ರಶ್ಮಿಕಾ ನಂತರ ದೇವರಕೊಂಡ ಜೊತೆಯಾದ ಶ್ರೀಲೀಲಾ: ವಿಜಿಗೆ ಲಕ್ಕಿ ಚಾರ್ಮ್‌ ಆಗ್ತಾರಾ ಕನ್ನಡತಿ?

'ಲೈಗರ್' ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದ ನಟ ವಿಜಯ್ ದೇವರಕೊಂಡ ಹೊಸ ಸಿನಿಮಾ ಆರಂಭಿಸಿದ್ದಾರೆ. ಚಿತ್ರದಲ್ಲಿ ಸೆನ್ಸೇಷನಲ್ ಸ್ಟಾರ್ ಜೋಡಿಯಾಗಿ ಕನ್ನಡತಿ ಶ್ರೀಲೀಲಾ ಮಿಂಚಲಿದ್ದಾರೆ. ಚಿತ್ರಕ್ಕೂ ಪೂಜೆ ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಚಿತ್ರದಲ್ಲಿ ಪವರ್‌ಫುಲ್ ರೋಲ್‌ನಲ್ಲಿ ವಿಜಯ್ ದೇವರಕೊಂಡ ಅಬ್ಬರಿಸಲಿದ್ದಾರೆ. ಸತತ ಸೋಲಿನ ಸುಳಿಯಿಂದ ಫೀನಿಕ್ಸ್ ರೀತಿ ಎದ್ದು ಬರುವ ಹುಮ್ಮಸ್ಸಿನಲ್ಲಿದ್ದಾರೆ.

'ಗೀತಾ ಗೋವಿಂದಂ' ನಂತರ ಕಳೆದ 5 ವರ್ಷಗಳಲ್ಲಿ ವಿಜಯ್ ದೇವರಕೊಂಡ ನಟಿಸಿದ ಯಾವುದೇ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಿಲ್ಲ. 'ಲೈಗರ್' ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ವಿಜಯ್ ಕನಸ್ಸಿಗೆ ತಣ್ಣೀರು ಎರಚಿದಂತಾಗಿತ್ತು. ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಅಟ್ಟರ್ ಫ್ಲಾಪ್ ಆಗಿ ಭಾರೀ ಸಂಕಷ್ಟ ಎದುರಾಗಿತ್ತು. ನಿರ್ಮಾಪಕರಿಗೆ ಸಿನಿಮಾ ಭಾರೀ ನಷ್ಟವನ್ನು ತಂದೊಡ್ಡಿತ್ತು. ಇದರ ಬೆನ್ನಲ್ಲೇ ಪೂರಿ- ವಿಜಯ್ ಕಾಂಬಿನೇಷನ್‌ನಲ್ಲಿ ಬರಬೇಕಿದ್ದ 'JGM'‌ ಸಿನಿಮಾ ನಿಂತೇ ಹೋಯಿತು.

Vijay Devarakonada and Sreeleela Starrer VD12 film launched with a Pooja Ceremony

ಗೌತಮ್ ತಿನ್ನನೂರು ನಿರ್ದೇಶನದ ಹೊಸ ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಸಮೇತ ಕೆಲ ಸಿನಿಮಾಗಳ ಹಿಂದೆ ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ ವಿಜಯ್ ಪೊಲೀಸ್ ಆಫೀಸರ್ ಆಗಿ ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಇದು ದೇವರಕೊಂಡ ನಟನೆಯ 12ನೇ ಸಿನಿಮಾ. ಹಾಗಾಗಿ VD12 ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಮುಹೂರ್ತ ನೆರವೇರಿಸಲಾಗಿದೆ.

