For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಮದುವೆ ಮಾಡಿಕೊಂಡರೆ ಸಮಸ್ಯೆ; ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ!

  |

  ಮದುವೆ ವಯಸ್ಸು ಮೀರಿದರೂ ಪ್ರಭಾಸ್ ಮಾತ್ರ ಗೃಹಸ್ಥಾಶ್ರಮಕ್ಕೆ ಕಾಲಿಡುವ ಬಗ್ಗೆ ಯೋಚಿಸುತ್ತಿಲ್ಲ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸ್ತಿದ್ದಾರೆ. ಇಷ್ಟು ದಿನ ಪ್ರಭಾಸ್ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈಗ ನಮ್ಮ ನೆಚ್ಚಿನ ನಟ ಮದುವೆ ಆಗುವುದೇ ಬೇಡ ಅಂತಿದ್ದಾರೆ. ಅದಕ್ಕೆ ಕಾರಣ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ.

  ಪ್ರಭಾಸ್ ಮದುವೆ ಆದರೆ ಅವರ ಪರಿಸ್ಥಿತಿ ದಿವಂಗತ ನಟ ಉದಯ್‌ ಕಿರಣ್‌ರಂತಾಗುತ್ತದೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಕೆಲವರು ಇಂತಹ ಭವಿಷ್ಯವನ್ನು ನಂಬುವುದಿಲ್ಲ. ಆದರೆ ವೇಣುಸ್ವಾಮಿ ಈ ಹಿಂದೆ ಸೆಲೆಬ್ರೆಟಿಗಳ ವಿಚಾರದಲ್ಲಿ ಹೇಳಿರುವ ಕೆಲ ಭವಿಷ್ಯ ನಿಜವಾಗಿದೆ. ಇದೇ ವೇಣುಸ್ವಾಮಿ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ತಾರಾ ದೇವಿ ಪೂಜೆ ಮಾಡಿಸಿದ್ದರು. ಅದರ ಫಲವಾಗಿಯೇ ಆಕೆ ನ್ಯಾಷನಲ್ ಕ್ರಶ್‌ ಆಗಿದ್ದಾರೆ ಎನ್ನಲಾಗುತ್ತಿದೆ.

  ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್. ಹಲವು ವರ್ಷಗಳಿಂದ ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಮದುವೆ ಬಗ್ಗೆ ಚರ್ಚೆ ನಡೀತಿದೆ. ಪ್ರಭಾಸ್- ಅನುಷ್ಕಾ ಶೆಟ್ಟಿ ಮದುವೆ ಆಗುತ್ತಾರೆ ಅನ್ನುವ ಗುಸುಗುಸು ಕೇಳಿಬಂದಿತ್ತು. ಇನ್ನು ಪ್ರಭಾಸ್‌ಗೆ ದೊಡ್ಡಪ್ಪ ಕೃಷ್ಣಂರಾಜು ಹುಡುಗಿಯನ್ನು ಹುಡುಕುತ್ತಿದ್ದಾರೆ. ಶೀಘ್ರದಲ್ಲೇ ಹಸೆಮಣೆ ಏರುತ್ತಾರೆ ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಚಕ್ಕರ್ ಹೊಡೆದಿತ್ತು. ಆದರೆ ಯಾವುದು ಪಕ್ಕಾ ಆಗಲಿಲ್ಲ.

  ಪ್ರಭಾಸ್ ಜಾತಕ ಬಿಚ್ಚಿಟ್ಟ ವೇಣುಸ್ವಾಮಿ

  ಪ್ರಭಾಸ್ ಜಾತಕ ಬಿಚ್ಚಿಟ್ಟ ವೇಣುಸ್ವಾಮಿ

  ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ನಟ ಪ್ರಭಾಸ್ ಜಾತಕವನ್ನು ವಿವರಿಸಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ಲಕ್ಷದಲ್ಲಿ ಒಬ್ಬರಿಗೆ ಇಂತಹ ಜಾತಕ ಇರುತ್ತದೆ. ಸೂರ್ಯ ಚಂದ್ರ ಶುಕ್ರ ಬುಧ ಗ್ರಹಗಳ ಕಾಂಬಿನೇಷನ್‌ನಿಂದ ಪ್ರಭಾಸ್‌ಗೆ ರಾಜಯೋಗವಿದೆ. ಹಾಗಾಗಿ ಸಾಕಷ್ಟು ಖ್ಯಾತಿ ಗಳಿಸುತ್ತಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಸರು ಬರುತ್ತದೆ. ಆದರೆ ಮತ್ತೆರಡು ಗ್ರಹಗಳಿಂದ ಪ್ರಭಾಸ್‌ಗೆ ಸಮಸ್ಯೆ ಎದುರಾಗುತ್ತದೆ ಎಂದಿದ್ದಾರೆ. ಪ್ರಪಂಚದಲ್ಲಿ ಕೋಟಿ ಜನರಲ್ಲಿ ಒಬ್ಬರದು ಇಂತಹ ಜಾತಕ ಇರುತ್ತದೆ. ನಾಲ್ಕು ಗ್ರಹಗಳ ಕಾರಣದಿಂದ ರಾಜಯೋಗ ಸಿಕ್ಕರೂ ಗುರು-ಶನಿ ಗ್ರಹಗಳ ಕಾರಣದಿಂದ ಆ ರಾಜಯೋಗವನ್ನು ಅನುಭವಿಸಲು ಸಾಧ್ಯವಾಗದಂತೆ ಆಗುತ್ತದೆ. ಒಳ್ಳೆ ಯೋಗ ಬಂದಾಗಲೇ ಪ್ರಭಾಸ್‌ಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಕಿಡ್ನಿ, ಲಿವರ್ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಪ್ರಭಾಸ್‌ಗೆ ಎದುರಾಗುತ್ತದೆ" ಎಂದು ವಿವರಿಸಿದ್ದಾರೆ.

