ತಿಮ್ಮಪ್ಪನ ಸನ್ನಿಧಿಯಲ್ಲಿ ಶ್ರೀಲೀಲಾ ಕೆನ್ನೆ ಹಿಂಡಿದ ಸಂಗೀತ ನಿರ್ದೇಶಕ - ವಿಡಿಯೋ ವೈರಲ್...!

ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಶ್ರೀಲೀಲಾನೇ ಸಾಕ್ಷಿ. ಹೌದು.. 2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ 'ಕಿಸ್' ಸಿನಿಮಾ ಕೂಡಾ ಒಂದು. ಶ್ರೀಲೀಲಾ ಅವರ ಬಣ್ಣದ ಕನಸು ಆರಂಭವಾಗಿದ್ದು ಇದೇ ಚಿತ್ರದಿಂದ.

ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದರೂ ಆ ಕಾಲದಲ್ಲಿ ಹತ್ ಹತ್ರ 90 ಚಿತ್ರಮಂದಿರದಲ್ಲಿ 25 ದಿನ ಪೂರೈಸಿದ್ದ 'ಕಿಸ್' ಚಿತ್ರದಿಂದ ಶ್ರೀಲೀಲಾ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದಾಚೆ ಭರಾಟೆ.. ಬೈ ಟು ಲವ್.. ಚಿತ್ರಗಳನ್ನು ಮಾಡಿದ ಶ್ರೀಲೀಲಾ ಆ ನಂತರ ಸೀದಾ ಹೋಗಿದ್ದು ಆಂಧ್ರ ಪ್ರದೇಶಕ್ಕೆ.

Video Of Music Director Thaman And Actress Sreeleela At Tirumala Temple Goes Viral

ಹಾಗೇ ನೋಡಿದರೆ ಧಮಾಕಾ ಚಿತ್ರಕ್ಕೂ ಮುನ್ನ, ರೋಶನ್ ಜೊತೆ ಶ್ರೀಲೀಲಾ ಸಿನಿಮಾ ಮಾಡಿದ್ದರು. ಆದರೆ .. ಆ ಸಿನಿಮಾ ಅಷ್ಟಕಷ್ಟೇ ಅನ್ನುವ ವ್ಯಾಪಾರ ಮಾಡಿತು. ಟಆದರೆ ರವಿತೇಜಾ ಅವರ 'ಧಮಾಕಾ' ಶ್ರೀಲೀಲಾ ಅವರ ಹೆಸರನ್ನ ಹೈದ್ರಾಬಾದ್‌ನೆಲ್ಲೆಡೆ ಜನಪ್ರಿಯತೆ ತಂದು ಕೊಡ್ತು.

ಆ ನಂತರ ಒಂದಾದ ಮೇಲೊಂದು ಸಿನಿಮಾ ಮಾಡಿದ ಶ್ರೀಲೀಲಾ ಸದ್ಯಕ್ಕೆ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಾಯಕಿ. ಆದರೆ, ಟಾಲಿವುಡ್‌ನಲ್ಲಿ ಚಿನ್ನದ ಬೇಡಿಕೆ ಇರುವಾಗ್ಲೇ ಶ್ರೀಲೀಲಾ ಈಗ ರಶ್ಮಿಕಾ ಅವರಂತೆಯೇ ಬಾಲಿವುಡ್‌ಗೆ ತಲುಪುವ ರಸ್ತೆಯಲ್ಲಿ ಪ್ರಯಾಣ ಮಾಡಲು ಶುರು ಮಾಡಿದ್ದಾರೆ. ಒಂದಲ್ಲ ಬದಲಿಗೆ ಎರಡು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅನ್ನುವ ಸುದ್ದಿ ಇದೆ. ಆ ಪೈಕಿ ಸೈಫ್ ಅಲಿ ಖಾನ್ ಪುತ್ರನ ಮೊದಲ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿರುವುದು ನಿಜಾ ಎನ್ನುವ ಮಾತು ಮುಂಬೈನಲ್ಲಿ ಕೇಳಿ ಬರುತ್ತಿದೆ. ಇದರ ನಡುವೆ ಶ್ರೀಲೀಲಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Video Of Music Director Thaman And Actress Sreeleela At Tirumala Temple Goes Viral

ಹೌದು, ಅಸಲಿಗೆ ಶ್ರೀಲೀಲಾ ಇತ್ತೀಚೆಗೆ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದರು. ಶ್ರೀಲೀಲಾ ದೇಗುಲದಲ್ಲಿ ಇದ್ದ ಸಮಯದಲ್ಲಿಯೇ ಟಾಲಿವುಡ್ ಸಂಗೀತ ನಿರ್ದೇಶಕ ಎಸ್ ಎಸ್ ತಮನ್ ಕೂಡ ತಿಮ್ಮಪ್ಪನ ದರ್ಶನ ಪಡೆಯಲು ಬಂದರು. ಶ್ರೀಲೀಲಾ ಅವರಿಗೆ ಮುಖಾಮುಖಿಯಾದರು. ಈ ಸಮಯದಲ್ಲಿ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಅವರು ಶ್ರೀಲೀಲಾ ಕೆನ್ನೆ ಹಿಂಡಿ ಮಾತನಾಡಿಸಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ಹಲವಾರು ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ

ಕೆಲವರು ಇಬ್ಬರು ಎದುರಾದಾಗ ಆತ್ಮೀಯವಾಗಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ ಅಷ್ಟೇ ಎಂದರೆ, ಇನ್ನೂ ಕೆಲವರು ದೇಗುಲದಲ್ಲಿ ನಾವು ಹೋಗ ಸಂದರ್ಭದಲ್ಲಿ ಇದೆಂತಹ ಕೆಲಸ ಅಂತ ಕೆಲವರು ಕಿಡಿಕಾರಿದ್ದಾರೆ. ಅಂದ್ಹಾಗೇ ಶ್ರೀಲೀಲಾ ನಟಿಸಿರುವ ಹಲವು ಸಿನಿಮಾಗಳಿಗೆ ತಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಲೀಲಾ ನಟಿಸಿದ್ದ ಸ್ಕಂದ, ಭಗವಂತ್ ಕೇಸರಿ, ಗುಂಟೂರ ಕಾರಂ ಸಿನಿಮಾಗಳಿಗೆ ತಮನ್ ಸಂಗೀತ ನಿದೇರ್ಶನ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಶ್ರೀಲೀಲಾ ಮತ್ತು ತಮನ್ ನಡುವೆ ಆತ್ಮೀಯವಾದ ಸ್ನೇಹ ಇದೆ. ಹೀಗಾಗಿಯೇ ಎಸ್.ಎಸ್.ತಮನ್ ಸಲುಗೆಯಿಂದ ವರ್ತಿಸಿದ್ದಾರೆ ಅನ್ನುವ ಅಭಿಪ್ರಾಯವನ್ನೂ ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X