ಲಿತ್ತು ಹಾಗೂ ತಮಿಳಿನ ಚಿತ್ರಗಳಲ್ಲಿ ಯಾವುದಾದರೊಂದು ಚಿತ್ರ ಹೆಚ್ಚು ಗಳಿಸಬಹುದು ಎಂಬ ಊಹೆಯೂ ಇತ್ತು. ಆದರೆ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರ ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 54 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ವಾರಿಸು ಹಾಗೂ ತುನಿವು ಚಿತ್ರಗಳಿಗಿಂತ ಮೊದಲ ದಿನ ಹೆಚ್ಚು ಗಳಿಕೆಯನ್ನು ಮಾಡಿ ಮುನ್ನಡೆ ಸಾಧಿಸಿದೆ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ.

Veera Simha Reddy grossed 2.87 crores on release day in Karnataka

ಇನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿರುವ ವೀರಸಿಂಹ ರೆಡ್ಡಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಮೊದಲನೇ ದಿನ 2.87 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಇನ್ನು ವೀರಸಿಂಹ ರೆಡ್ಡಿ ಚಿತ್ರದ 1.1 ಲಕ್ಷ ಟಿಕೆಟ್‌ಗಳು ಮೊದಲ ದಿನ ಕರ್ನಾಟಕದಲ್ಲಿ ಮಾರಾಟವಾಗಿವೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ವಾರಿಸು ಹಾಗೂ ತುನಿವು ಚಿತ್ರಗಳನ್ನು ಮೊದಲ ದಿನ ಹಿಂದಿಕ್ಕಿರುವ ವೀರಸಿಂಹ ರೆಡ್ಡಿ ಕರ್ನಾಟಕದಲ್ಲಿ ಅವುಗಳನ್ನು ಹಿಂದಿಕ್ಕುವಲ್ಲಿ ವಿಫಲಗೊಂಡಿದೆ. ಹೌದು, ಕರ್ನಾಟಕದಲ್ಲಿ ತುನಿವು ಮೊದಲ ದಿನ 4.77 ಕೋಟಿ ರೂಪಾಯಿ ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು ಹಾಗೂ ವಾರಿಸು 5.65 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಚಿತ್ರ ಮಾಡಿತ್ತು. ಹೀಗೆ ಮೊದಲ ದಿನದ ಕಲೆಕ್ಷನ್‌ನಲ್ಲಿ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಿರುವ ಚಿತ್ರಗಳ ಪೈಕಿ ವಾರಿಸು ಹೆಚ್ಚು ಕಲೆಕ್ಷನ್ ಮಾಡಿದ್ದು, ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಈ ಕಲೆಕ್ಷನ್ ಅನ್ನು ಹಿಂದಿಕ್ಕಲಿದೆಯಾ ಕಾದು ನೋಡಬೇಕಿದೆ.

More from Filmibeat

English summary
Movies running in Bengaluru main theatres as on January 12. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X