"ಸಿನಿಮಾ ನಿರ್ಮಿಸಿ ಸೋಲುಂಡ ಸಿಲ್ಕ್ ಸ್ಮಿತಾ.. ಆಕೆ ಸಾವಿಗೆ ಕಾರಣ ಆತನಿಗೆ ಮಾತ್ರ ಗೊತ್ತು": ಕಾಕಿನಾಡ ಶ್ಯಾಮಲಾ
80ರ ದಶಕದಲ್ಲಿ ಸೆಕ್ಸ್ ಸಿಂಬಲ್ ಆಗಿ ಸಂಚಲನ ಸೃಷ್ಟಿಸಿದ ನಟಿ ಸಿಲ್ಕ್ ಸ್ಮಿತಾ. ಹಳ್ಳಿ ಹುಡುಗಿ ವಿಜಯಲಕ್ಷ್ಮಿ ವದ್ಲಪಟಿ ಮುಂದೆ ಸಿಲ್ಕ್ ಸ್ಮಿತಾ ಆಗಿ ಸೌತ್ ಸಿನಿ ಇಂಡಸ್ಟ್ರಿ ಶೇಕ್ ಮಾಡಿದ್ದರು. 1996ರಲ್ಲಿ ಆಕೆ ತನ್ನ 35ನೇ ವಯಸ್ಸಿನಲ್ಲಿ ದಿಢೀರ್ ನಿಧನರಾಗಿದ್ದರು. ಆಕೆಯ ಸಾವಿಗೆ ಕಾರಣ ಏನು ಎನ್ನುವುದು ಇನ್ನು ನಿಗೂಢವಾಗಿಯೇ ಇದೆ. ಈ ಬಗ್ಗೆ ತೆಲುಗು ನಟಿ ಕಾಕಿನಾಡ ಶ್ಯಾಮಲಾ ಮಾತನಾಡಿದ್ದಾರೆ.
ಸಿಲ್ಕ್ ಸ್ಮಿತಾ ಚೆನ್ನೈ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾನವನ್ನಪ್ಪಿದ್ದನ್ನು ಯಾರು ಮರೆತ್ತಿಲ್ಲ. ಅದರಲ್ಲೂ ಆಕೆಯ ಆಪ್ತರು ಅದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಸಿಲ್ಕ್ ಸ್ಮಿತಾ ನಿಧನ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಆಕೆಯ ಜೊತೆ ಒಡನಾಟದಲ್ಲಿದ್ದ ಹಿರಿಯ ನಟಿ ಕಾಕಿನಾಡ ಶ್ಯಾಮಲಾ ಸಂದರ್ಶನವೊಂದರಲ್ಲಿ ಆಸಕ್ತಿಕರ ಕಾಮೆಂಟ್ಸ್ ಮಾಡಿದ್ದಾರೆ. ಸಿಲ್ಕ್ ಸ್ಮಿತಾ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

"ನಾನು ಸಾಕಷ್ಟು ಸಿನಿಮಾಗಳಿಗೆ ಫೈನಾನ್ಸ್ ಮಾಡಿದ್ದೀನಿ. ಸಿಲ್ಕ್ ಸ್ಮಿತಾ ಸ್ವಂತವಾಗಿ ನಿರ್ಮಿಸಿದ ಚಿತ್ರವೊಂದಕ್ಕೂ ಫೈನಾನ್ಸ್ ಮಾಡಿದ್ದೆ. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಅದರಿಂದ ಆಕೆ ಹಣ, ಆಸ್ತಿ ಎಲ್ಲಾ ಕಳೆದುಕೊಂಡಳು. ಸಾಕಷ್ಟು ಸಾಲ ಮಾಡುವಂತಾಯಿತು. ಆದರೆ ಯಾಕೆ ಯಾರೊಬ್ಬರ ಹಣವನ್ನು ಉಳಿಸಿಕೊಳ್ಳಲಿಲ್ಲ. ಎಲ್ಲರ ಸಾಲವನ್ನು ತೀರಿಸಿದ್ದಳು. ಆಕೆಯದ್ದು ಬಹಳ ಒಳ್ಳೆಯ ವ್ಯಕ್ತಿತ್ವ. ಆಕೆ ತೆರೆಮೇಲೆ ಕಾಣಿಸಿಕೊಂಡಿದ್ದು ಬೇರೆ, ನಿಜಜೀವನದಲ್ಲಿ ಇದ್ದಿದ್ದೇ ಬೇರೆ"
"ಎಲ್ಲಾ ಸಾಲವನ್ನು ತೀರಿಸಿದ್ದ ಸಿಲ್ಕ್ ಸ್ಮಿತಾ ಯಾವುದೇ ಸಮಸ್ಯೆ ಇಲ್ಲದೇ ಇದ್ದರು. ಆದರೆ ಇದ್ದಕ್ಕಿದ್ದಂತೆ ಕಣ್ಮುಚ್ಚಿದ್ದರು". ಆಕೆಯದ್ದು ಕೊಲೆ ಎಂದು ಕೆಲವರು ಹೇಳುತ್ತಾರೆ, ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ಕೆಲವರು ಹೇಳುತ್ತಾರೆ, ಯಾವುದು ಸತ್ಯ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಾಕಿನಾಡ ಶ್ಯಾಮಲಾ "ನಿಜ ಏನು ಅನ್ನುವುದು ಆ ದೇವರಿಗೆ ಮಾತ್ರ ಗೊತ್ತು" ಎಂದಿದ್ದಾರೆ. 200ಕ್ಕೂ ಅಧಿಕ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ಶ್ಯಾಮಲಾ ದಶಕಗಳ ಹಿಂದೆ ಫೈನಾನ್ಸ್ ಕೂಡ ಮಾಡುತ್ತಿದ್ದರು.

