"ನನ್ನ ಇಬ್ರು ಹೆಣ್ಣು ಮಕ್ಕಳು ಗಂಡಂದಿರಿಗೆ ಡಿವೋರ್ಸ್ ಕೊಟ್ಟು ನಿತ್ಯಾನಂದನ ಜೊತೆಗಿದ್ದಾರೆ": ಕಣ್ಣೀರಿಟ್ಟ ಹಿರಿಯ ನಟ

ದಕ್ಷಿಣ ಭಾರತದ ಹಿರಿಯ ನಟ ಅಶೋಕ್‌ ಕುಮಾರ್ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಶೋಕ್ ಕುಮಾರ್ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಜೊತೆಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಸದ್ಯ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಭಾವುಕರಾಗಿದ್ದಾರೆ.

ಅಶೋಕ್‌ ಕುಮಾರ್ ಒಂದ್ಕಾಲದಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳ ಜೊತೆ ಬಣ್ಣ ಹಚ್ಚಿ ನಟಿಸಿದ್ದರು. ಆರಡಿ ಎರಡು ಇಂಚು ಎತ್ತರದ ಸ್ಪುರದ್ರೂಪಿ ನಟ ಸರಿಯಾದ ಅವಕಾಶಗಳು ಸಿಗದೇ ಚಿತ್ರರಂಗದಿಂದ ದೂರಾಗುವಂತೆ ಆಯಿತು. ನಂತರ ಪ್ರೊಡಕ್ಷನ್ ಮ್ಯಾನೇಜರ್‌ ಆಗಿ ಕೆಲ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಮೊದಲಿಗೆ ನಾನು ಪೊಲೀಸ್ ಆಫೀಸರ್ ಆಗಿ ಕೆಲಸ ಮಾಡಿದೆ. ನಂತರ ಒಂದು ಹೋಟೆಲ್ ಆರಂಭಿಸಿದೆ. ಅದು ಕೈ ಹಿಡಿಯಲಿಲ್ಲ. ಕೊನೆಗೆ ಮದ್ರಾಸ್‌ಗೆ ಹೋಗಿ ಸಿನಿಮಾಗಳಲ್ಲಿ ನಟಿಸಿದೆ. ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಟನೆಯಿಂದ ದೂರಾದೆ ಎಂದಿದ್ದಾರೆ.

Veteran Actor Ashok kumar shocking comments about His daughter Ranjitha and Nithyananda

ಪೋಷಕ ನಟನಾಗಿ, ವಿಲನ್ ಆಗಿ ಒಂದಷ್ಟು ಸಿನಿಮಾಗಳಲ್ಲಿ ಅಶೋಕ್ ಕುಮಾರ್ ನಟಿಸಿದ್ದಾರೆ. 'ಬುದ್ಧಿಮಂತಲು', 'ಅಂದಾಲ ರಾಮುಡು' ಹಾಗೂ 'ಗುರುವಿನ ಮಿಂಚಿನ ಶಿಷ್ಯಲು' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅಶೋಕ್ ಕುಮಾರ್ ತೆಲುಗಿನ ಸುಮನ್‌ ಟಿವಿ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ತಮ್ಮ ಮಗಳು ರಂಜಿತಾ ಎಂದು ಹೇಳಿದ್ದಾರೆ. ಇವತ್ತಿಗೂ ನನ್ನ ಮಗಳು ಆ ಆಶ್ರಮದಲ್ಲಿಯೇ ಇದ್ದಾಳೆ ಎಂದು ತಿಳಿಸಿದ್ದಾರೆ.

ಕುಟುಂಬದ ಬಗ್ಗೆ ಹಿರಿಯ ನಟ ಮಾತು

85 ವರ್ಷ ವಯಸ್ಸಿನ ಅಶೋಕ್ ಕುಮಾರ್ ತಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾ "ಒಂದು ಅರ್ಥದಲ್ಲಿ ನನ್ನ ಕುಟುಂಬ ನನಗೆ ಶತ್ರು ಆಗಿಬಿಡ್ತು. ಹುಡುಗಿ ಹೇಗಿದ್ದಾಳೆ ಅಂತ ನೋಡದೇ ನಾನು ನನ್ನ ಮಡದಿಯನ್ನು ಮದುವೆ ಆಗಿದ್ದೆ. ಮದುವೆ ಮಂಟಪದಲ್ಲಿ ಆಕೆಯನ್ನು ನೋಡಿದಾಗ ನನಗೆ ಇಷ್ಟವಾಗಲಿಲ್ಲ. ಆದರೆ ಬೇರೆ ವಿಧಿಯಿಲ್ಲದೇ ಮದುವೆ ಆಗುವಂತಾಯಿತು. ಇಷ್ಟವಿಲ್ಲದ ಮದುವೆ ಕಾರಣಕ್ಕೆ ಪೊಲೀಸ್ ಕೆಲಸ ಬಿಟ್ಟೆ. ನಂತರ ನನ್ನ ತಪ್ಪಿನ ಅರಿವಾಗಿ ಆಕೆಯನ್ನು ಮದ್ರಾಸ್‌ಗೆ ಕರೆದುಕೊಂಡು ಹೋದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು"

