For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಬಳಿಕ ತೆಲುಗಿನಲ್ಲಿ ತಯಾರಾಗುತ್ತಿದೆ 'ದೃಶ್ಯಂ-2'

  |

  ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಮೋಹನ್‌ಲಾಲ್ ನಟಿಸಿ, ಜೀತು ಜೋಸೆಫ್ ನಿರ್ದೇಶಿಸಿದ್ದ ಮಲಯಾಳಂನ ಸೂಪರ್ ಹಿಟ್ 'ದೃಶ್ಯಂ' ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಅದರಲ್ಲಿ ಮುಖ್ಯವಾಗಿ, ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಭಾರತದ ಸಿನಿಮಾ ಎಂಬ ಖ್ಯಾತಿ ಗಳಿಸಿಕೊಂಡಿತು 'ದೃಶ್ಯಂ'.

  ಇದೀಗ 'ದೃಶ್ಯಂ 2' ಬಿಡುಗಡೆ ಆಗಿದ್ದು, ಅದ್ಭುತ ಪ್ರದರ್ಶನ ಕಾಣುತ್ತಿದೆ. ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಜಾರ್ಜ್ ಕುಟ್ಟಿಯ ಚಾಣಕ್ಯತನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಬೇರೆ ಬೇರೆ ಭಾಷೆಗೆ ರಿಮೇಕ್ ಆಗುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಆಗಲೇ ತೆಲುಗು ರಿಮೇಕ್ ಚಿತ್ರೀಕರಣ ಪ್ರಾರಂಭವಾಗಿದೆ.

  'ದೃಶ್ಯಂ 2' ಸಿನಿಮಾಕ್ಕೆ ಆದ ಖರ್ಚೆಷ್ಟು, ಗಳಿಸಿದ ಲಾಭ ಎಷ್ಟು?'ದೃಶ್ಯಂ 2' ಸಿನಿಮಾಕ್ಕೆ ಆದ ಖರ್ಚೆಷ್ಟು, ಗಳಿಸಿದ ಲಾಭ ಎಷ್ಟು?

  ಇತ್ತೀಚಿಗಷ್ಟೆ ದೃಶ್ಯಂ-2 ತೆಲುಗು ರಿಮೇಕ್ ಗೆ ಮುಹೂರ್ತ ಆಗಿದ್ದು, ಚಿತ್ರೀಕರಣ ಪ್ರಾರಂಭವಾಗಿದೆ. ಅಂದಹಾಗೆ 'ದೃಶ್ಯಂ' ಸಿನಿಮಾವನ್ನು ಅದೇ ಹೆಸರಲ್ಲಿ ತೆಲುಗಿಗೆ ರೀಮೇಕ್ ಮಾಡಲಾಗಿತ್ತು. ನಟ ವೆಂಕಟೇಶ್ ನಟಿಸಿದ್ದರು, ಈಗ ಮತ್ತೆ 'ದೃಶ್ಯಂ 2'ನಲ್ಲಿಯೂ ಅವರೇ ನಟಿಸುತ್ತಿದ್ದಾರೆ.

  ವಿಶೇಷ ಎಂದರೆ ದೃಶ್ಯಂ-2 ತೆಲುಗು ರಿಮೇಕ್ ಗೆ ಮೂಲ ನಿರ್ದೇಶಕ ಜೀತು ಜೋಸೆಫ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಪೂಜೆ ನೆರವೇರಿದ್ದು, ಪೂಜೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ದೃಶ್ಯಂ ತೆಲುಗು ರಿಮೇಕ್ ಗೆ ಶ್ರೀಪ್ರಿಯಾ ಅಕ್ಷನ್ ಕಟ್ ಹೇಳಿದ್ದರು. ಆದರೆ ಈ ಬಾರಿ ಮಲಯಾಳಂನ ಮೂಲ ನಿರ್ದೇಶಕರು ಸಾರಥ್ಯ ವಹಿಸಿರುವುದು ತೆಲುಗು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

  ದೃಶ್ಯಂನಲ್ಲಿ ವೆಂಕಟೇಶ್ ಗೆ ನಾಯಕಿಯಾಗಿ ಮೀನಾ ನಟಿಸಿದ್ದರು. ಎರಡನೇ ಭಾಗದಲ್ಲೂ ಮೀನಾ ಮುಂದುವರೆಯುತ್ತಾರಾ ಅಥವಾ ಬೇರೆಯಾರಾದರು ಕಾಣಿಸಿಕೊಳ್ಳುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನು ವಿಶೇಷ ಎಂದರೆ ದೃಶ್ಯಂ-2 ಬೇರೆ ಯಾವೆಲ್ಲ ಭಾಷೆಗೆ ರಿಮೇಕ್ ಆಗಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಈಗಾಗಲೇ ಹಿಂದಿ ರಿಮೇಕ್ ಗೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ.

  ಹೀರೋ ಸಂಪ್ರದಾಯವನ್ನು ಹೊಡೆದುಹಾಕಿದ ದರ್ಶನ್ | Roberrt Audio Launch in Hubli | Darshan

  ಕನ್ನಡದಲ್ಲಿ ನಟ ರವಿಚಂದ್ರನ್ ದೃಶ್ಯಂನಲ್ಲಿ ಮಿಂಚಿದ್ದರು. ದೃಶ್ಯಂ-2 ರಿಮೇಕ್ ಮಾಡುತ್ತಾರಾ ಎಂದು ಕನ್ನಡ ಪ್ರೇಕ್ಷಕರು ಕಾದು ನೋಡಬೇಕು.

  English summary
  Telugu Actor Venkatesh and Jeethu Joseph's Drishyam-2 launched.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X