ಚೈತು-ಶೋಭಿತಾ ಮದುವೆ ಜೀವನದ ಬಗ್ಗೆ ವೇಣುಸ್ವಾಮಿ ಶಾಕಿಂಗ್ ಭವಿಷ್ಯ

ತೆಲುಗು ನಟ ನಾಗಚೈತನ್ಯಾ ಹಾಗೂ ನಟಿ ಶೋಬಿತಾ ಧುಲಿಪಾಲ ಮದುವೆ ನಿಶ್ಚಿಯವಾಗಿದೆ. ಇದಕ್ಕೂ ಮುನ್ನ ನಟಿ ಸಮಂತಾರನ್ನು ಮದುವೆ ಆಗಿದ್ದ ಚೈತು ಬಳಿಕ ಡಿವೋರ್ಸ್ ಪಡೆದಿದ್ದರು. ನಾಗಾರ್ಜುನ ಮಗನ ಎರಡನೇ ಮದುವೆ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ.

ಸಮಂತಾ ಅಭಿಮಾನಿಗಳಂತೂ ಚೈತು ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದಕ್ಕೇನಾ ಸ್ಯಾಮ್‌ಗೆ ಡಿವೋರ್ಸ್ ಕೊಟ್ಟಿದ್ದು ಎಂದು ಟ್ರೋಲ್ ಮಾಡುತ್ತಿದ್ದಾರೆ. ನಾಗಾರ್ಜುನ ತಮ್ಮ ಮನೆಯಲ್ಲೇ ಮಗನ ಎಂಗೇಜ್‌ಮೆಂಟ್ ಮಾಡಿಸಿ ಮುಗಿಸಿದ್ದಾರೆ. ಆಗಸ್ಟ್ 8ರಂದು ಅದೃಷ್ಟದ ದಿನ ಎಂದು ಅಂದೇ ಮಗನೊಟ್ಟಿಗೆ ಶೋಭಿತಾ ಮದುವೆ ನಿಶ್ಚಯಿಸಿದ್ದಾರೆ.

Venu swamy shocking prediction on Naga Chaitanya and sobhita dhulipala marriage life

ಚೈತು-ಸ್ಯಾಮ್‌ ಕೂಡ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿತ್ತು. ಅದು ಡಿವೋರ್ಸ್‌ವರೆಗೂ ಹೋಯಿತು. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. 7 ವರ್ಷಗಳ ಪ್ರೀತಿ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿಬಿಟ್ಟಿದ್ದರು. ಇಂದಿಗೂ ಕೆಲವರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಬ್ಬರೂ ದೂರಾಗುತ್ತಾರೆ ಎನ್ನುವ ಗುಸುಗುಸು ಶುರುವಾದಾಗ ಯಾರು ನಂಬಿರಲಿಲ್ಲ. ಮೊನ್ನೆ ಮೊನ್ನೆ ಹನಿಮೂನ್‌ಗೆ ಹೋಗಿಬಂದಂತೆ ಇರುವ ಹಾಟ್‌ ಕಪಲ್ ದೂರಾಗುತ್ತಾರೆ ಎನ್ನುವುದೆಲ್ಲಾ ವದಂತಿ ಅಷ್ಟೇ ಎಂದುಕೊಂಡಿದ್ದರು.

ಅವತ್ತು ಚೈತು-ಸ್ಯಾಮ್ ಸೋಶಿಯಲ್ ಮೀಡಿಯಾದಲ್ಲಿ ಏಕಾಏಕಿ ತಾವಿಬ್ಬರೂ ದೂರಾಗುತ್ತಿರುವ ಬಗ್ಗೆ ಪೋಸ್ಟ್ ಮಾಡಿದ್ದಾಗ ಒಂದು ಕ್ಷಣ ಎಲ್ಲರೂ ಶಾಕ್ ಆಗಿದ್ದರು. ಆದರೆ ಅದಕ್ಕಿಂತ ಮುಂಚೆ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಈ ಬಗ್ಗೆ ಭವಿಷ್ಯ ನುಡಿದಿದ್ದರು. ಚೈತು-ಸ್ಯಾಮ್ ಜಾತಕಗಳ ಪ್ರಕಾರ ಅವಿಬ್ಬರ ಮದುವೆ ಸಂಬಂಧ ಬಹಳ ದಿನ ಉಳಿಯಲ್ಲ ಎಂದಿದ್ದರು. ಆತ ಹೀಗೆ ಹೇಳಿದಾಗ ಎಲ್ಲರೂ ಟೀಕಿಸಿದ್ದರು. ಅದೇ ನಿಜವಾದಾಗ ಹುಬ್ಬೇರಿಸಿದ್ದರು.

