For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ಕ್ಯೂಟ್ ಕಪಲ್ ರಾಮ್‌ಚರಣ್- ಉಪಾಸನಾ: ಆದರೆ ಚಿರು ಮಗನಿಗಾಗಿ ಹುಡುಕಿದ್ದ ಹುಡ್ಗಿ ಯಾರು ಗೊತ್ತಾ?

  |

  ಮೆಗಾಪವರ್ ಸ್ಟಾರ್ ರಾಮ್‌ಚರಣ್ ತೇಜಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸಂಚಲನ ಸೃಷ್ಟಿಸಿದ್ದಾರೆ. 'RRR' ಚಿತ್ರದಲ್ಲಿ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಚರಣ್ ಧೂಳೆಬ್ಬಿಸಿದ್ದರು. ಇನ್ನು ಇತ್ತೀಚೆಗೆ ಚೆರ್ರಿ- ಉಪಾಸನಾ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇಬ್ಬರು ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು. ಆದರೆ ಚಿರು ಆ ಸ್ಟಾರ್ ನಟನ ಮಗಳನ್ನು ಸೊಸೆಯಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಈ ವಿಚಾರ ಈಗ ಮತ್ತೊಮ್ಮೆ ಟಾಲಿವುಡ್‌ನಲ್ಲಿ ವೈರಲ್ ಆಗುತ್ತಿದೆ.

  ಅಪೋಲೋ ಆಸ್ಪತ್ರೆ ಸಮೂಹದ ಒಡೆಯ ಅನಿಲ್ ಕಾಮಿನೇನಿ ಮಗಳಾಗಿರುವ ಉಪಾಸನಾ 2012ರಲ್ಲಿ ನಟ ರಾಮ್‌ಚರಣ್‌ನ ಪ್ರೀತಿಸಿ ಮದುವೆ ಆಗಿದ್ದರು. ಲಂಡನ್ ರೀಜೆಂಟ್ಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಉಪಾಸನಾ ತಮ್ಮ ಸಾಮಾಜಿಕ ಕೆಲಸಗಳ ಮೂಲಕವೂ ಗುರ್ತಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಈ ಜೋಡಿ ಅಂದರೆ ಬಹಳ ಇಷ್ಟ. ಚರಣ್‌ ಅಭಿಮಾನಿಗಳು ಉಪಾಸನಾ ಅವರನ್ನು ಅತ್ತಿಗೆ ಅಂತಲೇ ಕರೆಯುತ್ತಾರೆ. ಈ ವರ್ಷ ಮದುವೆ ವಾರ್ಷಿಕೋತ್ಸವಕ್ಕೆ ದಂಪತಿ ಇಟಲಿ ಪ್ರವಾಸಕ್ಕೆ ಹೋಗಿ ಬಂದಿತ್ತು.

  ಮಕ್ಕಳು ಯಾಕಿಲ್ಲ: ಮತ್ತೆ ಸ್ಪಷ್ಟನೆ ಕೊಟ್ಟ ರಾಮ್‌ ಚರಣ್ ಪತ್ನಿ ಉಪಾಸನಾ!ಮಕ್ಕಳು ಯಾಕಿಲ್ಲ: ಮತ್ತೆ ಸ್ಪಷ್ಟನೆ ಕೊಟ್ಟ ರಾಮ್‌ ಚರಣ್ ಪತ್ನಿ ಉಪಾಸನಾ!

  ಅಂದಹಾಗೆ ಚಿರಂಜೀವಿ ಹಾಗೂ ನಟ ವಿಕ್ಟರಿ ವೆಂಕಟೇಶ್ ಆತ್ಮೀಯ ಸ್ನೇಹಿತರು. ಎರಡೂ ಫ್ಯಾಮಿಲಿಗಳ ನಡುವೆ ಹಲವು ವರ್ಷಗಳಿಂದ ಒಳ್ಳೆ ಅನುಬಂಧ ಇದೆ. ಈ ಅನುಬಂಧವನ್ನು ಸಂಬಂಧವಾಗಿ ಮಾಡಿಕೊಳ್ಳಬೇಕು ಎಂದು ಚಿರಂಜೀವಿ ನಿರ್ಧರಿಸಿದ್ದರಂತೆ. ವೆಂಕಟೇಶ್ ಹಿರಿಯ ಪುತ್ರಿ ಆಶ್ರೀತಾ ಜೊತೆ ರಾಮ್‌ಚರಣ್ ಮದುವೆ ಮಾಡಬೇಕು ಎಂದುಕೊಂಡಿದ್ದರಂತೆ. ಎರಡೂ ಫ್ಯಾಮಿಲಿಗೂ ಇದಕ್ಕೆ ಒಪ್ಪಿದ್ದರಂಥೇ. ಈ ವಿಚಾರವನ್ನು ಚರಣ್‌ಗೆ ಹೇಳಿದಾದ ಆತ ತಾನು ಉಪಾಸನಾನ ಪ್ರೀತಿಸುತ್ತಿರುವ ಸಂಗತಿಯನ್ನು ತಂದೆಗೆ ಹೇಳಿದ್ದಾರೆ. ಈ ವಿಚಾರವನ್ನು ವೆಂಕಟೇಶ್‌ಗೆ ಹೇಳಿದಾಗ ಮಕ್ಕಳ ಖುಷಿನೇ ನಮ್ಮ ಖುಷಿ ಎಂದಿದ್ದರಂತೆ. ಹಾಗಾಗಿ ಚರಣ್- ಉಪಾಸನಾ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು.

  Victory Venkateshs Daughter Lost the Chance to became Mega Daughter in law

  ಆಶ್ರೀತಾ ಮೆಗಾ ಫ್ಯಾಮಿಲಿ ಮನೆ ಸೊಸೆಯಾಗುವ ಅವಕಾಶ ಕಳೆದುಕೊಂಡಿದ್ದರು. ನಂತರ ಆಶ್ರೀತಾ ಹೈದರಾಬಾದ್‌ನ ರೇಸ್ ಕ್ಲಬ್ ಚೇರ್ಮನ್ ಸುರೇಂದರ್ ರೆಡ್ಡಿ ಮೊಮ್ಮಗನನ್ನು ಪ್ರೀತಿಸಿ ಮದುವೆ ಆದರು. ಈ ಮದುವೆಗೆ ರಾಮ್‌ಚರಣ್ ಪತ್ನಿ ಉಪಾಸನಾ ಸಮೇತ ಹೋಗಿ ನವ ಜೋಡಿಯನ್ನು ಹರಸಿ ಬಂದಿದ್ದರು.

  ದಸರಾ ಹಬ್ಬಕ್ಕೆ 'ಆದಿಪುರುಷ್' ಟೀಸರ್, ಫಸ್ಟ್ ಲುಕ್: ಟ್ರೆಂಡಿಂಗ್‌ನಲ್ಲಿ ಪ್ರಭಾಸ್!ದಸರಾ ಹಬ್ಬಕ್ಕೆ 'ಆದಿಪುರುಷ್' ಟೀಸರ್, ಫಸ್ಟ್ ಲುಕ್: ಟ್ರೆಂಡಿಂಗ್‌ನಲ್ಲಿ ಪ್ರಭಾಸ್!

  English summary
  Victory Venkatesh's Daughter Lost the Chance to became Mega Daughter in law. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X