twitter
    For Quick Alerts
    ALLOW NOTIFICATIONS  
    For Daily Alerts

    ಬಿಡುಗಡೆಗೂ ಮುನ್ನ ವಿಜಯ್ ದೇವರಕೊಂಡ 'ಲೈಗರ್' ದಾಖಲೆ ಬ್ಯುಸಿನೆಸ್: ಕರ್ನಾಟಕದಲ್ಲೆಷ್ಟು?

    |

    ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಇನ್ನೇನು ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯೋದಕ್ಕೆ ಇಡೀ ತಂಡ ಭರ್ಜರಿ ಪ್ರಚಾರ ಮಾಡುತ್ತಿದೆ.

    ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಕಾಂಬಿನೇಷನ್ ಸಿನಿಮಾ ಈಗಾಗಲೇ ದೇಶಾದ್ಯಂತ ಸದ್ಯ ಮಾಡುತ್ತಿದೆ. ಜೊತೆಗೆ ಬಾಯ್‌ಕಾಟ್ ಬಿಸಿ ಕೂಡ ಈ ಸಿನಿಮಾಗೆ ತಟ್ಟಿದೆ. ಇವೆಲ್ಲವನ್ನೂ ಎದುರಿಸಿ, 'ಲೈಗರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ? ಅನ್ನೋದು ಸದ್ಯಕ್ಕಂತೂ ಕುತೂಹಲ. ಪುರಿ ಜಗನ್ನಾಥ್ ಸಿನಿಮಾ ಆಗಿರೋದ್ರಿಂದ ದಕ್ಷಿಣ ಭಾರತದಲ್ಲಿ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರೋದಂತೂ ಸತ್ಯ.

    'ಲೈಗರ್' ಬಾಕ್ಸಾಫೀಸ್ ಭವಿಷ್ಯವೇನು? ಬಾಯ್‌ಕಾಟ್ ಮಧ್ಯೆ ಪ್ರೀಮಿಯರ್ ಬುಕಿಂಗ್ ಹೇಗಿದೆ?'ಲೈಗರ್' ಬಾಕ್ಸಾಫೀಸ್ ಭವಿಷ್ಯವೇನು? ಬಾಯ್‌ಕಾಟ್ ಮಧ್ಯೆ ಪ್ರೀಮಿಯರ್ ಬುಕಿಂಗ್ ಹೇಗಿದೆ?

    'ಲೈಗರ್' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಾಗಲೇ ಸಿನಿಮಾ ಬ್ಯುಸಿನೆಸ್ ಬಗ್ಗೆ ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಮೊತ್ತಕ್ಕೆ ಈ ಸಿನಿಮಾ ಮಾರಾಟ ಆಗಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸಿನಿಮಾದ ಪ್ರೀ-ರಿಲೀಸ್ ಬ್ಯುಸಿನೆಸ್ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

    'ಲೈಗರ್' ಭರ್ಜರಿ ಬ್ಯುಸಿನೆಸ್

    'ಲೈಗರ್' ಭರ್ಜರಿ ಬ್ಯುಸಿನೆಸ್

    ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸಿನಿಮಾ ಪ್ರಕಾರಕ್ಕೆಂದು ಎಲ್ಲೆಲ್ಲಿಗೆ ತಂಡ ಹೋಗಿತ್ತೋ ಅಲ್ಲೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಜನರು ವಿಜಯ್ ದೇವರಕೊಂಡ ನೋಡಲು ಮುಗಿಬಿದ್ದಿದ್ದಾರೆ. ಇದೇ ವೇಳೆ ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಸುಮಾರು 87.70 ಕೋಟಿ ರೂ. ದಾಟಿದೆ ಎನ್ನಲಾಗಿದೆ. ಇದು ವಿಜಯ್ ದೇವರಕೊಂಡ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಬ್ಯುಸಿನೆಸ್ ಮಾಡಿದ ಸಿನಿಮಾ ಎನ್ನುತ್ತಿದ್ದಾರೆ ಟ್ರೇಡ್ ಅನಲಿಸ್ಟ್.

    ನಟಿ ಚಾರ್ಮಿ ಕೌರ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ಪುರಿ ಜಗನ್ನಾಥ್!ನಟಿ ಚಾರ್ಮಿ ಕೌರ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ಪುರಿ ಜಗನ್ನಾಥ್!

    'ಲೈಗರ್' ಕರ್ನಾಟಕದಲ್ಲೆಷ್ಟು ಬ್ಯುಸಿನೆಸ್?

    'ಲೈಗರ್' ಕರ್ನಾಟಕದಲ್ಲೆಷ್ಟು ಬ್ಯುಸಿನೆಸ್?

