ಮಾವನ ಮಗಳೊಟ್ಟಿಗೆ ತನ್ನದೆ ಹೋಟೆಲ್‌ನಲ್ಲಿ ನಾಗ ಚೈತನ್ಯ

ಈ ವರ್ಷ ಅತಿಯಾಗಿ ಸುದ್ದಿಯಾದ ಸೆಲೆಬ್ರಿಟಿ ವಿಚ್ಛೇಧನವೆಂದರೆ ಅದು ನಟ ನಾಗ ಚೈತನ್ಯ ಹಾಗೂ ಸಮಂತಾರದ್ದು.

ದಶಕದ ಕಾಲ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಟಾಲಿವುಡ್‌ನ ಕ್ಯೂಟ್ ಜೋಡಿಯೆಂದೇ ಹೆಸರುಗಳಿಸಿತ್ತು. ಆದರೆ ಮದುವೆಯಾದ ಬಳಿಕ ನಾಲ್ಕು ವರ್ಷ ಸಹ ಒಟ್ಟಿಗೆ ಇರಲಾರದೆ ವಿಚ್ಚೇದನ ಪಡೆದು ದೂರಾದರು.

ವಿಚ್ಚೇದನದ ಬಳಿಕ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರ ಹೆಸರುಗಳು ಇತರ ಕೆಲವು ನಟ-ನಟಿಯರೊಟ್ಟಿಗೆ ಕೇಳಿ ಬರುತ್ತಿದೆ. ಆದರೆ ಇಬ್ಬರೂ ಸಹ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ವಿಚ್ಛೇದನದ ಬಳಿಕ ನಾಗ ಚೈತನ್ಯ ನಟನೆಯ ಜೊತೆಗೆ ಹೋಟೆಲ್ ಬ್ಯುಸಿನೆಸ್ ಸಹ ಆರಂಭಿಸಿದ್ದು, ತಮ್ಮ ಹೊಸ ಹೋಟೆಲ್‌ನಲ್ಲಿ ತಮ್ಮ ಮಾವನ ಮಗಳೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಗ್ಗೆ ಅನ್ಯತಾ ಭಾವಿಸುವಂತಿಲ್ಲ.

'ಶೊಯೊ' ಹೆಸರಿನ ಕ್ಲೌಡ್ ಕಿಚನ್

'ಶೊಯೊ' ಹೆಸರಿನ ಕ್ಲೌಡ್ ಕಿಚನ್

ನಾಗ ಚೈತನ್ಯ 'ಶೊಯೊ' ಹೆಸರಿನ ಕ್ಲೌಡ್ ಕಿಚನ್ ತೆರೆದಿದ್ದಾರೆ. ಅಡುಗೆಗಳನ್ನು ತಯಾರಿಸಿ ಫೂಡ್ ಡೆಲಿವರಿ ಆಪ್‌ ಹಾಗೂ ತಮ್ಮದೇ ವೆಬ್‌ಸೈಟ್‌ಗಳ ಮೂಲಕ ಗ್ರಾಹಕರಿಗೆ ತಲುಪಿಸುವ ಬ್ಯುಸಿನೆಸ್ ಮಾಡೆಲ್ ಇದು. ನಾಗಚೈತನ್ಯ ತಮ್ಮ ಕ್ಲೌಡ್ ಕಿಚನ್‌ರ ಜಾಹಿರಾತಿಗೆ ಯೂಟ್ಯೂಬ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದು, ಇದೀಗ ತಮ್ಮ ಮಾವನ ಮಗಳನ್ನು ಕ್ಲೌಡ್ ಕಿಚನ್‌ಗೆ ಕರೆತಂದು ಅವರಿಂದ ಅಡುಗೆ ಮಾಡಿಸಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೆಂಕಟೇಶ್ ಪುತ್ರಿ ಆಶ್ರಿತಾ

ವೆಂಕಟೇಶ್ ಪುತ್ರಿ ಆಶ್ರಿತಾ

ತೆಲುಗಿನ ಸ್ಟಾರ್ ನಟ ವೆಂಕಟೇಶ್, ನಾಗ ಚೈತನ್ಯಗೆ ಸಂಬಂಧದಲ್ಲಿ ಸ್ವಂತ ಸೋದರ ಮಾವ ಆಗಬೇಕು. ನಾಗಚೈತನ್ಯರ ತಾಯಿಯ ಅಣ್ಣ ವೆಂಕಟೇಶ್. ಇದೀಗ ನಟ ವೆಂಕಟೇಶ್‌ರ ಹಿರಿಯ ಪುತ್ರಿ ಆಶ್ರಿತಾ, ನಾಗಚೈತನ್ಯ ಅವರ ಕ್ಲೌಡ್ ಕಿಚನ್‌ಗೆ ಭೇಟಿ ನೀಡಿ ಅಲ್ಲಿ ಫೂಡ್ ವ್ಲಾಗಿಂಗ್ ಮಾಡಿದ್ದಾರೆ. ವಿದೇಶದಲ್ಲಿ ಕಲಿತು ಇತ್ತೀಚೆಗಷ್ಟೆ ಭಾರತಕ್ಕೆ ವಾಪಸ್ಸಾಗಿರುವ ಆಶ್ರಿತಾ 'ಇನ್‌ಫಿನಿಟಿ ಪ್ಲ್ಯಾಟರ್' ಹೆಸರಿನ ಯೂಟ್ಯೂಬ್ ಚಾನೆಲ್‌ ನಡೆಸುತ್ತಿದ್ದು, ಹಲವು ವಿವಿಧ ಆಹಾರ ಭಕ್ಷ್ಯಗಳ ಫೂಡ್ ವ್ಲಾಗಿಂಗ್ ಮಾಡುತ್ತಾರೆ. ಇದೀಗ ತಮ್ಮ ಪ್ರೀತಿಯ ಭಾವ ಅಥವಾ ಮಾವನ ಮಗನೊಟ್ಟಿಗೆ ವಿಡಿಯೋ ಮಾಡಿದ್ದಾರೆ.