ಇನ್ನು ಮಾದಕ ತಾರೆಯಾಗಿ ಚಿತ್ರರಂಗದಲ್ಲಿ ಮಿಂಚಿದ ಸಿಲ್ಕ್ ಸ್ಮಿತಾ ಹೆಚ್ಚು ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಸಿನಿಮಾಗಳಲ್ಲಿ ಕುಣಿದು ರಂಜಿಸಿದ ಚೆಲುವೆ ಬಾಲಿವುಡ್ ಸಿನಿಮಾಗಳಲ್ಲೂ ಮಿಂಚಿದ್ದರು. ಆಕೆ ಬಿಂದಾಸ್ ಸಾಂಗ್‌ಗಳಿಂದ ಹೆಚ್ಚು ಜನಪ್ರಿಯತೆ ಗಳಿಸಿದರು. ಚಿಕ್ಕಂದಿನಲ್ಲೇ ಮದುವೆಯಾದ ವಿಜಯಲಕ್ಷ್ಮಿ ಅತ್ತೆ ಮನೆಯ ಕಿರುಕುಳ ತಾಳಲಾರದೇ ಮದ್ರಾಸ್‌ಗೆ ಓಡಿ ಹೋಗಿದ್ದರು.
ಕೈಯಲ್ಲಿ ಹಣ ಇರಲಿಲ್ಲ. ಮದ್ರಾಸ್‌ನಲ್ಲಿ ಯಾರು ಗುರುತು ಪರಿಚಯದವರು ಇರಲಿಲ್ಲ. ಬದುಕಬೇಕು ಎನ್ನುವ ಹಠ ಆಕೆಯನ್ನು ಚಿತ್ರರಂಗದತ್ತ ವಾಲುವಂತೆ ಮಾಡಿತ್ತು. ನಿಧಾನವಾಗಿ ಪ್ರತಿಯೊಂದನ್ನು ಕಲಿತು ಮುಂದೆ ಸ್ಟಾರ್ ಪಟ್ಟಕ್ಕೇರಿದರು. 2011ರಲ್ಲಿ ಸಿಲ್ಕ್ ಸ್ಮಿತಾ ಜೀವನನ್ನಾಧರಿಸಿ ಬಾಲಿವುಡ್‌ನಲ್ಲಿ 'ಡರ್ಟಿ ಪಿಕ್ಚರ್' ಸಿನಿಮಾ ಮೂಡಿ ಬಂತು. ಈ ಚಿತ್ರದಲ್ಲಿ ವಿದ್ಯಾಬಾಲನ್ ಸಿಲ್ಕ್ ಸ್ಮಿತಾ ಪಾತ್ರಕ್ಕೆ ಜೀವ ತುಂಬಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.

ಸಿಲ್ಕ್ ಸ್ಮಿತಾ ಕೆಲ ಸಿನಿಮಾಗಳಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. 'ಗೆದ್ದಮಗ' ಕನ್ನಡದಲ್ಲಿ ಆಕೆ ಕಾಣಿಸಿಕೊಂಡ ಮೊದಲ ಸಿನಿಮಾ. 'ಪ್ರಚಂಡ ಕುಳ್ಳ', 'ಕುಂಕುಮ ತಂದ ಸೌಭಾಗ್ಯ', 'ಟೈಗರ್', 'ಹಳ್ಳಿಮೇಷ್ಟ್ರು', 'ಅಳಿಮಯ್ಯ', 'ಚಿನ್ನ', 'ಲಾಕಪ್ ಡೆತ್' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆದರೆ ಆಕೆ ನಟಿಸಿದ್ದಕ್ಕಿಂತ ಐಟಂ ಡ್ಯಾನ್ಸರ್ ಆಗಿ ಕುಣಿದಿದ್ದೇ ಹೆಚ್ಚು.


Click it and Unblock the Notifications