Veteran Actor Ashok kumar shocking comments about His daughter Ranjitha and Nithyananda

ಇಬ್ಬರು ಮಕ್ಕಳು ನಿತ್ಯಾನಂದನ ಜೊತೆಗಿದ್ದಾರೆ

"ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿದೆ. ಅವರು ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟೆ. ಮೊದಲನೇ ಮಗಳು ಮದುವೆ ಆಗಿ ಅಮೆರಿಕಾದಲ್ಲಿ ಇದ್ದಳು. 2ನೇ ಮಗಳು ರಂಜಿತಾ, ನಿತ್ಯಾನಂದ ಸ್ವಾಮಿ ಜೊತೆ ಇದ್ದಾಳೆ ಅಂತಾರೆ. ರಂಜಿತಾ ಹಾಗೂ ನಿತ್ಯಾನಂದ ಸ್ವಾಮಿ ನಡುವಿನ ರಿಲೇಷನ್‌ಶಿಪ್ ಏನು ಅನ್ನೋದು ಗೊತ್ತಿಲ್ಲ. ಆದರೆ ಆ ಫೋಟೊಗಳನ್ನು ನೋಡಿದರೆ ಏನು ಹೇಳಬೇಕು ಎನ್ನುವುದು ಅರ್ಥವಾಗ್ತಿಲ್ಲ" ಎಂದಿದ್ದಾರೆ.

ನಿತ್ಯಾನಂದ ಆಶ್ರಮದಲ್ಲಿ ಮೊದಲನೇ ಮಗಳು

"ಮೊದಲ ಮಗಳನ್ನು ಮದುವೆ ಮಾಡಿಕೊಟ್ಟ ಬಳಿಕ ಆಕೆ ಅಮೆರಿಕಾದಲ್ಲಿ ಇದ್ದಳು. ಆಗಲೇ ಆಕೆ ಅಲ್ಲಿ ನಿತ್ಯಾನಂದ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ಹೋಗುತ್ತಿದ್ದ ರಂಜಿತಾ ಕೂಡ ಆಕೆ ಒಟ್ಟಿಗೆ ಆಶ್ರಮಕ್ಕೆ ಹೋಗಲು ಆರಂಭಿದಳು. ಮುಂದೆ ಇಬ್ಬರು ಗಂಡಂದಿರಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿದರು. ಇವತ್ತಿಗೂ ಅಲ್ಲೇ ಇದ್ದಾರೆ" ಎಂದು ಅಶೋಕ್ ಕುಮಾರ್ ಭಾವುಕರಾಗಿದ್ದಾರೆ.

Veteran Actor Ashok kumar shocking comments about His daughter Ranjitha and Nithyananda

ಒಮ್ಮೆ ನಿತ್ಯಾನಂದನ ಬಳಿ ಗಲಾಟೆ ಮಾಡ್ದೆ

"ನನ್ನು ಮಕ್ಕಳು ಹೀಗೆ ಮನೆ ಬಿಟ್ಟು ನಿತ್ಯಾನಂದನ ಆಶ್ರಮ ಸೇರಿದ್ದು ನೋಡಿ ಒಮ್ಮೆ ಅಲ್ಲಿಗೆ ಹೋಗಿ ಗಲಾಟೆ ಮಾಡಿದ್ದೆ. ನನ್ನ ಮಕ್ಕಳು ಇಲ್ಲಿ ಯಾಕೆ ಇದ್ದಾರೆ? ಅವರನ್ನು ಕಳುಹಿಸಿ ಕೊಡು ಎಂದು ಕೇಳಿದ್ದೆ. ಅದಕ್ಕೆ ಆತನ ಅವರು ಬಂದರೆ ಕರೆದುಕೊಂಡು ಹೋಗು ಎಂದ. ನನ್ನ ಇಬ್ಬರು ಹೆಣ್ಣು ಮಕ್ಕಳು ಇವತ್ತಿಗೂ ಆತನೊಟ್ಟಿಗೆ ಇದ್ದಾರೆ. ಇದೇ ನೋವಿನಲ್ಲಿ ನನ್ನ ಮಡದಿ ಕೊನೆಯುಸಿರೆಳೆದಳು. ನನ್ನ 3ನೇ ಮಗಳು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಇನ್ನುಳಿದ ಇಬ್ಬರು ಈವರೆಗೆ ನನಗೆ ಒಂದು ಕರೆ ಕೂಡ ಮಾಡಲಿಲ್ಲ" ಎಂದು ನೋವು ತೋಡಿಕೊಂಡಿದ್ದಾರೆ.

More from Filmibeat

English summary
Veteran Actor Ashok kumar shocking comments about His daughter Ranjitha and Nithyananda. He shed tears while talking about his two daughters. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X