ನಯನತಾರಾಗೆ ಕೈಯ್ಯಾರೆ ಊಟ ಮಾಡಿಸಿದ ಭಾವಿ ಪತಿ ವಿಘ್ನೇಶ್: ವಿಡಿಯೋ ವೈರಲ್

ಟಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿರುವ ಜೋಡಿ ಎಂದರೆ, ಅದು ನಯನತಾರಾ ಮತ್ತು ವಿಘ್ನೆಶ್ ಜೋಡಿ ಈ ಮುದ್ದಾದ ಜೋಡಿ ಸದ್ಯಕ್ಕೆ ಡೇಟಿಂಗ್‌ನಲ್ಲಿದ್ದು, ಆಗಾಗ ತಮ್ಮಿಬ್ಬರ ಪ್ರೀತಿಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ವೈರಲ್ ಆಗುತ್ತಲೇ ಇರುತ್ತಾರೆ.

ಟಾಲಿವುಡ್‌ ಅಂಗಳಲ್ಲಿ ಸದ್ಯಕ್ಕೆ ಮದುವೆಯಾಗುವ ಜೋಡಿ ಎಂದರೆ ಅದು ನಯನತಾರಾ ಅಂಡ್ ವಿಘ್ನೇಶ್ ಎಂಬ ಮಾತುಗಳು ಕೇಳಿ ಬರುತ್ತಿದೆ. ಫ್ಯಾನ್ಸ್ ಕೂಡ ಈ ಇಬ್ಬರ ಮದುವೆಯನ್ನು ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ. ಆದರೆ, ಈ ಜೋಡಿ ತಮ್ಮ ತಮ್ಮ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಲೇಡಿ ಸೂಪರ್ ಸ್ಟಾರ್ ನಯನತಾರಾ ಆಗಾಗ ವಿಘ್ನೇಶ್ ಅವರ ಜೊತೆಗಿನ ಪೋಟೊಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ, ಈ ಬಾರಿ ವಿಘ್ನೇಶ್ ಕ್ಯೂಟ್ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

Recommended Video

ಬೇಡ ಬೇಡ ಅಂದು ಪತಿ ಕೈ ತುತ್ತು ಸವಿದ ನಯನತಾರ | #Nayanthara

 ನಾಚಿ ನೀರಾದ ನಯನತಾರಾ

ನಾಚಿ ನೀರಾದ ನಯನತಾರಾ

ಟಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿರುವ ನಯನತಾರಾ, ವಿಘ್ನೇಶ್ ಜೋಡಿ ತಮ್ಮದೇ ಆದ ಲೋಕದಲ್ಲಿ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ. ಸದ್ಯ ಈ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಅದೆನಪ್ಪಾ ಅಂದ್ರೆ, ವಿಘ್ನೇಶ್, ತಮ್ಮ ಭಾವಿ ಪತಿಗೆ ನಯನತಾರಾಗೆ ಲೋಕಲ್ ಫುಡ್ ಟೇಸ್ಟ್ ಮಾಡಿಸಿದ್ದಾರೆ. ವಿಡಿಯೋದಲ್ಲಿ ವಿಘ್ನೇಶ್, ನಯನತಾರಾಗೆ ತಾವೇ ಕೈಯರೇ ತುತ್ತು ತಿನ್ನಿಸಿದ್ದಾರೆ. ಇನ್ನು ನಯನತಾರಾ ಕೂಡ ಈ ವೇಳೆ ನಾಚಿ ನೀರಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.

ನಯನಾತಾರಾ ಬಗ್ಗೆ ವಿಘ್ನೇಶ್ ಹೇಳಿದ್ದೇನು?