Venu swamy shocking prediction on Naga Chaitanya and sobhita dhulipala marriage life

ಅಲ್ಲಿಂದ ಮುಂದೆ ವೇಣುಸ್ವಾಮಿ ಭವಿಷ್ಯವನ್ನು ಕೆಲವರು ಗಂಭೀರವಾಗಿ ನಂಬಲು ಆರಂಭಿಸಿದರು. ಆತನ ಬಳಿ ಪೂಜೆ ಮಾಡಿಸುವವರ ಸಂಖ್ಯೆ ಹೆಚ್ಚಾಯಿತು. ಮೊನ್ನೆ ಮೊನ್ನೆ ಕನ್ನಡ ನಟಿ ನಿಶ್ವಿಕಾ ನಾಯ್ಡು ಸಹ ತಮ್ಮ ವೃತ್ತಿಜೀವನದ ಯಶಸ್ಸಿಗಾಗಿ ಪೂಜೆ ಮಾಡಿಸಿದ್ದಾರೆ. ಇದೆಲ್ಲದರ ನಡುವೆ ಇತ್ತೀಚೆಗೆ ಆಂಧ್ರ ಚುನಾವಣೆ ವಿಚಾರದಲ್ಲಿ ವೇಣುಸ್ವಾಮಿ ಭವಿಷ್ಯ ಸುಳ್ಳಾಗಿತ್ತು. ಬಳಿಕ ನಾನು ಇನ್ನುಮುಂದೆ ಸೆಲೆಬ್ರೆಟಿಗಳ ಬಗ್ಗೆ ಬಹಿರಂಗವಾಗಿ ಭವಿಷ್ಯ ಹೇಳಲ್ಲ ಎಂದಿ ಘೋಷಿಸಿದ್ದರು.

ಕೆಲವೇ ದಿನಗಳಲ್ಲಿ ಮಾತು ಬಲಿಸಿರುವ ವೇಣುಸ್ವಾಮಿ ಚೈತು-ಶೋಭಿತಾ ಮದುವೆ ಜೀವನದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. "ನಾಗ ಚೈತನ್ಯ- ಶೋಭಿತಾ ಧುಲಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನಾಗಾರ್ಜುನ ಅಧಿಕೃತವಾಗಿ ಘೋಷಿಸಿದ್ದಾರೆ. ಯಾವ ಮುಹೂರ್ತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಯಾವ ಜ್ಯೋತಿಷಿಯೂ ಹೇಳಬಲ್ಲರು. ಅವರ ನಿಶ್ಚಿತಾರ್ಥ ಉತ್ತರಾ ನಕ್ಷತ್ರದಲ್ಲಿ ನಡೆದಿದೆ. ನಾಗ ಚೈತನ್ಯಾ ರಾಶಿ ಕರ್ಕಾಟಕ. ಶೋಭಿತಾದು ರಾಶಿ ಧನು ರಾಶಿ. ನಾಗ ಚೈತನ್ಯಗೆ 6 ಮತ್ತು ಶೋಭಿತಾಗೆ 8. ಇಬ್ಬರ ಜಾತಕ ಹೊಂದುವುದಿಲ್ಲ ಎಂದಿದ್ದಾರೆ.

ಸಮಂತಾ, ಶೋಭಿತಾ ಜಾತಕಗಳನ್ನು ನೋಡಿದರೆ ಇಬ್ಬರ ಜಾತಕಗಳಲ್ಲಿ ಶನಿ ದೃಷ್ಟಿ ಕುಜನ ಮೇಲಿದೆ. ಶೋಭಿತಾ ಜಾತಕದಲ್ಲಿ ಶನಿ ದೃಷ್ಟಿ ಶುಕ್ರ, ಗುರುವಿನ ಮೇಲೆಯೂ ಇದೆ. ಇದನ್ನು ನೋಡಿದರೆ 2027ರಿಂದ ಸಮಸ್ಯೆ ಎದುರಾಗುವಂತಿದೆ. ಅಲ್ಲಿಯವರೆಗೂ ಚೈತು-ಸ್ಯಾಮ್ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಇವರಿಬ್ಬರ ದಾಂಪತ್ಯ ಜೀವನಕ್ಕೆ ಒಬ್ಬ ಸ್ತ್ರೀ ಕಾರಣಕ್ಕೆ ಸಮಸ್ಯೆ ಶುರುವಾಗುತ್ತದೆ ಎಂದು ವೇಣುಸ್ವಾಮಿ ಹೇಳಿದ್ದಾರೆ.

ಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ. ಚೈತು-ಸ್ಯಾಮ್‌ಗೆ ನಾನು 100ಕ್ಕೆ 50 ಅಂಕ ಕೊಡ್ತೀನಿ. ಆದರೆ ಚೈತು-ಶೋಬಿತಾಗೆ 10 ಅಂಕ ಮಾತ್ರ ಕೊಡ್ತೀನಿ. ಇದರಲ್ಲೇ ನೀವು ಅರ್ಥ ಮಾಡಿಕೊಳ್ಳಬಹುದು. ನಾನು ಹೇಳುವುದನ್ನು ತಪ್ಪಾಗಿ ತಿಳಿಯಬೇಡಿ. ಎಲ್ಲರೂ ಚೆನ್ನಾಗಿರಬೇಕು ಎಂದೇ ನಾನು ಬಯಸುತ್ತೇನೆ. ಆದರೆ ಗೊತ್ತಿದ್ದೂ ಗೊತ್ತಿದ್ದು ಸಮಸ್ಯೆಯಲ್ಲಿ ಸಿಲುಕುವುದು ಬೇಡ ಎನ್ನುವುದು ನನ್ನ ಕೋರಿಕೆ. ಇವರಿಬ್ಬರೂ ಕಂಡಿತ ದೂರಾಗುತ್ತಾರೆ, ಅದು ಕೂಡ ಒಬ್ಬ ಸ್ತ್ರೀ ಕಾರಣಕ್ಕೆ ಎಂದು ವೇಣುಸ್ವಾಮಿ ಹೇಳಿರುವುದು ವೈರಲ್ ಆಗ್ತಿದೆ.

More from Filmibeat

English summary
Venu swamy reacts on Naga Chaitanya and sobhita dhulipala engagement;
Read more about: naga chaitanya samantha tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X