ನಾಗ ವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಗೌತಮ್ ತಿನ್ನನೂರಿ 'ಜರ್ಸಿ' ಎನ್ನುವ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿದ್ದಾರೆ. ರಾಮ್‌ಚರಣ್ ಜೊತೆಗೂ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದರೆ ಅದೇ ಕಥೆಯಲ್ಲಿ ಈಗ ವಿಜಯ್ ವಿಜಯ್‌ ದೇವರಕೊಂಡ ನಟಿಸ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಮುಂದಿನ ತಿಂಗಳು ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

Vijay Devarakonada and Sreeleela Starrer VD12 film launched with a Pooja Ceremony

ಕನ್ನಡ ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಸೆಟ್ಲ್ ಆಗಿಬಿಟ್ಟಿದ್ದಾರೆ. ಪವನ್ ಕಲ್ಯಾಣ್, ಮಹೇಶ್‌ ಬಾಬುರಂತಹ ಸೂಪರ್ ಸ್ಟಾರ್‌ಗಳ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ VD12 ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದು ಸಿನಿಮಾ ಮುಹೂರ್ತ ಸಮಾರಂಭದಲ್ಲಿ 'ಕಿಸ್' ಬೆಡಗಿ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 'ಪೆಳ್ಳಿ ಸಂದD' ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಬೆಡಗಿ ತನ್ನ ಸೌಂದರ್ಯ ಹಾಗೂ ಡ್ಯಾನ್ಸ್‌ನಿಂದ ಭಾರೀ ಕ್ರೇಜ್ ಸಂಪಾದಿಸಿದ್ದಾರೆ.

ರಶ್ಮಿಕಾ ಮಂದಣ್ಣ ಬಾಲಿವುಡ್ ಕಡೆ ಫೋಕಸ್ ಮಾಡುತ್ತಿದ್ದಂತೆ ಇತ್ತ ಶ್ರೀಲೀಲಾ ಟಾಲಿವುಡ್‌ನಲ್ಲಿ ಬ್ಯುಸಿ ಆಗುತ್ತಿದ್ದಾರೆ. ಸದ್ಯ ಏಳೆಂಟು ಸಿನಿಮಾಗೂ ಈ ಬೆಂಗಳೂರು ಬೆಡಗಿ ಕೈಯಲ್ಲಿವೆ. ಬಾಲಕೃಷ್ಣ ಹಾಗೂ ಪವನ್ ಕಲ್ಯಾಣ್ ಸಿನಿಮಾ ಚಿತ್ರೀಕರಣದಲ್ಲೂ ಈಗಾಗಲೇ ಭಾಗಿ ಆಗಿದ್ದಾರೆ. ಮಹೇಶ್ ಬಾಬು - ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನ ಹ್ಯಾಟ್ರಿಕ್ ಚಿತ್ರದಲ್ಲಿ 2ನೇ ನಾಯಕಿಯಾಗಿ ಶ್ರೀಲೀಲಾ ನಟಿಸುವ ಸಾಧ್ಯತೆ ಕೂಡ ಇದೆ. ಇದೀಗ 'VD12' ಮೂಲಕ ಮತ್ತೊಂದು ಅದ್ಧೂರಿ ಪ್ಯಾನ್ ಇಂಡಿಯಾ ಚಿತ್ರಕ್ಕೆ ಎಂಟ್ರಿ ಆದಂತಾಗಿದೆ.

Vijay Devarakonada and Sreeleela Starrer VD12 film launched with a Pooja Ceremony

ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ಆಗಲಿದೆ. ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಕುರ್ತಾ ಪೈಜಾಮಾದಲ್ಲಿ ಕಾಣಿಸಿಕೊಂಡರೆ ಶ್ರೀಲೀಲಾ ಹಳದಿ ಬಣ್ಣದ ಸಲ್ವಾರ್‌ನಲ್ಲಿ ಕಂಗೊಳಿಸಿದ್ದಾರೆ.

More from Filmibeat

English summary
Vijay Devarakonada and Sreeleela Starrer VD12 film launched with a Pooja Ceremony. The action thriller film which will be directed by directed by Gowtam Tinnanuri and bankrolled by Sithara Entertainments. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X