ನಟಿ ನಯನತಾರಾಗೆ ಲೋಕಲ್ ಫುಡ್ ತಿನ್ನಿಸಬೇಕು ಎಂಬುದು ವಿಘ್ನೇಶ್ ಅವರ ಮಹತ್ತರವಾದ ಆಸೆಯಾಗಿತ್ತು. ಆ ಆಸೆಯನ್ನು ಕೊನೆಗೂ ಈಡೇರಿಸಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, "ಇದು ಚೆನ್ನಾಗಿ ತಿನ್ನುವ ಸಮಯ, ನನಗೆ ನಯನತಾರಾಗೆ ಲೋಕಲ್ ಫುಡ್ ತಿನ್ನಿಸುವುದು ಎಂದರೆ ತುಂಬಾ ಇಷ್ಟ. ಅದರಲ್ಲಿಯೂ ನನ್ನ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ತಿನ್ನಿಸುವುದು ಎಂದರೆ ಬಹಳ ಇಷ್ಟ. ನಾನು ತುಂಬಾ ಇಷ್ಟ ಪಟ್ಟು ತಿನ್ನುವ ಸ್ಥಳ ಇದೆ. ಇಲ್ಲಿ ಆಹಾರವೂ ಚೆನ್ನಾಗಿರುತ್ತೆ. ಇಲ್ಲಿನ ಜನರು ಕೂಡ ಅಷ್ಟೇ ಪ್ರೀತಿಯಿಂದ ಸತ್ಕರಿಸುತ್ತಾರೆ. ಹೀಗಾಗಿ ನಯನತಾರಾಗೆ ಇಲ್ಲಿಯೇ ಫುಡ್‌ ತಿನ್ನಿಸುತ್ತಿರುವುದು ಖುಷಿಯಾಗಿದೆ ."ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

 ನಯನತಾರಾ, ವಿಘ್ನೇಶ್ ಮದುವೆ ಯಾವಾಗ?

ನಯನತಾರಾ, ವಿಘ್ನೇಶ್ ಮದುವೆ ಯಾವಾಗ?

ನಯನತಾರಾ ಮತ್ತು ವಿಘ್ನೇಶ್ ಶಿವನ್‌ ಮದುವೆಯ ಹೊಸ ದಿನಾಂಕದ ನಿಗದಿ ಆಗಿದೆ. ಮುಂದಿನ ತಿಂಗಳು ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದೆಯಂತೆ. ಜೂನ್ 9 ರಂದು ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಲೇ ಇಬ್ಬರು ಕುಟುಂಬಸ್ಥರು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಇವರಿಬ್ಬರ ಮದುವೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಇವರಿಬ್ಬರ ಮದುವೆಯನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕೂಡ ಕಾತುರದಿಂದ ಕಾಯುತ್ತಿದ್ದಾರೆ.

 ಶೀಘ್ರದಲ್ಲೇ ನಯನತಾರಾ ಮತ್ತು ವಿಘ್ನೇಶ್ ಮದುವೆ

ಶೀಘ್ರದಲ್ಲೇ ನಯನತಾರಾ ಮತ್ತು ವಿಘ್ನೇಶ್ ಮದುವೆ

ನಟಿ ನಯನತಾರಾಗೆ ಬಗ್ಗೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ನಯನತಾರಾಗೆ ಗುರು ಬಲ ಇಲ್ಲ ಎಂದಿದ್ದರು. ಈ ಸಮಯದಲ್ಲಿ ಮದುವೆಯಾಗುವುದು ಉತ್ತಮವಲ್ಲ ಯಾಕೆಂದರೆ, ಗುರು ಪ್ರಬಲವಾಗಿಲ್ಲ ಎಂದು ಸಂದರ್ಶವೊಂದರಲ್ಲಿ ಹೇಳಿದ್ದಾರೆ. ನಯನತಾರಾ ಹುಟ್ಟಿದ ದಿನಾಂಕದ ಆಧಾರದ ಮೇಲೆ ಮದುವೆ ಭವಿಷ್ಯವನ್ನು ನುಡಿದಿದ್ದಾರೆ. ಆದರೆ, ಈ ಜೋಡಿ ಮುಂದಿನ ತಿಂಗಳು ಜೂನ್ 9 ರಂದು ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Vignesh Shivan Feeding Nayanthara Best Local Food.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X