  ಮದುವೆ ಆದರೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ

  ಮದುವೆ ಆದರೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ

  "ಪ್ರಭಾಸ್ ಜಾತಕದಲ್ಲಿ ಮದುವೆಗೆ ಸಂಬಂಧಿಸಿ ಸಮಸ್ಯೆ ಇದೆ. ಮದುವೆ ಆಗದೇ ಇರುವುದು, ಮದುವೆ ತಡವಾಗುವುದು, ಅಥವಾ ಮದುವೆ ನಂತರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಮದುವೆ ನಂತರ ಗಂಡ- ಹೆಂಡತಿ ನಡುವೆ ಸಮಸ್ಯೆ ಶುರುವಾಗಬಹುದು. ಆರೋಗ್ಯ ಸಮಸ್ಯೆ ಮುಖ್ಯವಾಗಿ ಕಾಡಬಹುದು" ಎಂದಿದ್ದಾರೆ.

  ಪ್ರಭಾಸ್‌ ಕಥೆ ಆ ನಟನಂತಾಗುತ್ತದೆ

  ಪ್ರಭಾಸ್‌ ಕಥೆ ಆ ನಟನಂತಾಗುತ್ತದೆ

  "ಹುಡುಗಿಯರು ಯಾರನ್ನು ಹೆಚ್ಚು ಇಷ್ಟಪಡುತ್ತಾರೋ ಅಂತಹ ವ್ಯಕ್ತಿ ಹೆಚ್ಚು ದಿನ ಚಿತ್ರರಂಗದಲ್ಲಿ ಇರುವ ಉದಾಹರಣೆ ಇಲ್ಲ. ಅರವಿಂದ್ ಸ್ವಾಮಿ ಇರಬಹುದು, ಉದಯ್ ಕಿರಣ್ ಇರಬಹುದು ಹೀಗೆ ಬಹಳಷ್ಟು ಜನ ಇದ್ದಾರೆ. ಪ್ರಭಾಸ್‌ ಅಂದರೆ ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಇಷ್ಟ. ಹಾಗಾಗಿ ಜಾತಕದಲ್ಲಿ ಈ ಸಮಸ್ಯೆ ಇರುತ್ತದೆ. ಇದಕ್ಕೆ ಪರಿಹಾರ ಮಾಡಿಸಿಕೊಂಡರೆ ಪ್ರಭಾಸ್‌ಗೆ ಒಳ್ಳೆಯದಾಗುತ್ತದೆ" ಎಂದು ತಿಳಿಸಿದ್ದಾರೆ. ಅಂದಹಾಗೆ ಈ ವಿಡಿಯೋ 5 ವರ್ಷಗಳ ಹಿಂದಿನದ್ದು. ಆದರೆ ಈಗ ಮತ್ತೆ ವೈರಲ್ ಆಗಿದೆ.

  ನಿಜವಾಗಿತ್ತು ವೇಣುಸ್ವಾಮಿ ಭವಿಷ್ಯ!

  ನಿಜವಾಗಿತ್ತು ವೇಣುಸ್ವಾಮಿ ಭವಿಷ್ಯ!

  ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯವನ್ನು ಇಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಕ್ಕೆ ಕಾರಣ ಆತ ಈ ಹಿಂದೆ ಹೇಳಿದ್ದಂತಹ ಕೆಲವರು ಭವಿಷ್ಯ ನಿಜವಾಗಿತ್ತು. ಅದರಲ್ಲೂ ಸಮಂತಾ- ನಾಗಚೈತನ್ಯ ಡೈವೋರ್ಸ್‌ ತಗೋತ್ತಾರೆ ಎಂದು ವೇಣುಸ್ವಾಮಿ ಮೊದಲೇ ಹೇಳಿದ್ದರು. ಪ್ರೀತಿಸಿ ಮದುವೆ ಆಗಿದ್ದ ಚೈಸ್ಯಾಮ್ ಡೈವೋರ್ಸ್‌ ಮುಂದಾಗಿದ್ದನ್ನು ಅಭಿಮಾನಿಗಳಿಗೆ ಈ ಕ್ಷಣಕ್ಕೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಇನ್ನು ರಕ್ಷಿತ್ ಶೆಟ್ಟಿಯಿಂದ ದೂರಾದರೆ ರಶ್ಮಿಕಾಗೆ ಸಕ್ಸಸ್ ಸಿಗುತ್ತೆ ಎಂದು ಹೇಳಿದ್ದರಂತೆ. ಅದೇ ಕಾರಣಕ್ಕೆ ಆಕೆ ಹಾಗೆ ಮಾಡಿದ್ದಳು ಎನ್ನಲಾಗುತ್ತಿದೆ.

  English summary
  Venu Swamy Shocking Prediction About Actor Prabhas Future. Know More.
  Wednesday, August 17, 2022, 8:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X