'ಲೈಗರ್' 2ನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಲೈಗರ್ ಸಿನಿಮಾ ಆಗಸ್ಟ್ 25ಕ್ಕೆ ರಿಲೀಸ್ ಆಗಿದೆ. ಲೈಗರ್ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಂಡಿದೆ. ನಟ ವಿಜಯ್ ದೇವರಕೊಂಡ ಸಿನಿಮಾ ಬದುಕಿನಲ್ಲೇ ಬಹುದೊಡ್ಡ ಸಿನಿಮಾ ಇದು. ಈ ಸಿನಿಮಾ ಬಾಕ್ಸಿಂಗ್ ಕಥೆಯನ್ನು ಹೊಂದಿದೆ.
ಚಿತ್ರದಲ್ಲಿ ಸ್ಪರ್ಧೆಯ ಜೊತೆಗೆ, ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್, ಆ್ಯಕ್ಷನ್, ಫೈಟ್, ಎಲ್ಲಾ ಅಂಶಗಳೂ ಕೂಡ ಇವೆ. ಇದರ ಜೊತೆಗೆ ನಟ ವಿಜಯ್ ದೇವರಕೊಂಡ ನಾಯಕನಾದರೂ ವಿಶೇಷವಾಗಿ ಅವರ ಪಾತ್ರವನ್ನು ಹೆಣೆಯಲಾಗಿದೆ. ಮಾತನಾಡುವಾಗ ವಿಜಯ್ ತೊದಲುತ್ತಾರೆ. ಇದುವೆ ಅವರ ಪಾತ್ರದ ವಿಶೇಷತೆ.
ಇನ್ನು ಸಿನಿಮಾ ರಿಲೀಸ್ ದಿನ ಹೆಚ್ಚಿನ ನಿರೀಕ್ಷೆ ಇತ್ತು. ರಿಲೀಸ್ ಬಳಿಕ ಲೈಗರ್ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ, ಬಾಕ್ಸಾಫೀಸ್ ಗಳಿಕೆಯ ಬಗ್ಗೆ ಹೆಚ್ಚಿನ ಕುತೂಹಲ ಇದ್ದೇ ಇದೆ. ಎರಡನೇ ದಿನದ ಗಳಿಕೆಯ ಲೆಕ್ಕಾರವನ್ನು ಮುಂದೆ ಓದಿ...

'ಲೈಗರ್' 2ನೇ ದಿನದ ಗಳಿಕೆ!
ಟಾಲಿವುಡ್ ವರದಿಯ ಪ್ರಕಾರ 'ಲೈಗರ್' ಸಿನಿಮಾ ಮೊದಲ ದಿನ ನಿರೀಕ್ಷೆಯ ಮೊತ್ತವನ್ನು ಕಲೆ ಹಾಕಿದೆ. ವಿಶ್ವದಾದ್ಯಂತ ಮೊದಲ ದಿನ 'ಲೈಗರ್' ಅಂದಾಜು 24 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಎರಡನೇ ದಿನವೂ ಸಿನಿಮಾದ ಗಳಿಕೆಯಲ್ಲಿ ಕುಸಿತ ಕಂಡು ಬಂದಿಲ್ಲ. ಉತ್ತಮ ಗಳಿಕೆ ಕಂಡಿದೆ. ವಿಶ್ವದಾದ್ಯಂತ ಈ ಸಿನಿಮಾ ಎರಡನೇ ದಿನ ಅಂದಾಜು 15 ರಿಂದ 17 ಕೋಟಿ ರೂ. ಕಲೆ ಹಾಕಿದೆ ಎನ್ನಲಾಗಿದೆ. ಇನ್ನು ವಾರಂತ್ಯದಲ್ಲಿ ದುಪ್ಪಟ್ಟಾಗುವ ನಿರೀಕ್ಷೆ ಇದೆ.

ಹಿಂದಿಯಲ್ಲಿ ಉತ್ತಮ ಗಳಿಕೆ!
ಸೌತ್ ಸಿನಿಮಾರಂಗದ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಬಂದರೂ, ಮೊದಲು ಹಿಂದಿಯಲ್ಲಿ ಗಳಿಕೆ ಎಷ್ಟಾಗಿದೆ ಎನ್ನುವ ಕುತೂಹಲ ಇರುತ್ತದೆ. ಲೈಗರ್ ಸಿನಿಮಾ ಕೂಡ ಹಿಂದಿ ಅವತರಣಿಕೆಯಲ್ಲಿ ಎಷ್ಟು ಗಳಿಸಿಕೊಂಡಿದೆ ಎನ್ನುವ ಲೆಕ್ಕಾಚಾರ ಹೊರ ಬಂದಿದೆ. ಮೊದಲ ದಿನ ಲೈಗರ್ ಹಿಂದಿಯಲ್ಲಿ 5 ಕೋಟಿ ರೂ. ಹಣವನ್ನು ಗಳಿಸಿಕೊಂಡಿದೆ ಎನ್ನಲಾಗಿದೆ. ಇನ್ನು ಎರಡನೇ ದಿನ 1 ಕೋಟಿಗೂ ಅಧಿಕ ಮೊತ್ತವನ್ನು ಕಲೆಹಾಕಿದೆ.

100 ಕೋಟಿಯ ಭರವಸೆ!
'ಲೈಗರ್' ಸಿನಿಮಾ ಮೊದಲ ದಿನ 24 ಕೋಟಿ ರೂ. ಗಳಿಸಿದೆ. ಇನ್ನು ಈ ಗಳಿಕೆ ವೀಕೆಂಡ್‌ನಲ್ಲಿ ದುಪ್ಪಟ್ಟಾದರೆ, ಮೊದಲ ವೀಕೆಂಡ್‌ನಲ್ಲಿ ಈ ಸಿನಿಮಾ 100 ಕೋಟಿಯ ಗಡಿದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲ ವಾರಾಂತ್ಯದಲ್ಲಿ ಹೆಚ್ಚು ಗಳಿಸಿಕೊಂಡರೆ, ಅದು ಮುಂದಿನ ವಾರಕ್ಕೂ ಮುಂದುವರೆಯಲಿದೆ. ಮೊದಲೆರಡು ದಿನಗಳ ಗಳಿಕೆಯಿಂದಾಗಿ 'ಲೈಗರ್' ಭರವಸೆ ಮೂಡಿಸಿದೆ.

ವಿಜಯ್ ದೇವರಕೊಂಡ ನಿರೀಕ್ಷೆ!
'ಲೈಗರ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಗಳಿಕೆಯ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲೂ ಚಿತ್ರತಂಡ ಈ ಚಿತ್ರ, ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಗಳಿಕೆ ಕಾಣಲಿದೆ ಎನ್ನುವ ನಿರೀಕ್ಷೆಯಲ್ಲಿ ಇದೆ. ಈ ವಿಚಾರವನ್ನು ಈ ಹಿಂದೆ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಈ ಸಿನಿಮಾ ಎಷ್ಟು ಗಳಿಕೆ ಕಾಣಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ, ಲೈಗರ್ ಸಿನಿಮಾ 200 ಕೋಟಿಗೂ ಹೆಚ್ಚು ಗಳಿಕೆ ಮಾಡಲಿದೆ ಎಂದು ಹೇಳಿಕೊಂಡಿದ್ದರು.


Click it and Unblock the Notifications











