Prabhas: ಪ್ರಭಾಸ್‌ಗೆ ಇನ್ನು ಸಕ್ಸಸ್ ಸಿಗಲ್ಲಾ ಎಂದ ಜ್ಯೋತಿಷಿ, ಸಲಾರ್ ಚಿತ್ರದ ಬಗ್ಗೆ ಫ್ಯಾನ್ಸ್ ಕಳವಳ!

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿರುವ ಟಾಲಿವುಡ್‌ನ ಖ್ಯಾತ ನಟ ಪ್ರಭಾಸ್. ರಾಜಮೌಳಿ ನಿರ್ದೇಶನದ ಬಿಗ್ ಬಜೆಟ್ ಚಿತ್ರ 'ಬಾಹುಬಲಿ' ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ ಪ್ರಭಾಸ್ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.

'ಬಾಹುಬಲಿ' ಚಿತ್ರದ ಬಳಿಕ ತನ್ನ ಇಮೇಜ್ ಅನ್ನೇ ಬದಲಾಯಿಸಿಕೊಂಡಿರುವ ನಟ ಪ್ರಭಾಸ್‌ಗೆ ದೇಶದೆಲ್ಲೆಡೆ ಅಭಿಮಾನಿಗಳು ಆವರಿಸಿಕೊಂಡಿದ್ದಾರೆ. ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿಯೂ ಕರೆಸಿಕೊಳ್ಳುವ ಪ್ರಭಾಸ್ 'ಬಾಹುಬಲಿ' ಬಳಿಕ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

'ಬಾಹುಬಲಿ' ಚಿತ್ರದ ಬಳಿಕ ಪ್ರಭಾಸ್ ನಟಿಸಿರುವ ಯಾವ ಚಿತ್ರವೂ ಅಷ್ಟಾಗಿ ಹೆಸರು ಮಾಡಿಲ್ಲ. ಇದಕ್ಕೆ ಪೂರಕವೆಂಬಂತೆ ಇದೀಗ ಒಬ್ಬ ಜ್ಯೋತಿಷಿ ಪ್ರಭಾಸ್ ಬಗ್ಗೆ ಆತಂಕಕಾರಿ ಭವಿಷ್ಯ ನುಡಿದ್ದಾರೆ. ಅದೇನು ಅಂತ ಮುಂದೆ ಓದಿ,

ಎರಡೂ ಚಿತ್ರಗಳು ಪ್ರಭಾಸ್‌ಗೆ ಹೆಸರು ತಂದುಕೊಟ್ಟಿಲ್ಲ

ಎರಡೂ ಚಿತ್ರಗಳು ಪ್ರಭಾಸ್‌ಗೆ ಹೆಸರು ತಂದುಕೊಟ್ಟಿಲ್ಲ

'ಬಾಹುಬಲಿ' ಚಿತ್ರದ ಬಳಿಕ ಪ್ರಭಾಸ್ ಬಾಲಿವುಡ್‌ನ 'ಸಾಹೋ' ಮತ್ತು 'ರಾಧೆ ಶ್ಯಾಮ್' ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಚಿತ್ರಗಳು ಅಷ್ಟಾಗಿ ಪ್ರಭಾಸ್‌ಗೆ ಹೆಸರು ತಂದುಕೊಟ್ಟಿಲ್ಲ. ಇವೆರಡೂ ಹೈ ಬಜೆಟ್ ಚಿತ್ರವಾಗಿದ್ರೂ ಕೂಡ ಕಲೆಕ್ಷನ್ ವಿಚಾರದಲ್ಲೂ ಮಂಕಾಗಿತ್ತು. ಹೀಗೆ 'ಬಾಹುಬಲಿ' ಬಳಿಕ ಪ್ರಭಾಸ್ ನಟನೆಯ ಚಿತ್ರಗಳು ಕೈ ಹಿಡಿಯುತ್ತಿಲ್ಲ ಎಂದು ಅಭಿಮಾನಿಗಳು ಚಿಂತಿಸುತ್ತಿರುವಾಗಲೇ ಪ್ರಭಾಸ್ ಸಿನಿಮಾ ಕೆರಿಯರ್ ಬಗ್ಗೆ ಆತಂಕಕಾರಿ ಭವಿಷ್ಯವೊಂದು ಹೊರಬಂದಿದೆ.

