twitter
    For Quick Alerts
    ALLOW NOTIFICATIONS  
    For Daily Alerts

    ತಾರಾ ನಿರ್ದೇಶಕ ಪಿ ಚಂದ್ರಶೇಖರ್ ರೆಡ್ಡಿ ನಿಧನ

    |

    ತೆಲುಗು, ತಮಿಳು ಚಿತ್ರರಂಗದ ಜನಪ್ರಿಯ ಸಿನಿಮಾ ನಿರ್ದೇಶಕ ಪಿ ಚಂದ್ರಶೇಖರ್ ರೆಡ್ಡಿ ಸೋಮವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.

    ಸೀನಿಯರ್ ಎನ್‌ಟಿಆರ್, ನಾಗೇಶ್ವರ್ ರಾವ್, ಸೂಪರ್ ಸ್ಟಾರ್ ಕೃಷ್ಣ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟರುಗಳಿಗೆ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ರೆಡ್ಡಿ ಹಲವು ದಿನಗಳಿಂದಲೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. 86 ವರ್ಷ ವಯಸ್ಸಾಗಿದ್ದ ಚಂದ್ರಶೇಖರ್ ರೆಡ್ಡಿ ಚೆನ್ನೈನಲ್ಲಿ ವಾಸವಾಗಿದ್ದರು. ಅಲ್ಲಿಯೇ ಇಂದು ತಮ್ಮ ಕೊನೆಯುಸಿರೆಳೆದಿದ್ದಾರೆ.

    1959 ರಲ್ಲಿ ಚಿತ್ರರಂಗ ಪ್ರವೇಶಿಸಿದ ಚಂದ್ರಶೇಖರ್ ರೆಡ್ಡಿ, ಆಗಿನ ಕಾಲದ ಅತ್ಯುತ್ತಮ ನಿರ್ದೇಶಕರುಗಳಾದ ಅದುರ್ತಿ ಸುಬ್ಬಾ ರಾವ್, ಮಧುಸೂದನ ರಾವ್ ಸಹಿತ ಹಲವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಬಳಿಕ 1971ರಲ್ಲಿ ತಮ್ಮ ಮೊದಲ ಸಿನಿಮಾ 'ಅನುರಾಧಾ' ನಿರ್ದೇಶನ ಮಾಡಿದರು.

    Veteran Telugu Movie Director P Chandrashekhar Reddy Passed Away

    ಪಿಸಿ ರೆಡ್ಡಿ ಎಂದೇ ಜನಪ್ರಿಯರಾಗಿದ್ದ ಪಿ ಚಂದ್ರಶೇಖರ ರೆಡ್ಡಿ, ನಂದಮೂರಿ ತಾರಕರಾಮಾ ರಾವ್ (ಎನ್‌ಟಿಆರ್), ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್‌ಆರ್), ಸೂಪರ್ ಸ್ಟಾರ್ ಕೃಷ್ಣ, ಶೋಬನ್ ಬಾಬು ಸೇರಿದಂತೆ ಹಲವು ಖ್ಯಾತ ನಟರಿಗೆ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹಲವು ಆಲ್‌ ಟೈಮ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲಿಯೂ ಸೂಪರ್ ಸ್ಟಾರ್ ಕೃಷ್ಣ ಅವರಿಗಾಗಿ ಹಲವು ಸಿನಿಮಾಗಳನ್ನು ಪಿಸಿ ರೆಡ್ಡಿ ನಿರ್ದೇಶನ ಮಾಡಿದ್ದರು.

    ಸುಮಾರು 80 ಸಿನಿಮಾಗಳನ್ನು ಚಂದ್ರಶೇಖರ್ ರೆಡ್ಡಿ ನಿರ್ದೇಶನ ಮಾಡಿದ್ದು, 'ಭಲೇ ಅಲ್ಲುಡು', 'ಮಾನವಡು ದಾನವುಡು', 'ಕೊಡುಕುಲು', 'ಜಗನ್ನಾಯಕುಡು', 'ಬಡಿಪಂತಲು', 'ವಿಚಿತ್ರ ದಾಂಪತ್ಯಂ', 'ರಗಿಲೇ ಗುಂಡೆಲು', 'ನವೋದಯಂ', 'ಪಡಿಪಂತುಲು', 'ಬಂಗಾರು ಕಾಪುರಂ', 'ರಾಜಕೀಯ ಚದುರಂಗಂ', 'ಅಣ್ಣ -ವದಿನ', 'ಪೆದ್ದಲು ಮರಲಿ', 'ಪಟ್ಟಣವಾಸಂ', 'ಅನ್ನ-ಚೆಲ್ಲುಲು' ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಚಂದ್ದರಶೇಖರ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ.

    ಚಂದ್ರಶೇಖರ್ ರೆಡ್ಡಿ 2014 ರಲ್ಲಿ 'ಜಗನ್ನಾಯಕುಡು' ಸಿನಿಮಾ ನಿರ್ದೇಶನ ಮಾಡಿದ್ದರು. ಅದೇ ಅವರ ಕೊನೆಯ ಸಿನಿಮಾ. 'ಜಗನ್ನಾಯುಕುಡು' ಸಿನಿಮಾದಲ್ಲಿ ರಾಜ, ಮಮತಾ, ಸುಮನ್, ರಾಹುಲ್, ಸಿರಿಶಾ ಇನ್ನೂ ಕೆಲವರು ನಟಿಸಿದ್ದರು. ಆ ಸಿನಿಮಾ ಫ್ಲಾಪ್ ಆಗಿತ್ತು.

    English summary
    Veteran Telugu movie director P Chandrashekhar Reddy passed away. He was 86 years old. He directed some great Telugu movies.
    Monday, January 3, 2022, 19:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X