ಪ್ರಭಾಸ್ ಜಾತಕದ ಪ್ರಕಾರ 'ಸಲಾರ್' ರಿಸಲ್ಟ್ ಏನಾಗುತ್ತೆ? ವೇಣು ಸ್ವಾಮಿ ನುಡಿದ ಭವಿಷ್ಯ ಏನು?
ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇತ್ತೀಚೆಗೆ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದೆ. ಡಿಸೆಂಬರ್ 22ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾವಿರಾರು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ.
ಬಹುಕೋಟಿ ವೆಚ್ಚದಲ್ಲಿ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಪ್ರಭಾಸ್ ಜೋಡಿಯಾದಿ ಶ್ರುತಿ ಹಾಸನ್ ನಟಿಸಿದ್ದಾರೆ. ಇನ್ನುಳಿದಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಕನ್ನಡ ಕಲಾವಿದರಾದ ಗರುಡ ರಾಮ್, ಪ್ರಮೋದ್, ನವೀನ್ ಶಂಕರ್, ದೇವರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.

'ಸಲಾರ್' ಟ್ರೈಲರ್ ನೋಡಿದವರು ಇದು 'ಉಗ್ರಂ' ರೀಮೇಕ್, 'ಉಗ್ರಂ' ಅಪ್‌ಡೇಟೆಡ್ ವರ್ಷನ್ ಎಂದು ಚರ್ಚ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರ ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಬಹಳ ನಿರೀಕ್ಷೆಯಿಂದ ಇದ್ದಾರೆ. ಇನ್ನು ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಬಾಹುಬಲಿ ಸರಣಿ ಬಳಿಕ ಪ್ರಭಾಸ್ ನಟಿಸಿದ 3 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. 'ಸಾಹೋ', 'ರಾಧೆಶ್ಯಾಮ್', 'ಆದಿಪುರುಷ್' ಸಿನಿಮಾಗಳು ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. 'ಸಲಾರ್' ಸಿನಿಮಾ ಭವಿಷ್ಯ ಏನಾಗುತ್ತದೆ ಎನ್ನುವ ಆತಂಕ ಅಭಿಮಾನಿಗಳಲ್ಲಿದೆ. 'ಸಲಾರ್' ರಿಸಲ್ಟ್ ಏನಾಗುತ್ತದೆ? ಎನ್ನುವ ಬಗ್ಗೆ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಏನು ಹೇಳಿದ್ದರು ಎಂದು ಹುಡುಕಾಡುತ್ತಿದ್ದಾರೆ.
ತಮ್ಮ ಭವಿಷ್ಯವಾಣಿಗಳಿಂದ ವೇಣುಸ್ವಾಮಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಾ ಬರ್ತಿದ್ದಾರೆ. ನಾಗಚೈತನ್ಯ ಹಾಗೂ ಸಮಂತಾ ಡಿವೋರ್ಸ್ ಬಗ್ಗೆ ಬಹಳ ಹಿಂದೆಯೇ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಆ ನಿಜವಾದ ಬಳಿಕ ಆತನ ಹೇಳಿಕೆಯನ್ನು ಕೆಲವರು ಗಂಭೀರವಾಗಿ ಪರಿಗಣಿಸಲು ಆರಂಭಿಸಿದ್ದಾರೆ. ವೇಣುಸ್ವಾಮಿ ಸೂಚನೆಯಂತೆ ನಟಿ ರಶ್ಮಿಕಾ ಮಂದಣ್ಣ ತಾರಾದೇವಿ ಪೂಜೆ ಮಾಡಿದ ಬಳಿಕ ಆಕೆಗೆ ದೊಡ್ಡ ಸಕ್ಸಸ್ ಸಿಕ್ತು ಎನ್ನಲಾಗುತ್ತಿದೆ. ಸಾಕಷ್ಟು ನಟಿಯರು ವೇಣುಸ್ವಾಮಿಯಿಂದ ಕರಿಯರ್ ಸಕ್ಸಸ್‌ಗಾಗಿ ಪೂಜೆ ಮಾಡಿಸುತ್ತಾ ಬರ್ತಿದ್ದಾರೆ.
ಪ್ರಭಾಸ್ ವೈಯಕ್ತಿಕ ಜೀವನ ಹಾಗೂ ಸಿನಿಜೀವನದ ಬಗ್ಗೆ ವೇಣುಸ್ವಾಮಿ ಸಾಕಷ್ಟು ಬಾರಿ ಭವಿಷ್ಯ ನುಡಿದಿದ್ದಾರೆ. ಪ್ರಭಾಸ್ ಜಾತಕದ ಪ್ರಕಾರ ಮದುವೆ ಆಗುವುದಿಲ್ಲ, ಆರೋಗ್ಯ ಸಮಸ್ಯೆ ಎದುರಾಗುತ್ತದೆ, ಇನ್ನು ಮುಂದೆ ಸಿನಿಮಾಗಳು ಗೆಲ್ಲುವುದಿಲ್ಲ ಎಂದು ಹೇಳುತ್ತಾ ಬರ್ತಿದ್ದಾರೆ. 'ಆದಿಪುರುಷ್' ರಿಲೀಸ್ ಹೊಸ್ತಿಲಲ್ಲೂ ಕೂಡ ಈ ಸಿನಿಮಾ ಗೆಲ್ಲಲ್ಲ ಎಂದು ಹೇಳಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಸಿನಿಮಾ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು.
