"ಚಾನ್ಸ್ ಕೇಳಿದ್ರೆ, ಒಬ್ಬಳನ್ನೇ ರೆಸಾರ್ಟ್‌ಗೆ ಕರೀತಿದ್ರು": ಕಹಿ ಅನುಭವ ಬಿಚ್ಚಿಟ್ಟ 'ಕನ್ನಡತಿ' ಆಮನಿ
ಬೆಂಗಳೂರಿನಲ್ಲಿ ಹುಟ್ಟಿಬೆಳೆದ ನಟಿ ಆಮನಿ ಕನ್ನಡಕ್ಕಿಂತ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಕನ್ನಡದಲ್ಲಿ 'ಬಾಳಿನ ಜ್ಯೋತಿ' ಹಾಗೂ 'ಅಪ್ಪಾಜಿ' ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಹುಭಾಷಾ ನಟಿ ಚಿತ್ರರಂಗದ ಕಾಸ್ಟಿಂಗ್ ಕೌಚ್ ಕರಾಳ ಮುಖದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಅವಕಾಶಕ್ಕೆ ಕೇಳಿಕೊಂಡು ಹೋದರೆ ಅವರು ನೋಡುತ್ತಿದ್ದ ರೀತಿ ಬೇರೆ ತರ ಇರುತ್ತಿತ್ತು ಎಂದಿದ್ದಾರೆ.
ಸಿನಿಮಾ ತಾರೆಯರನ್ನು ನೋಡಿ ಚಿತ್ರರಂಗದತ್ತ ಆಕರ್ಷಿತರಾಗಿ ಸಾಕಷ್ಟು ನಟ, ನಟಿಯರು ಚಿತ್ರಕ್ಕೆ ಬರುತ್ತಾರೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಪ್ರತಿ ಹುಡುಗಿಗೂ ಎದುರಾಗುವುದು ಕಾಸ್ಟಿಂಗ್ ಕೌಚ್ ಸಮಸ್ಯೆ. ಈಗ ಅಂತ ಅಲ್ಲ. ಹಲವು ವರ್ಷಗಳಿಂದ ಪಾತ್ರಕ್ಕಾಗಿ ಪಲ್ಲಂಗ ಎನ್ನುವ ಹೀನ ಸಂಸ್ಕೃತಿ ಚಿತ್ರರಂಗದಲ್ಲಿದೆ. ದಶಕಗಳ ಹಿಂದೆ ಇಂತಹ ನಡೆದ ಇಂತಹ ಕಹಿ ಅನುಭವಗಳನ್ನು ಕೆಲ ನಟಿಯರು ಈಗ ಹಂಚಿಕೊಳ್ಳುತ್ತಿದ್ದಾರೆ.

ಹಿರಿಯ ನಟಿ ಆಮನಿ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದಿದ್ದಾರೆ. ಒಬ್ಬ ನಿರ್ದೇಶಕ ಒಬ್ಬೊಂಟಿಯಾಗಿ ಬರುವಂತೆ ಹೇಳಿದ್ದ ಎಂದು ಹೇಳಿದ್ದಾರೆ. ಚಿತ್ರರಂಗದಲ್ಲಿ ಏನಾದರೂ ಸಾಧಿಸಲು ಬರುವ ನಟಿಯರು ಎಷ್ಟೆಲ್ಲಾ ಸಮಸ್ಯೆ ಎದುರಿಸಬೇಕು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ನಾನು ಸಾಮಾನ್ಯವಾಗಿ ನಮ್ಮ ತಾಯಿ ಜೊತೆ ಆಡಿಷನ್‌ಗಳಿಗೆ ಹೋಗುತ್ತಿದ್ದೆ. ಅವಕಾಶಗಳು ಕೇಳಿಕೊಂಡು ಹೋಗುತ್ತಿದ್ದೆ. ತಾಯಿ ಜೊತೆ ಬಂದರೆ ಕೆಲಸ ನಡೆಯಲ್ಲ ಎನ್ನುತ್ತಿದ್ದರು.
"ಇಂಡಸ್ಟ್ರಿಗೆ ಬರಲು ಅನೇಕ ಸಂಕಷ್ಟದ ಪರಿಸ್ಥಿತಿಗಳನ್ನು ಎದುರಿಸಿದೆ. ಅಡಿಷನ್ಸ್‌ಗಾಗಿ ಕಂಪನಿಗಳಿಗೆ ಹೋದಾಗ ಕೆಲವರು ಕಂಪನಿಗಳಲ್ಲಿ ಸೆಲಕ್ಟ್ ಆಗುತ್ತಿದ್ದೆ. ಕೆಲವೆಡೆ ರಿಜೆಕ್ಟ್ ಮಾಡುತ್ತಿದ್ದರು. ಆದರೆ ಹೇಳ್ತೀವಿ ಎಂದು ಹೇಳಿ ಕಳುಹಿಸುತ್ತಿದ್ದರು. ಹಾಗಂದ್ರೆ ಏನು ಎಂದು ಮೊದಲು ಗೊತ್ತಾಗಲಿಲ್ಲ. ನಂತರ ಫೋನ್ ಮಾಡಿ ಮೇಡಂ ನಿರ್ದೇಶಕರು ಬರೋಕೆ ಐಡಿಯಲ್ ಬೀಚ್ ರೆಸಾರ್ಟ್‌ಗೆ ಬರೋಕೆ ಹೇಳಿದ್ದಾರೆ. ಮೇಕಪ್ ಟೆಸ್ಟ್‌ಗೆ ಎಂದರು. ಅಮ್ಮ ಬರೋದು ಬೇಡ. ನೀವು ಮಾತ್ರ ಒಬ್ಬೊಂಟಿಯಾಗಿ ಬನ್ನಿ ಎಂದಿದ್ದರು."

