ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ರಶ್ಮಿಕಾ-ವಿಜಯ್ ದೇವರಕೊಂಡ; ಮುಖ ಮುಚ್ಚಿಕೊಂಡು ಹೊರನಡೆದಿದ್ದೇಕೆ?
ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ. ಡೇಟಿಂಗ್ ವಿಚಾರವಾಗಿ ಇಬ್ಬರು ಸದಾ ಸದ್ದುಮಾಡುತ್ತಿರುತ್ತಾರೆ. ಆಗಾಗ ಒಟ್ಟಿಗೆ ಕ್ಯಾಮರಾ ಕಣ್ಣಿಗೆ ಬೀಳುವ ಈ ಜೋಡಿ ಇತ್ತೀಚಿಗೆ ಹೈದರಾಬಾದ್‌ನ ಜಿಮ್‌ನಲ್ಲಿ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.
Recommended Video
ರಶ್ಮಿಕಾ ಸದ್ಯ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಲ್ಲೇ ನೆಲೆಸಿದ್ದ ರಶ್ಮಿಕಾ ಮಹಾರಾಷ್ಟ್ರದಲ್ಲಿ ಕೊರೊನಾ ಸಂಖ್ಯೆ ಏರಿಕೆಯಾದ ಹಿನ್ನಲ್ಲೇ ಕರ್ಫ್ಯೂ ಜಾರಿ ಮಾಡುತ್ತಿದ್ದಂತೆ ಹೈದರಾಬಾದ್‌ಗೆ ವಾಪಸ್ ಆಗಿದ್ದಾರೆ. ಹೈದರಾಬಾದ್‌ನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ.
ಇಬ್ಬರೂ ವರ್ಕೌಟ್ ಮಾಡಿ ಜಿಮ್‌ನಿಂದ ಹೊರಬರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಶ್ಮಿಕಾ ಜೋರಾಗಿ ನಗುತ್ತಿದ್ದು, ವಿಜಯ್ ದೇವರಕೊಂಡ ಮಾಸ್ಕ್ ಧರಿಸಿದ್ದಲ್ಲದೇ ಕ್ಯಾಪ್‌ನಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ.

ಲಿಫ್ಟ್‌ನಿಂದ ಹೊರಬರುತ್ತಿದ್ದಂತೆ ಮುಖಮುಚ್ಚಿಕೊಂಡು ಬಂದ ದೇವರಕೊಂಡ ಮತ್ತು ಹಿಂದೆಯಿಂದ ನಗುತ್ತಾ ಹೊರಗೆ ಬರುತ್ತಿರುವ ರಶ್ಮಿಕಾ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿದೆ. ಕ್ಯಾಮರಾ ಕಣ್ಣಿಗೆ ಸೆರೆಯಾಗಬಾರದು ಎನ್ನುವ ಕಾರಣಕ್ಕೆ ಮುಖ ಮುಚ್ಚಿಕೊಂಡಿದ್ದಾರಾ ಅಥವಾ ನಗು ತಡೆಯಲಾರದೆ ಮುಖಮುಚ್ಚಿಕೊಂಡರಾ ಎನ್ನುವುದು ಅಭಿಮಾನಿಗಳ ಪ್ರಶ್ನೆ.
ಇತ್ತೀಚಿಗಷ್ಟೆ ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಮುಂಬೈ ಹೋಟೆಲ್ ನಲ್ಲಿ ಒಟ್ಟಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಮುಂಬೈನಲ್ಲಿದ್ದ ರಶ್ಮಿಕಾರನ್ನು ಭೇಟಿಯಾಗಿದ್ದ ವಿಜಯ್, ಹೋಟೆಲ್ ನಿಂದ ಹೊರಬರುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಇನ್ನೂ ರಶ್ಮಿಕಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಬಾಲಿವುಡ್‌ನಲ್ಲಿ ಮಿಷನ್ ಮಜ್ನು ಮತ್ತು ಗುಡ್ ಬೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಮೊದಲ ಬಾರಿಗೆ ಬಿಗ್ ಬಿ ಅಮಿತಾಬ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಇನ್ನು ನಟ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ಡಿಯರ್ ಕಾಮ್ರೆಡ್ ಸಿನಿಮಾ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸಂಚಲನ ಮೂಡಿಸಿದ ಜೋಡಿಯನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.


Click it and Unblock the Notifications