ಈ ಹಿಂದೆ ನುಡಿದ ಭವಿಷ್ಯ ಸತ್ಯವಾಗಿದೆ

ಈ ಹಿಂದೆ ನುಡಿದ ಭವಿಷ್ಯ ಸತ್ಯವಾಗಿದೆ

ತೆಲುಗಿನ ಖ್ಯಾತ ಸೆಲೆಬ್ರೆಟಿ ಮತ್ತು ರಾಜಕೀಯ ಜ್ಯೋತಿಷಿ ವೇಣು ಸ್ವಾಮಿ ಈ ಹಿಂದೆ ಹಲವರ ಬಗ್ಗೆ ಭವಿಷ್ಯ ನುಡಿದಿರೋದು ಸತ್ಯವಾಗಿದೆ ಎಂದು ಜನರು ನಂಬುತ್ತಾರೆ. ವೇಣು ಸ್ವಾಮಿ ಏನೇ ಹೇಳಿದರು ಅದು ನೂರಕ್ಕೆ ನೂರರಷ್ಟು ಸರಿ ಇರುತ್ತೆ ಅನ್ನೋದು ಹಲವರ ನಂಬಿಕೆ. ಹಾಗೇ ವೇಣು ಸ್ವಾಮಿ ನುಡಿಯುವ ಮಾತುಗಳು ನಿಜವಾಗಿದ್ದು ಇದೆ. ಇದೀಗ ಇದೇ ವೇಣು ಸ್ವಾಮಿ ಪ್ರಭಾಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇವರು ನುಡಿದಿರುವ ಭವಿಷ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಈ ಬಗ್ಗೆ ಕಳವಳಗೊಂಡಿದ್ದಾರೆ.

ಪ್ರಭಾಸ್‌ಗೆ ಸಕ್ಸಸ್ ಸುಲಭವಾಗಿ ಸಿಗೋದಿಲ್ಲ

ಪ್ರಭಾಸ್‌ಗೆ ಸಕ್ಸಸ್ ಸುಲಭವಾಗಿ ಸಿಗೋದಿಲ್ಲ

ಪ್ರಭಾಸ್ ಸಿನಿ ಕೆರಿಯರ್ ಬಗ್ಗೆ ಭವಿಷ್ಯ ನುಡಿದಿರುವ ವೇಣು ಸ್ವಾಮಿ ''ಪ್ರಭಾಸ್‌ಗೆ ಇನ್ಮುಂದೆ ಸಕ್ಸಸ್ ಎನ್ನುವುದು ಅಷ್ಟೊಂದು ಸುಲಭವಾಗಿ ಸಿಗೋದಿಲ್ಲ. ಪ್ರಭಾಸ್ ಮಾಡುವ ಸಾಲು ಸಾಲು ಸಿನಿಮಾಗಳು ಸೋತು ಹೋಗುತ್ತೆ. ಪ್ರಭಾಸ್ ಅವರನ್ನು ನಂಬಿ ಸಿನಿಮಾ ನಿರ್ಮಿಸಲು ನಿರ್ಮಾಪಕರು ಒಂದು ಕ್ಷಣ ಯೋಚನೆ ಮಾಡುವ ಪರಿಸ್ಥಿತಿ ಖಂಡಿತಾ ಉಂಟಾಗುತ್ತೆ. ಇನ್ಮುಂದೆ ಪ್ರಭಾಸ್ ಈ ಹಿಂದಿನ ಯಶಸ್ವಿ ಪ್ರಭಾಸ್ ಆಗಿ ಕಂಡು ಬರೋದಿಲ್ಲಾ." ಎಂದು ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ

ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ

ಇನ್ನು ನಟ ಪ್ರಭಾಸ್ 'ರಾಧೆ ಶ್ಯಾಮ್' ಬಳಿಕ ಇದೀಗ 'ಸಲಾರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಸಲಾರ್' ಚಿತ್ರವನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಪ್ರಭಾಸ್ ಅಭಿಮಾನಿಗಳು ಪ್ರಶಾಂತ್ ನೀಲ್ ನಿರ್ದೇಶನದ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಸಿನಿಮಾದಿಂದ ಆದರೂ ಪ್ರಭಾಸ್‌ಗೆ ಸಕ್ಸಸ್ ಅನ್ನೋದು ಸಿಗುತ್ತೆ ಅನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ವೇಣು ಸ್ವಾಮಿ ಭವಿಷ್ಯದ ಬೆನ್ನಲ್ಲೆ 'ಸಲಾರ್' ಚಿತ್ರದ ಬಗ್ಗೆ ಫ್ಯಾನ್ಸ್ ಹೋಪ್ಸ್ ಇಟ್ಟುಕೊಂಡಿದ್ದು, ಈ ಸಿನಿಮಾ ಗೆದ್ದೇ ಗೆಲ್ಲಬೇಕು. ವೇಣು ಸ್ವಾಮಿ ಭವಿಷ್ಯ ಸುಳ್ಳಾಗಬೇಕು ಎಂದು ಪ್ರಾರ್ಥಿಸುತ್ತಿದ್ದಾರೆ.

ಸ್ಯಾನ್-ಚೈ ವಿಚ್ಛೇದನದ ಬಗ್ಗೆನೂ ಭವಿಷ್ಯ

ಸ್ಯಾನ್-ಚೈ ವಿಚ್ಛೇದನದ ಬಗ್ಗೆನೂ ಭವಿಷ್ಯ

ಇದೇ ಜ್ಯೋತಿಷಿ ಈ ಹಿಂದೆ ಕೂಡ ಖ್ಯಾತ ನಟಿ ಸಮಂತಾ ಹಾಗೂ ಮಾಜಿ ಪತಿ ನಾಗಚೈತನ್ಯ ಡಿವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದರು. ಇದು ಸಾಕಷ್ಟು ವೈರಲ್ ಕೂಡ ಆಗಿತ್ತು. ಇವರ ಭವಿಷ್ಯದಂತೆ ಇಬ್ಬರು ದೂರವಾಗಿರೋದು ಎಲ್ಲರಿಗೂ ತಿಳಿದಿದೆ. ಸಮಂತಾ ಅಕ್ಟೋಬರ್ 7, 2017ರಂದು ನಾಗಚೈತನ್ಯ ಜೊತೆ ಸಪ್ತಪದಿ ತುಳಿದಿದ್ದರು. ತೆಲುಗು ಚಿತ್ರರಂಗದ ಪ್ರತಿಷ್ಠಿತ ಮನೆತನವಾದ ಅಕ್ಕಿನೇನಿ ಕುಟುಂಬಕ್ಕೆ ಸೊಸೆಯಾಗಿ ಸೇರಿದ್ದರು. ಆದರೆ ಇವರಿಬ್ಬರ ದಾಂಪತ್ಯ ಜೀವನ ಹಲವು ವರ್ಷ ಬಾಳಲಿಲ್ಲ. ಕೆಲವೇ ತಿಂಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದ ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ. ಹೀಗೆ ಆಗುತ್ತೆ ಎಂದು ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ಮುಂಚೆಯೇ ಭವಿಷ್ಯ ನುಡಿದಿದ್ದರು.

More from Filmibeat

English summary
Venu Swamy, in a recent interview, has made harsh comments on pan-India star Prabhas. He claimed that actor Prabhas career would see many downs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X