    ವಿಜಯ್ ದೇವರಕೊಂಡ ಸಿನಿಮಾ ಕರ್ನಾಟಕದಲ್ಲೂ ಭರ್ಜರಿ ಬ್ಯುಸಿನೆಸ್ ಆಗಿದೆ. 'ಅಯೋಗ್ಯ' ಚಿತ್ರದ ನಿರ್ಮಾಪಕ ಚಂದ್ರಶೇಖರ್. 'ಪೊಗರು' ಸಿನಿಮಾದ ನಿರ್ಮಾಪಕ ಗಂಗಾಧರ್ ಇಬ್ಬರೂ ಸೇರಿ ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, 'ಲೈಗರ್' ಸಿನಿಮಾವನ್ನು 4.30 ಕೋಟಿ ರೂಪಾಯಿಗೆ ಕೊಂಡುಕೊಂಡಿದ್ದು, ಚಂದ್ರಶೇಖರ್ ಎರಡು ಕೋಟಿ ರೂ. ಹಾಗೂ ಗಂಗಾಧರ 2.50 ಕೋಟಿ ರೂ. ಕೊಟ್ಟು ಶೇ. 55-45ರ ಅನುಪಾತದಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎನ್ನುತ್ತಿದೆ. ಆದರೆ, ಅಧಿಕೃತವಾಗಿ ಮಾಹಿತಿ ನೀಡಿಲ್ಲ.

    'ಲೈಗರ್' ಎಲ್ಲೆಲ್ಲಿ ಎಷ್ಟು ಮೊತ್ತ?

    'ಲೈಗರ್' ಎಲ್ಲೆಲ್ಲಿ ಎಷ್ಟು ಮೊತ್ತ?

    'ಲೈಗರ್' ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಬಗ್ಗೆ ಟಾಕ್ ಶುರುವಾಗಿದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಸಿನಿಮಾಗೆ ಬೇಡಿಕೆ ಹೆಚ್ಚಿದ. ಅಲ್ಲದೆ ವಿದೇಶದಲ್ಲಿ ಈ ಸಿನಿಮಾದ ಬ್ಯುಸಿನೆಸ್ ಭರ್ಜರಿಯಾಗಿ ಆಗಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ಲೈಗರ್' ಬ್ಯುಸಿನೆಸ್ ಹೀಗಿದೆ.

    ನಿಜಾಂ 25 ಕೋಟಿ ರೂ.
    ಸೀಡೆಡ್ 09 ಕೋಟಿ ರೂ.
    ಆಂಧ್ರ 28 ಕೋಟಿ ರೂ.
    ಒಟ್ಟು 62 ಕೋಟಿ ರೂ. (ಆಂಧ್ರ-ತೆಲಂಗಾಣ)

    ಕರ್ನಾಟಕ 04.50 ಕೋಟಿ ರೂ.
    ತಮಿಳು 02.50 ಕೋಟಿ ರೂ.
    ಕೇರಳ 01.20 ಕೋಟಿ ರೂ.
    ಓವರ್‌ಸೀಸ್ 07.50 ಕೋಟಿ ರೂ.
    ಉತ್ತರ ಭಾರತ 10 ಕೋಟಿ ರೂ

    ಒಟ್ಟು 87.70 ಕೋಟಿ ರೂ.

    'ಲೈಗರ್'ಗೆ ಭರ್ಜರಿ ರೆಸ್ಪಾನ್ಸ್

    'ಲೈಗರ್'ಗೆ ಭರ್ಜರಿ ರೆಸ್ಪಾನ್ಸ್

    ವಿಜಯ್ ದೇವರಕೊಂಡ ಸಿನಿಮಾ 'ಲೈಗರ್' ಅಮೆರಿಕದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈಗಾಗಲೇ ಅಮೆರಿಕಾ ಒಂದರಲ್ಲೇ ಸುಮಾರು 9 ಸಾವಿರ ಟಿಕೆಟ್‌ಗಳು ಸೇಲ್ ಆಗಿವೆ ಎಂದು ವರದಿಯಾಗಿದೆ. ಪ್ರೀಮಿಯರ್ ಶೋ ನೋಡಲು ಜನರು ಕಾದು ಕೂತಿದ್ದು, ಇನ್ನೂ ಮೂರು ದಿನಗಳಲ್ಲಿ ಎಷ್ಟು ಟಿಕೆಟ್ ಸೇಲ್ ಆಗುತ್ತೆ ಎಂದು ಎದುರು ನೋಡುತ್ತಿದ್ದಾರೆ. ಯುಎಸ್‌ನಲ್ಲಿ ಹೊಸ ದಾಖಲೆ ಬರೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

    English summary
    Vijay Devakonda Starrer Liger Movie Worldwide Pre Release Business, Know More.
    Tuesday, August 23, 2022, 9:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X