25 ವರ್ಷದ ಬಳಿಕ ಬಾಲಿವುಡ್‌ಗೆ ವೆಂಕಟೇಶ್: ಸಲ್ಮಾನ್ ಜೊತೆ ಜುಗಲ್‌ಬಂಧಿ

ದಕ್ಷಿಣ ಭಾರತದ ನಟರು ಬಾಲಿವುಡ್‌ನಲ್ಲಿ ನಟಿಸುವುದು ತುಸು ಅಪರೂಪವೇ. ಅದರಲ್ಲಿಯೂ ಸ್ಟಾರ್ ನಟರು ಬೇರೆ ಭಾಷೆಗಳಲ್ಲಿ ನಟಿಸುವುದು ಬಹಳ ವಿರಳ. ಮಾಡಿದರೂ ಕೇವಲ ಒಂದೆರಡು ನಿಮಿಷದ ಅತಿಥಿ ಪಾತ್ರವಷ್ಟೆ.

ಆದರೆ ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಈಗ ಹಿಂದಿ ಸಿನಿಮಾದಲ್ಲಿ ನಟಿಸಲು ಹೊರಟಿದ್ದಾರೆ. ಅದೂ ಅಲ್ಲಿನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗೆ!

ವೆಂಕಟೇಶ್‌ಗೆ ಬಾಲಿವುಡ್ ಹೊಸದೇನೂ ಅಲ್ಲ 25 ವರ್ಷಗಳ ಹಿಂದೆಯೇ ವೆಂಕಟೇಶ್ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಈಗ ಮತ್ತೆ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. ಕೇವಲ ಅತಿಥಿ ನಟರಾಗಿ ಅಲ್ಲ ಬದಲಾಗಿ ಪ್ರಧಾನ ನಟರಾಗಿ.

'ಟೈಗರ್ 3' ಚಿತ್ರೀಕರಣ ಮುಗಿಸಿರುವ ಸಲ್ಮಾನ್

'ಟೈಗರ್ 3' ಚಿತ್ರೀಕರಣ ಮುಗಿಸಿರುವ ಸಲ್ಮಾನ್

ಸಲ್ಮಾನ್ ಖಾನ್ ಇದೀಗಷ್ಟೆ 'ಟೈಗರ್ 3' ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಹೊಸ ಸಿನಿಮಾಕ್ಕೆ ತಯಾರಾಗಿದ್ದಾರೆ. ಈ ಸಿನಿಮಾವನ್ನು ಸಲ್ಮಾನ್ ಖಾನ್‌ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲಾ ನಿರ್ಮಾಣ ಮಾಡಲಿದ್ದು, ಸಿನಿಮಾ ಆಕ್ಷನ್ ಕಾಮಿಡಿ ಸಿನಿಮಾ ಆಗಿರಲಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ವೆಂಕಟೇಶ್ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್ ಖಾನ್ ಹಾಗೂ ವೆಂಕಟೇಶ್ ಹಳೆಯ ಸ್ನೇಹಿತರು. ಇಬ್ಬರೂ ಒಟ್ಟಿಗೆ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿಸಿಎಲ್ ನಡೆದಾಗಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿತ್ತು.

ಸಲ್ಲು-ವೆಂಕಿ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ

ಸಲ್ಲು-ವೆಂಕಿ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ

ಸಲ್ಮಾನ್‌ರ ಹೊಸ ಸಿನಿಮಾವು ಮುಂಬೈ-ಹೈದರಾಬಾದ್‌ ಪ್ರದೇಶಗಳ ಇಬ್ಬರು ನಾಯಕರ ಸುತ್ತ ನಡೆಯುವ ಕತೆಯಾಗಿದ್ದು, ಹಾಗಾಗಿಯೇ ವೆಂಕಟೇಶ್ ಅವರನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ಎದುರಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ವೆಂಕಟೇಶ್‌ಗೆ ನಾಯಕಿಯಾಗಿ ದಕ್ಷಿಣ ಭಾರತದ ಜನಪ್ರಿಯ ನಟಿಯನ್ನು ಸಂಪರ್ಕಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ವೆಂಕಟೇಶ್‌ಗೆ ನಾಯಕಿ ಯಾರಾಗಲಿದ್ದಾರೆ ಎಂಬುದಿನ್ನೂ ಖಾತ್ರಿಯಾಗಿಲ್ಲ.

ತೆಲುಗು ಚಿತ್ರರಂಗದೊಂದಿಗೆ ಸಲ್ಮಾನ್ ನಂಟು

ತೆಲುಗು ಚಿತ್ರರಂಗದೊಂದಿಗೆ ಸಲ್ಮಾನ್ ನಂಟು

ಸಲ್ಮಾನ್ ಖಾನ್ ನಟನೆಯ 'ಅಂತಿಮ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಯಶಸ್ಸು ಗಳಿಸಿದೆ. ಅದರ ಬೆನ್ನಲ್ಲೆ 'ಟೈಗರ್ 3' ಸಿನಿಮಾದ ಚಿತ್ರೀಕರಣವನ್ನು ಸಲ್ಮಾನ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಇದರ ಮಧ್ಯೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ 'ಗಾಡ್ ಫಾದರ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್ ನಟಿಸುವುದು ಖಾತ್ರಿಯಾಗಿದೆ. ಇದರ ಜೊತೆಗೆ 'ಪುಷ್ಪ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಸಲ್ಮಾನ್ ಖಾನ್ ಅವರೇ ಪ್ರಧಾನ ಅತಿಥಿ ಸಹ ಅಂತೆ. ಒಟ್ಟಾರೆ ಸಲ್ಮಾನ್ ಖಾನ್ ಇತ್ತೀಚೆಗೆ ತೆಲುಗು ಚಿತ್ರರಂಗದೊಟ್ಟಿಗೆ ಸಂಬಂಧ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

'ಎಫ್ 3' ಸಿನಿಮಾದಲ್ಲಿ ವೆಂಕಟೇಶ್

'ಎಫ್ 3' ಸಿನಿಮಾದಲ್ಲಿ ವೆಂಕಟೇಶ್

ಇನ್ನು ವೆಂಕಟೇಶ್ 1993 ರಲ್ಲಿ 'ಅನಾರಿ' ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಬಳಿಕ 1995 ರಲ್ಲಿ 'ತಕ್ದೀರ್‌ವಾಲ' ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ತೆಲುಗು ಸಿನಿಮಾಗಳಲ್ಲಷ್ಟೆ ನಟಿಸುತ್ತಾ ಬಂದಿದ್ದಾರೆ. ವೆಂಕಟೇಶ್ ಇತ್ತೀಚೆಗೆ ನಟಿಸಿದ್ದ 'ನಾರಪ್ಪ' ಹಾಗೂ 'ದೃಶ್ಯಂ 2' ಎರಡೂ ಸಿನಿಮಾಗಳು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿವೆ. ಇದೀಗ 'ಎಫ್‌ 3' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗಲಿದೆ.

More from Filmibeat

English summary
Telugu star actor Venkatesh acting along with Salman Khan in Hindi movie after 25 years. Sajid Nadiyawala producing the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X