"ಅವರು ಒಂಟಿಯಾಗಿ ಬರೋಕೆ ಹೇಳಿದರೆ ಕೂಡಲೇ ಅಮ್ಮ ಸಾಧ್ಯವಿಲ್ಲ ಎಂದರು. ಇಬ್ಬರು ಒಟ್ಟಿಗೆ ಬರ್ತೀವಿ ಎಂದರು. ಕೂಡಲೇ ಬೇಡ ಎನ್ನುತ್ತಿದ್ದರು. ಯಾಕೆ ಹೀಗೆ ಹೇಳಿದರು ಎನ್ನುವುದು ಎನ್ನುವುದು ನನಗೆ ನಿಧಾನವಾಗಿ ಅರ್ಥವಾಯಿತು. ಈ ರೀತಿ ಸಾಕಷ್ಟು ಬಾರಿ ಆಗಿದೆ. ಅಮ್ಮ ಇಲ್ಲದೇ ನನ್ನೊಬ್ಬಳನ್ನೇ ಯಾಕೆ ಬರೋಕೆ ಹೇಳುತ್ತಿದ್ದರು ಎನ್ನುವುದು ಗೊತ್ತಾಯಿತು. ಅಡ್ಡದಾರಿಯಲ್ಲಿ ಇಂಡಸ್ಟ್ರಿಗೆ ಬರೋದು ನನಗೆ ಇಷ್ಟ ಇರಲಿಲ್ಲ. ಅದಕ್ಕೆ ನನ್ನ ಬೆಳ್ಳಿತೆರೆ ಎಂಟ್ರಿ 2 ವರ್ಷ ಹಿಡೀತು" ಎಂದಿದ್ದಾರೆ.
"ನಾನು ಆಗ ಓದುತ್ತಿದ್ದೆ. ಓದಿ ಯಾವುದಾದರೂ ಕೆಲಸ ಮಾಡಬಹುದಿತ್ತು. ಹಾಗಾಗಿ ಅಂತಹ ಆಮಿಷಗಳಿಗೆ ಒಳಗಾಗಲಿಲ್ಲ. ಇದನ್ನೆಲ್ಲಾ ನೋಡಿದಾಗ ನನಗೆ ಅರ್ಥವಾಯಿತು ತಂದೆ ಯಾಕೆ ಸಿನಿಮಾ ಸಹವಾಸ ಬೇಡ ಎಂದರು ಅಂತ. ಕೊನೆಗೆ ತಂದೆ ಬೇಡ ಸಿನಿಮಾದಲ್ಲಿ ನಟಿಸೋದು ಎಂದರು. ಆದರೆ ನಾನು ಹಠ ಮಾಡಿದೆ. ಕೊನೆಗೆ ಒಳ್ಳೆ ಅವಕಾಶ ಸಿಕ್ಕಿತು. ಅದಕ್ಕೂ ಮುನ್ನ ಸಹೋದರಿ, ಗೆಳತಿ ಪಾತ್ರಗಳು ಸಿಗುತ್ತಿತ್ತು. ಆದರೆ ಒಪ್ಪಿಕೊಳ್ಳುತ್ತಿರಲಿಲ್ಲ. ನಾಯಕಿಯಾಗಿಯೇ ಗುರ್ತಿಸಿಕೊಳ್ಳಬೇಕು ಎಂದುಕೊಂಡಿದ್ದೆ" ಎಂದು ಆಮನಿ ವಿವರಿಸಿದ್ದಾರೆ.
ನಟಿ ಸೌಂದರ್ಯಗೆ ಆಮನಿ ಆಪ್ತ ಸ್ನೇಹಿತೆ ಆಗಿದ್ದರು. ಕಮಲ್ ಹಾಸನ್, ಜಗಪತಿಬಾಬುರಂತಹ ಸ್ಟಾರ್‌ಗಳ ಜೊತೆ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ 'ಅಪ್ಪಾಜಿ' ಸಿನಿಮಾದಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. "ಏನೇ ಕನ್ನಡತಿ ನೀ ಯಾಕೆ ಹಿಂಗಾಡುತೀ" ಹಾಡು ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ.


Click it and Unblock the Notifications