"ಪ್ರಭಾಸ್ ಜಾತಕದ ಪ್ರಕಾರ ಬಾಹುಬಲಿ ರೀತಿಯಲ್ಲಿ ಇನ್ನು ಮುಂದೆ ಅವರ ಸಿನಿಮಾಗಳು ಗೆಲ್ಲುವುದಿಲ್ಲ. ಪ್ರಭಾಸ್ ಹೀರೊ ಎಂದ ಮಾತ್ರಕ್ಕೆ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಬೇಕೆಂದು ಇಲ್ಲ. ಸಾಹೋ, ರಾಧೆಶ್ಯಾಮ್ ಸಿನಿಮಾಗಳ ಫಲಿತಾಂಶ ಏನಾಯ್ತು ಎಂದು ಗೊತ್ತೇಯಿದೆ"
"ಪ್ರಭಾಸ್ ಸಿನಿಮಾ ಮಾಡುವುದು ಆತನ ಇಷ್ಟ. ಆತನಿಗೆ ಡಿಮ್ಯಾಂಡ್ ಇದ. ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವುದೆಲ್ಲ ಆತನ ಇಷ್ಟ. ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಮುಖ್ಯ. ಬಾಹುಬಲಿ ಬಳಿಕ ಹೇಳಿಕೊಳ್ಳುವಂತಹ ಸಿನಿಮಾಗಳು ಪ್ರಭಾಸ್‌ಗೆ ಇಲ್ಲ. 2 ಸಿನಿಮಾ ಬಂತು ಎರೂ ಹೋಯಿತು. 'ಆದಿಪುರುಷ್' ಕೂಡ ದೊಡ್ಡದಾಗಿ ಸದ್ದು ಮಾಡಲ್ಲ" ಎಂದಿದ್ದರು.
ಮತ್ತೊಂದು ಸಂದರ್ಶನದಲ್ಲಿ "ಪ್ರಭಾಸ್ ಅವರದ್ದು ತುಲಾರಾಶಿ. ಆತನ ಜಾತಕದ ಪ್ರಕಾರ ಪ್ರಭಾಸ್ ಉತ್ತುಂಗಕ್ಕೆ ಏರಿ ಇಳಿದಿದ್ದು ಆಗಿದೆ. ಪ್ರಭಾಸ್ ಜೊತೆ ಸಿನಿಮಾ ಮಾಡುವ ನಿರ್ಮಾಪಕರೆಲ್ಲಾ ಜಾತಕಗಳನ್ನು ತೋರಿಸಿಕೊಳ್ಳಬೇಕು. ಇನ್ನು ಪ್ರಭಾಸ್ ಸಿನಿಕರಿಯರ್ ಕಷ್ಟ. ಮತ್ತೆ ಆತ ಚಿಕ್ಕ ಸಿನಿಮಾಗಳನ್ನು ಮಾಡಬೇಕು. 'ಈಶ್ವರ್' ರೀತಿಯ ಸಣ್ಣ ಸಿನಿಮಾಗಳನ್ನು ಮಾಡಬೇಕೇ ಹೊರತು ಬೇರೆ ದಾರಿಯಲ್ಲ. ಪ್ರಭಾಸ್ ಜಾತಕದ ಪ್ರಕಾರ ಆತನ ಗ್ರಾಫ್ ಏರಿ ಇಳಿದುಬಿಟ್ಟಿದೆ. ರಾಜಮೌಳಿ ಜಾತಕ ಕೂಡ ಇದೇ ತರ ಇದೆ. ಆದರೆ ರಾಜಮೌಳಿಗೆ ಕೊಂಚ ಸಮಯ ಇದೆ. ಪ್ರಭಾಸ್‌ಗೆ ಇಲ್ಲ, ಬಹಳ ಬೇಗ ಗ್ರಾಫ್ ಬಿದ್ದು ಹೋಗಿದೆ" ಎಂದಿದ್ದರು.
ಸದ್ಯ ವೇಣುಸ್ವಾಮಿ ಹಳೇ ಮಾತುಗಳು ಕೇಳಿ ಯಂಗ್ ರೆಬೆಲ್ ಸ್ಟಾರ್ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. 'ಸಲಾರ್' ಸಿನಿಮಾ ಭವಿಷ್ಯ ಏನಾಗುತ್ತೋ ಎಂದು ಆತಂಕಗೊಂಡಿದ್ದಾರೆ.


Click it and Unblock the Notifications











