"ರಕ್ತದಲ್ಲಿ ಪತ್ರ ಬರೆಯುತ್ತಿದ್ದರು.. ಸಾಯುವ ಮುನ್ನ ನನ್ನ ಪ್ರೀತಿಯನ್ನು ಆ ಹೀರೊಗೆ ಹೇಳುತ್ತೇನೆ": ಜಯಮಾಲಿನಿ
ಹಿರಿಯ ನಟಿ ಜಯಮಾಲಿನಿ ತಮ್ಮ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ಅಂದಕಾಲತ್ತಿಲ್ ಡ್ಯಾನ್ಸರ್ ಆಗಿ ಜಯಮಾಲಿನಿ ಜನಪ್ರಿಯರಾಗಿದ್ದರು. ಕನ್ನಡದ ಹಲವು ಸಿನಿಮಾಗಳಲ್ಲಿ ಮಾದಕ ನೃತ್ಯದಿಂದ ಮೋಡಿ ಮಾಡಿದ್ದರು. ಜ್ಯೋತಿ ಲಕ್ಷ್ಮಿ ತಂಗಿಯಾಗಿದ್ದ ಜಯ ಮಾಲಿನಿ ಅಕ್ಕನ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದವರು. ಒಂದ್ಕಾಲದಲ್ಲಿ ಈಕೆ ಬಗ್ಗೆ ಭಾರೀ ಕ್ರೇಜ್ ಇತ್ತು. ಕೆಲ ಅಭಿಮಾನಿಗಳು ರಕ್ತದಲ್ಲಿ ಪತ್ರ ಬರೆಯುತ್ತಿದ್ದರಂತೆ. ಸಂದರ್ಶನವೊಂದರಲ್ಲಿ ಜಯಮಾಲಿನಿ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಡ್ಯಾನ್ಸರ್ ಆದರೂ ಜಯಮಾಲಿನಿ, ಸ್ಟಾರ್ ನಟಿಯರ ರೇಂಜಿಗೆ ಫಾಲೋಯಿಂಗ್ ಇತ್ತು. ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನೂರಾರು ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್‌ಗಳ ಮೂಲಗ ಕಮಾಲ್ ಮಾಡಿದ್ದರು. ಕನ್ನಡದಲ್ಲಿ 'ಗುರು ಶಿಷ್ಯರು' ಚಿತ್ರದಲ್ಲಿ ಮೊದಲ ಬಾರಿಗೆ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಂದಿವರ್ಧನ ಮಹಾರಾಜರ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಆ ರಾಜ್ಯದ ಅರಮನೆಯ ನೃತ್ಯಗಾರ್ತಿ ರಂಜಿನಿ ಪಾತ್ರದಲ್ಲಿ ಜಯಮಾಲಿನಿ ಮಿಂಚಿದ್ದರು. ಅಲ್ಲಿಂದ ಮುಂದೆ ಕನ್ನಡದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಸಂದರ್ಶನವೊಂದರಲ್ಲಿ ನಟಿ ಜಯಮಾಲಿನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಜನ ನಟರು ಕೂಡ ನನಗೆ ಪ್ರಪೋಸ್ ಮಾಡಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ತಮ್ಮ ಲವ್ ಸ್ಟೋರಿಯನ್ನು ಕೂಡ ವಿವರಿಸಿದ್ದಾರೆ. "ಅವತ್ತಿನ ಕಾಲದಲ್ಲಿ ನನಗೆ ಸಾಕಷ್ಟು ಜನ ಪ್ರಪೋಸ್ ಮಾಡಿದ್ದರು. ಮದುವೆ ಆಗುತ್ತೀವಿ ಎಂದು ದುಂಬಾಲು ಬಿದ್ದಿದ್ದರು. ನನಗೆ ಬರುತ್ತಿದ್ದ ಲವ್ ಲೆಟರ್‌ಗಳನ್ನು ಓದಲು ಒಬ್ಬ ಮ್ಯಾನೇಜರ್ ಇದ್ದರು. ಕೆಲವರು ರಕ್ತದಲ್ಲಿ ಪತ್ರ ಬರೆಯುತ್ತಿದ್ದರು. ಒಬ್ಬ ಮಿಲಿಟರಿ ಆಫೀಸರ್ ಕೂಡ ಪತ್ರ ಬರೆದಿದ್ದರು. ಮದುವೆ ಬಗ್ಗೆ ಪೋಷಕರ ಜೊತೆ ಮಾತನಾಡುತ್ತೀನಿ ಎಂದಿದ್ದರು" ಎಂದು ಹೇಳಿದ್ದಾರೆ.

"ನಮ್ಮ ತಾಯಿಯನ್ನು ಕೇಳಲು ಭಯಬಿದ್ದು ಕೆಲವರು ನಮ್ಮ ಅಕ್ಕ ಜ್ಯೋತಿ ಲಕ್ಷ್ಮಿ ಬಳಿ ಮದುವೆ ವಿಚಾರ ಪ್ರಸ್ತಾಪಿಸುತ್ತಿದ್ದರು. ನನ್ನ ಹಿಂದೆ ಎಷ್ಟೇ ಜನ ಬಿದ್ದರೂ ನಾನು ಮಾತ್ರ ಒಬ್ಬ ಸ್ಟಾರ್ ಹೀರೊನ ಪ್ರೀತಿಸುತ್ತಿದ್ದೆ. ಅವರು ಕೂಡ ನನ್ನನ್ನು ಪ್ರೀತಿಸುತ್ತಿದ್ದರು. ಮೊದಲು ಅವರೇ ಲವ್ ಮಾಡಿದ್ದರು. ಆದರೆ ಇಬ್ಬರು ನಮ್ಮ ಪ್ರೀತಿ ವಿಷಯ ಹೇಳಿಕೊಳ್ಳಲಿಲ್ಲ. ಒಮ್ಮೆ ರಾತ್ರಿ ಶೂಟಿಂಗ್ ವೇಳೆ ಹೇಳಲು ಪ್ರಯತ್ನಿಸಿದರು. ಕೊನೆಗೆ ಧೈರ್ಯ ಸಾಲದೇ ಸುಮ್ಮನಾಗಿದ್ದರು. ಆದರೆ ನನ್ನನ್ನು ರಿಯಲ್ ಲವ್. ನನಗೆ ವಯಸ್ಸಾಗಿ ಸಾಯುವ ಮುನ್ನ ಆತನನ್ನು ಭೇಟಿ ಮಾಡಿ ಈ ವಿಷಯ ಹೇಳುತ್ತೇನೆ. ಅವರು ಇನ್ನು ಬದುಕಿದ್ದಾರೆ. ಅವರಿಗೆ ಮದುವೆ ಆಗಿ ಮಕ್ಕಳಿದ್ದಾರೆ" ಎಂದು ಜಯಮಾಲಿನಿ ಹೇಳಿದ್ದಾರೆ. ಆದರೆ ಆ ಸ್ಟಾರ್ ನಟ ಯಾರು ಎನ್ನುವುದನ್ನು ಮಾತ್ರ ಹೇಳಲಿಲ್ಲ.


Click it and Unblock the Notifications