ಆಹಾರ, ಜೀವನ, ಕುಟುಂಬದ ಬಗ್ಗೆ ಮಾತುಕತೆ

ಆಹಾರ, ಜೀವನ, ಕುಟುಂಬದ ಬಗ್ಗೆ ಮಾತುಕತೆ

'ಶೋಯಾ' ಎಂದರೇನು? ಕ್ಲೌಡ್ ಕಿಚನ್ ಮಾಡಿದ್ದೇಕೆ? ಯಾವುದು ದೇಶದ ಅಡುಗೆಗಳು ಸಿಗುತ್ತವೆ? ನಿಮಗೆ ಇಷ್ಟದ ಆಹಾರ ಮಾದರಿ ಯಾವುದು? ಇನ್ನಿತರೆ ಹಲವು ಪ್ರಶ್ನೆಗಳನ್ನು ವೆಂಕಟೇಶ್ ಮಗಳು ಆಶ್ರಿತಾ, ತಮ್ಮ ಪ್ರೀತಿಯ ಭಾವನಿಗೆ ಕೇಳಿದ್ದಾರೆ ಸಂದರ್ಶನದಲ್ಲಿ. ಇಬ್ಬರೂ ತಮಾಷೆಯಾಗಿ ಮಾತನಾಡುತ್ತಾ, ಆಹಾರ, ಜೀವನದ ಜೊತೆಗೆ ತಮ್ಮ ಕುಟುಂಬಗಳ ಬಗ್ಗೆಯೂ ಮಾತನಾಡುತ್ತಾ ಒಟ್ಟಿಗೆ ಆಹಾರ ಸೇವಿಸಿದ್ದಾರೆ. ಇಬ್ಬರೂ ಸೇರಿ ಕೆಲವು ಅಡುಗೆಗಳನ್ನು ಮಾಡುವ ಯತ್ನವನ್ನೂ ಸಹ ಮಾಡಿದ್ದಾರೆ.

ಕ್ಲೌಡ್ ಕಿಚನ್ ಆರಂಭಿಸಿದ್ದೇಕೆ ನಾಗಚೈತನ್ಯ?

ಕ್ಲೌಡ್ ಕಿಚನ್ ಆರಂಭಿಸಿದ್ದೇಕೆ ನಾಗಚೈತನ್ಯ?

'ಶೋಯು' ಎಂದರೆ ಸೋಯಾ ಸಾಸ್ ಎಂದು ಅರ್ಥವಂತೆ. ಜಪಾನ್ ಹಾಗೂ ಚೀನಾದ ಅಡುಗೆಗಳಲ್ಲಿ ಅತಿ ಹೆಚ್ಚಿಗೆ ಬಳಕೆಯಾಗುವ ಸಾಸ್ ಸೋಯಾ ಸಾಸ್. ಅಲ್ಲದೆ ಶೋಯು ಹೆಸರು ಸಹ ಚೆನ್ನಾಗಿದೆ ಎನಿಸಿದ್ದರಿಂದ ಇದೇ ಹೆಸರಿಟ್ಟಿದ್ದಾರೆ ನಾಗಚೈತನ್ಯ. ಇನ್ನು ನಾಗ್‌ಗೆ ಜಪಾನಿನ ಅಡುಗೆಗಳೆಂದರೆ ಬಹಳ ಇಷ್ಟವಂತೆ ಇದೇ ಕಾರಣಕ್ಕೆ ಅವರು ಜಪಾನಿನ ಅಡುಗೆಗಳಿಗೆ ಭಾರತದ ಟಚ್ ನೀಡಿ ಇಲ್ಲಿನವರಿಗೆ ಉಣಬಡಿಸುವ ಉದ್ದೇಶದಿಂದ 'ಶೋಯು' ತೆರೆದಿದ್ದಾಗಿ ಹೇಳಿದ್ದಾರೆ. ಅವರ ಕ್ಲೌಡ್ ಕಿಚನ್‌ನಲ್ಲಿ ಜಪಾನಿ ಮಾತ್ರವೇ ಅಲ್ಲದೆ ಪ್ಯಾನ್ ಏಷ್ಯನ್ ಆಹಾರಗಳು ಸಿಗುತ್ತವೆ. ಜತೊಗೆ ಕೆಲವು ಭಾರತೀಯ ಆಹಾರಗಳು ಸಹ.

More from Filmibeat

English summary
Naga Chaithanya running a cloud kitchen Shoyu. Venkatesh's daughter Ashritha visited that kitchen and interviewed her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X