ಜನಪ್ರಿಯ ನಟ ಕೋಟ ಶ್ರೀನಿವಾಸ್ ರಾವ್ ಇನ್ನಿಲ್ಲ

ಪ್ರಮುಖ ತೆಲುಗು ನಟ ಕೋಟ ಶ್ರೀನಿವಾಸ್ ರಾವ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ ಫಿಲ್ಮ್‌ನಗರ್‌ನಲ್ಲಿರುವ ನಿವಾಸದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

1942 ಜುಲೈ 10ರಂದು ಕೃಷ್ಣಜಿಲ್ಲೆಯ ಕಂಕಿಪಾಡುನಲ್ಲಿ ಕೋಟ ಶ್ರೀನಿವಾಸ್ ರಾವ್ ಜನಿಸಿದ್ದರು. ಚಿತ್ರರಂಗಕ್ಕೆ ಬರುವ ಮುನ್ನ ಅವರು ಸ್ಟೇಟ್‌ ಬ್ಯಾಂಕ್‌ ಉದ್ಯೋಗಿ ಆಗಿದ್ದರು. ತೆಲುಗು ಮಾತ್ರವಲ್ಲದೇ ತಮಿಳು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. 4 ಚಿತ್ರಗಳಲ್ಲಿನ ನಟನೆಗಾಗಿ ಆಂಧ್ರ ರಾಜ್ಯಪ್ರಶಸ್ತಿಗಳನ್ನು ಪಡೆದಿದ್ದರು. ಖಳನಾಯಕನಾಗಿ ಹಾಸ್ಯನಟನಾಗಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಬಣ್ಣ ಹಚ್ಚಿದ್ದರು.

Veteran Telugu Actor Kota Srinivas Rao Passes Away at 83 in Hyderabad

ಕೋಟ ಶ್ರೀನಿವಾಸ್ ರಾವ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. 2010ರ ಜೂನ್ 21ರಂದು ಅವರ ಮಗ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದನು. 4 ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ಕೋಟ ಶ್ರೀನಿವಾಸ್ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. 700ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಪದವಿ ಪಡೆದ ಬಳಿಕ ಬ್ಯಾಂಕ್ ಉದ್ಯೋಗಿ ಆಗಿ ಸೇರಿದ್ದರು. ಆದರೆ ನಟನೆಯ ವ್ಯಾಮೋಹ ಬಿಟ್ಟು ಹೋಗಲಿಲ್ಲ.

ಮಗನ ಅಗಲಿಕೆ ಬಳಿಕ ಕೋಟ ಶ್ರೀನಿವಾಸ್ ರಾವ್ ಬಹಳ ನೊಂದಿದ್ದರು. ಅವರ ಸಹೋದರ ಕೋಟ ಶಂಕರ್‌ ರಾವ್ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 2015ರಲ್ಲಿ ಕೋಟ ಶ್ರೀನಿವಾಸ್ ರಾವ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು. 1978ರಲ್ಲಿ ಬಂದ ಚಿರಂಜೀವಿ ನಟನೆಯ 'ಪ್ರಾಣಂ ಖರೀದು' ಚಿತ್ರದ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು.

ಜನಪ್ರಿಯ ಚಿತ್ರಗಳು

ತೆಲುಗಿನ ಸ್ಟಾರ್ ನಟರಿಂದ ಇತ್ತೀಚೆಗೆ ಬಂದ ಯುವ ನಟರವರೆಗೆ ಎಲ್ಲರ ಜೊತೆಗೂ ಕೋಟ ಶ್ರೀನಿವಾಸ್ ರಾವ್ ಬಣ್ಣ ಹಚ್ಚಿದ್ದರು. 1999ರಿಂದ 2004ರವರೆಗೆ ಪೂರ್ವ ವಿಜಯವಾಡದ ಬಿಜೆಪಿ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. 'ಅತ್ತಾರಿಂಟಿಕಿ ದಾರೇದಿ', 'ಸನ್ ಆಫ್ ಸತ್ಯಮೂರ್ತಿ', 'ಸರ್ಕಾರ್', 'ಬೊಮ್ಮರಿಲ್ಲು', 'ಛತ್ರಪತಿ', 'ಆ ನಲುಗುರು', 'ಮಲ್ಲೇಶ್ವರಿ', 'ಈಡಿಯಟ್', 'ಗಣೇಶ್', 'ಶಿವ', 'ಅಹಾ ನಾ ಪೆಳ್ಳಂಟ', 'ರೇಪಟಿ ಪೌರುಲು', 'ಪ್ರತಿಘಟನ', 'ಅನಗನಗ ಒಕರೋಜು', 'ಶತ್ರುವು' ಕೋಟ ಶ್ರೀನಿವಾಸ್ ರಾವ್ ನಟಿಸಿದ ಕೆಲ ಹಿಟ್ ಸಿನಿಮಾಗಳು.

Veteran Telugu Actor Kota Srinivas Rao Passes Away at 83 in Hyderabad

ಕೋಟ ಕನ್ನಡ ಚಿತ್ರಗಳ ಪಟ್ಟಿ

1997ರಲ್ಲಿ ಬಂದಿದ್ದ 'ಲೇಡಿ ಕಮೀಷನರ್' ಚಿತ್ರದ ಮೂಲಕ ಕೋಟ ಶ್ರೀನಿವಾಸ್ ರಾವ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಉಪೇಂದ್ರ ನಟನೆಯ 'ರಕ್ತ ಕಣ್ಣೀರು' ಚಿತ್ರದ ಹಾಸ್ಯ ಪಾತ್ರದಲ್ಲಿ ಮಿಂಚಿದ್ದರು. ಆದಿತ್ಯ- ರಕ್ಷಿತಾ ಜೋಡಿ ನಟನೆಯ 'ಲವ್', ಪುನೀತ್ ರಾಜ್‌ಕುಮಾರ್ ಅಭಿನಯದ 'ನಮ್ಮ ಬಸವ', ಅದೇ ರೀತಿ ಸುದೀಪ್ ನಟನೆಯ 'ನಮ್ಮಣ್ಣ' ಸೇರಿದಂತೆ ಏಳೆಂಟು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆರ್. ಚಂದ್ರು ನಿರ್ದೇಶನದ 'ಕಬ್ಜ' ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ.

ಬಹುಮುಖ ಪ್ರತಿಭೆ

ನಟನೆ ಮಾತ್ರವಲ್ಲದೇ ಡಬ್ಬಿಂಗ್ ಕಂಠದಾನ ಕಲಾವಿದರಾಗಿಯೂ ಕೋಟ ಶ್ರೀನಿವಾಸ್ ರಾವ್ ಗುರ್ತಿಸಿಕೊಂಡಿದ್ದರು. ಕೆಲ ತಮಿಳು ಸಿನಿಮಾಗಳು ತೆಲುಗಿಗೆ ಡಬ್ ಆದಾಗ ಗೌಂಡಮಣಿ, ಮಣಿವಣ್ಣನ್ ರೀತಿಯ ಕಲಾವಿದರಿಗೆ ವಾಯ್ಸ್ ಡಬ್ ಮಾಡಿದ್ದರು. 'ಸಿಸಿಂದ್ರಿ' ಹಾಗೂ 'ಗಬ್ಬರ್ ಸಿಂಗ್' ಚಿತ್ರಗಳಲ್ಲಿ ಗಾಯಕರಾಗಿಯೂ ಹಾಡು ಹಾಡಿದ್ದರು.

More from Filmibeat

English summary
Telugu actor Kota Srinivas Rao, known for his iconic villain and comedic roles, passed away
Read more about: actor tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X