ಮೆಗಾ ಸ್ಟಾರ್ ಚಿರಂರಜೀವಿ ಯಾರಿಗೂ ಸಹಾಯ ಮಾಡಲ್ಲ: ಹಿರಿಯ ನಟ ಕೆಂಡಾ ಮಂಡಲ!

ತೆಲುಗು ಚಿತ್ರರಂಗದ ಇಬ್ಬರು ಹಿರಿಯ ನಟರಾದ ಕೋಟಾ ಶ್ರೀನಿವಾಸ ರಾವ್ ಮತ್ತು ಮೆಗಾಸ್ಟಾರ್ ಚಿರಂಜೀವಿ ನಡುವಿನ ಮನಸ್ತಾಪ ಹೊಸದೇನಲ್ಲ. ಕೋಟಾ ಶ್ರೀನಿವಾಸ ರಾವ್ ಆಗಾಗ ತೆಲುಗಿನ ಕೆಲವು ಸ್ಟಾರ್ ನಟರ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಹೆಚ್ಚಾಗಿ ಗಮನ ಸೆಳೆಯುತ್ತಾರೆ. ಚಿತ್ರರಂಗದವರನ್ನು ಸಾರ್ವಜನಿಕವಾಗಿ ಟೀಕಿಸಲು ಹಿಂಜರಿಯುವುದಿಲ್ಲ. ಹಲವು ಬಾರಿ ಬೇರೆಯವರ ಬಗ್ಗೆ ಮಾತನಾಡಿ ಸುದ್ದಿ ಆಗಿದ್ದಾರೆ.

ಕೆಲವು ತಿಂಗಳ ಹಿಂದೆ ಚಲನಚಿತ್ರ ಕಲಾವಿದರ ಸಂಘದ ಚುನಾವಣೆಯ ಸಂದರ್ಭದಲ್ಲಿ, ಹಿರಿಯ ನಟ ಮತ್ತು ನಿರ್ಮಾಪಕ ನಾಗಬಾಬು ವಿರುದ್ಧ ಕಟುವಾಗಿ ಟೀಕೆ ಮಾಡಿದ್ದರು. ಈ ಬಾರಿ ಕೋಟಾ ಶ್ರೀನಿವಾಸ ರಾವ್, ಮೆಗಾ ಸ್ಟಾರ್ ಚಿರಂಜೀವಿ ಬಗ್ಗೆ ಮಾತನಾಡಿದ್ದಾರೆ. ಮೆಗಾಸ್ಟಾರ್ ಚಲನಚಿತ್ರ ಕಾರ್ಮಿಕರಿಗಾಗಿ ಆಸ್ಪತ್ರೆಯನ್ನು ಸ್ಥಾಪಿಸುವ ಬಗ್ಗೆ ಘೋಷಿಸಿದ ಬಗ್ಗೆ, ಸಂದರ್ಶನದಲ್ಲಿ ಗೇಲಿ ಮಾಡಿ ಮಾತನಾಡಿದ್ದಾರೆ.

ಚಿರಂಜೀವಿ ಚಿತ್ರಪುರಿ ಕಾಲೋನಿಯಲ್ಲಿ ಆಸ್ಪತ್ರೆಯನ್ನು ತೆರೆಯುವ ಬಗ್ಗೆ ರಾವ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಚಿರಂಜೀವಿ ನಿರ್ಮಿಸುವ ಆಸ್ಪತ್ರೆಗೆ ಯಾರೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅವರ ಪ್ರಕಾರ ಚಿರಂಜೀವಿ ಮೊದಲು ಸಿನಿ ಕಾರ್ಮಿಕರಿಗೆ ಆಹಾರದಂತಹ ಅಗತ್ಯ ವಸ್ತುಗಳನ್ನು ಪೂರೈಸುವತ್ತ ಗಮನ ಹರಿಸಬೇಕು. ಚಿರಂಜೀವಿ ತಮ್ಮ ಸಿನಿಮಾಗಳಲ್ಲಿ ಕಲಾವಿದರಿಗೆ ಪಾತ್ರಗಳನ್ನು ನೀಡುವ ಮೂಲಕ ಸಹಾಯ ಮಾಡಬೇಕು. ಈ ರೀತಿಯ ಸಹಾಯ ಚಿರಂಜೀವಿ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

Veteran Actor Kota Srinivasa Rao Says Megastar Chiranjeevi Not Helping Anyone

ಇತ್ತೀಚೆಗಷ್ಟೇ ತೆಲುಗು ಚಿತ್ರರಂಗ 'ಕಾರ್ಮಿಕ ಫೆಡರೇಶನ್' ಮೇ ಡೇಯಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿರಂಜೀವಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಹೈದರಾಬಾದ್‌ನ ಚಿತ್ರಪುರಿ ಪ್ರದೇಶದಲ್ಲಿ ಚಲನಚಿತ್ರ ಕಾರ್ಮಿಕರಿಗಾಗಿ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಘೋಷಿಸಿದರು.

ಕೃಷ್ಣನಗರ ಭಾಗದಲ್ಲಿ ವಾಸಿಸುತ್ತಿರುವ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಬೇಕಾಗಿದೆ ಎಂದಿದ್ದಾರೆ. ಕೃಷ್ಣಾನಗರ ಪ್ರದೇಶದಲ್ಲಿ ಹಲವು ಸಿನಿಮಾ ಕಾರ್ಮಿಕರು ಕೆಲಸಕ್ಕಾಗಿ ಪರದಾಡುತ್ತಿದ್ದಾರೆ. ತೆಲುಗು ಚಿತ್ರೋದ್ಯಮದಲ್ಲಿ ಸರಿಯಾಗಿ ಕೆಲಸ ಇಲ್ಲದೆ ವ್ಯಸನಿಗಳಾಗುತ್ತಾ ಇದ್ದಾರೆ. ಅನೇಕರು ತಮ್ಮ ಜೀವನವನ್ನು ನಾಶಪಡಿಸಿ ಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Veteran Actor Kota Srinivasa Rao Says Megastar Chiranjeevi Not Helping Anyone

ಇನ್ನು ಸಮಸ್ಯೆ ಎದುರಿಸುತ್ತಿರುವ ಕಾರ್ಮಿಕರಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ ಎಂದು ಕೋಟಾ ಶ್ರೀನಿವಾಸ್ ರಾವ್ ಹೇಳಿಕೊಂಡಿದ್ದಾರೆ. ವೃದ್ಧಾಪ್ಯದಲ್ಲಿ ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರೂ ತೆಲುಗು ಚಿತ್ರರಂಗದ ಕಾರ್ಮಿಕರ ಕಲ್ಯಾಣಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದೇನೆ, ವಯಸ್ಸಾದ ಮೇಲೂ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಹೇಳಿಕೆಯಿಂದ ಹಿರಿಯ ನಟ ಚಿರಂಜೀವಿ ಅಭಿಮಾನಿಗಳು ಮತ್ತು ಕೋಟಾ ಶ್ರೀನಿವಾಸ ರಾವ್ ಅಭಿಮಾನಿಗಳ ನಡುವೆ ಜಾತಿ ಪೈಪೋಟಿ ಹುಟ್ಟಿಕೊಂಡಿದೆ. ಅದರೆ ಇದಕ್ಕೆ ಚಿರಂಜೀವಿ ಈ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

More from Filmibeat

English summary
Veteran Actor Kota Srinivasa Rao Says Megastar Chiranjeevi Not Helping Anyone, Know More Details .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X