'ನಾರಪ್ಪ'ನ ಆಕ್ರೋಶ ಕಂಡು ಬೆಚ್ಚಿ ಬಿದ್ದ ಟಾಲಿವುಡ್!

ನಟ ವೆಂಕಟೇಶ್ ನಟಿಸಿರುವ 'ನಾರಪ್ಪ' ತೆಲುಗು ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಟ್ರೇಲರ್ ಕಂಡು ಟಾಲಿವುಡ್‌ನ ಹಲವು ಹೀರೋಗಳು ಶಹಭಾಸ್ ಎಂದಿದ್ದಾರೆ. ವೆಂಕಟೇಶ್‌ರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ನಾರಪ್ಪ' ಸಿನಿಮಾವು ತಮಿಳಿನ 'ಅಸುರನ್' ರೀಮೇಕ್ ಆಗಿದ್ದು, ಅಲ್ಲಿ ಧನುಷ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ವೆಂಕಟೇಶ್ ನಿರ್ವಹಿಸಿದ್ದಾರೆ.

ಟ್ರೇಲರ್‌ನಲ್ಲಿ ವೆಂಕಟೇಶ್ ಆಕ್ರೋಶವೇ ತುಂಬಿ ಹೋಗಿದೆ, ಮಚ್ಚು, ಕತ್ತಿ, ಭರ್ಜಿಗಳಿಂದ ಎದುರಾಳಿಗಳ ನೆತ್ತರ ಹರಿಸುತ್ತಿದ್ದಾರೆ ವೆಂಕಟೇಶ್. ಜೊತೆಗೆ ಅಲ್ಲಲ್ಲಿ ದೈನ್ಯ ಭಾವದ ಪ್ರದರ್ಶನವನ್ನೂ ಮಾಡಿದ್ದಾರೆ.

Venkatesh Starer Narappa Telugu Movie Trailer Released

'ನಾರಪ್ಪ' ದಲಿತ ವ್ಯಕ್ತಿಯೊಬ್ಬ ತನ್ನ ಮಗನನ್ನು ಉಳಿಸಿಕೊಳ್ಳಲು ಮಾಡುವ ಹೋರಾಟವಾಗಿದೆ. ತಮಿಳುನಾಡಿನಲ್ಲಿ ನಡೆದ ನಿಜ ಘಟನೆಯಿಂದ ಪ್ರೇರೇಪಿತವಾಗಿ ಬರೆಯಲಾಗಿದ್ದ 'ವಡಕೈ' ಹೆಸರಿನ ಕತೆಯನ್ನು ನಿರ್ದೇಶಕ 'ವೆಟ್ರಿಮಾರನ್' ಸಿನಿಮಾ ಮಾಡಿದ್ದರು, ಅದೇ ಸಿನಿಮಾವನ್ನು ತೆಲುಗಿಗೆ 'ನಾರಪ್ಪ' ಹೆಸರಲ್ಲಿ ರೀಮೇಕ್ ಮಾಡಲಾಗುತ್ತಿದೆ. ತಮಿಳಿನಲ್ಲಿ 'ಅಸುರನ್' ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಇದೇ ಸಿನಿಮಾ ಕನ್ನಡದಲ್ಲಿ ರೀಮೇಕ್ ಆಗಲಿದೆ ಎಂಬ ಸುದ್ದಿ ಇದೆ. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ.

'ನಾರಪ್ಪ' ಸಿನಿಮಾದಲ್ಲಿ ವೆಂಕಟೇಶ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಟ್ರೇಲರ್‌ನಲ್ಲಿ ಗೊತ್ತಾಗುತ್ತಿದೆ. ವಯಸ್ಸಾದ ವ್ಯಕ್ತಿ ಹಾಗೂ ಯುವಕನ ಪಾತ್ರದಲ್ಲಿ ವೆಂಕಟೇಶ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಕನ್ನಡತಿ ಪ್ರಿಯಾಮಣಿ ನಾಯಕಿ, ನಟ ವಶಿಷ್ಟ ಸಿಂಹ, ವಿಲನ್ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ ನಟಿಸಿದ್ದಾರೆ.

Recommended Video

ಇಂದ್ರಜಿತ್ ತುಂಬಾ ದೊಡ್ಡೋರು ಪ್ರೂವ್ ಮಾಡ್ಲಿ ನೋಡೋಣ | Darshan | Indrajit Lankesh | Filmibeat Kannada

'ನಾರಪ್ಪ' ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಜುಲೈ 20ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಶ್ರೀಕಾಂತ್ ಅಡ್ಡಾಲಾ ನಿರ್ದೇಶನ ಮಾಡಿದ್ದು, ಡಿ ಸುರೇಶ್ ಬಾಬು ಹಾಗೂ ಕಲೈಪುಲಿ ಎಸ್ ತನು ನಿರ್ಮಾಣ ಮಾಡಿದ್ದಾರೆ.

More from Filmibeat

English summary
Venkatesh starer Narappa Telugu movie trailer released. Movie will release on Amazon Prime on July 20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X