'ಪುಷ್ಪ' ನಿರ್ದೇಶಕನ ಜೊತೆ ವಿಜಯ್ ದೇವರಕೊಂಡ ಸಿನಿಮಾ: ಹೆಸರೇನು?

ಸದ್ಯದ ಸೂಪರ್ ಹಿಟ್ ಸಿನಿಮಾ ತೆಲುಗಿನ 'ಪುಷ್ಪ'. ಈ ಸಿನಿಮಾ ಬಾಲಿವುಡ್ಡಿಗರಿಗೇ ಬೆವರಿಳಿಸಿಬಿಟ್ಟಿದೆ. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್‌ ಅಂಥಹಾ ಸ್ಟಾರ್ ನಟರ ಸಿನಿಮಾಗಳ ಗಳಿಕೆ ದಾಖಲೆಯನ್ನು ಆಯಾಸವೇ ಇಲ್ಲದೆ ಪುಡಿಗಟ್ಟಿದೆ 'ಪುಷ್ಪ'.

ಅಲ್ಲು ಅರ್ಜುನ್ ನಟಿಸಿ, ಸುಕುಮಾರ್ ನಿರ್ದೇಶಿಸಿರುವ 'ಪುಷ್ಪ' ಸಿನಿಮಾ ದೊಡ್ಡ ಹಿಟ್ ಆಗಿರುವ ಬೆನ್ನಲ್ಲೇ ಇದೀಗ ಸಿನಿಮಾದ ಎರಡನೇ ಭಾಗದ ಕುತೂಹಲ ಹೆಚ್ಚಿದೆ. 'ಪುಷ್ಪ' ಸಿನಿಮಾದ ಎರಡನೇ ಭಾಗದ ಬಹುತೇಕ ಚಿತ್ರೀಕರಣ ಮುಗಿದಿದೆ ಎನ್ನಲಾಗುತ್ತಿದೆ. ಕೆಲವು ಭಾಗಗಳ ಚಿತ್ರೀಕರಣವಷ್ಟೆ ಬಾಕಿ ಇದೆ.

ಈ ನಡುವೆ ಸುಕುಮಾರ್ ನಿರ್ದೇಶಿಸಲಿರುವ ಮತ್ತೊಂದು ಹೊಸ ಸಿನಿಮಾದ ಬಗ್ಗೆ ಚರ್ಚೆ ಆರಂಭವಾಗಿದೆ. ಮೊದಲ ಬಾರಿಗೆ ಸುಕುಮಾರ್, ವಿಜಯ್ ದೇವರಕೊಂಡ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡುತ್ತಿದ್ದಾರೆ.

Vijay Devarakonda And Sukumar Combination New Movie Named As The Rampage

ಸುಕುಮಾರ್ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ಮಾಡಲಿರುವ ಸಿನಿಮಾ 'ಆರ್ಯ' ಸಿನಿಮಾ ಸರಣಿಯ ಮುಂದುವರೆದ ಭಾಗ ಎನ್ನಲಾಗಿತ್ತು. ಆದರೆ ವಿಜಯ್ ದೇವರಕೊಂಡ ಅವರೇ ಹೇಳಿಕೊಂಡಿರುವಂತೆ ತಮ್ಮ ಹಾಗೂ ಸುಕುಮಾರ್ ಕಾಂಬಿನೇಷನ್‌ನ ಸಿನಿಮಾ 'ಆರ್ಯ' ಅಲ್ಲ.

ಸುಕುಮಾರ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ಸಿನಿಮಾಕ್ಕೆ 'ದಿ ರ್ಯಾಂಪೇಜ್' ಎಂದು ಹೆಸರಿಡಲಾಗಿದೆ. ಕಳೆದ ಕೆಲ ವರ್ಷಗಳಿಂದ ಹಳ್ಳಿ ಕತೆಗಳನ್ನು ಹೆಣೆದಿದ್ದ ಸುಕುಮಾರ್ ಒಮ್ಮೆಲೆ ಪಕ್ಕಾ ಹೈಕ್ಲಾಸ್ ಆಕ್ಷನ್ ಸಿನಿಮಾಕ್ಕೆ ಕೈ ಹಾಕಿದ್ದಾರೆ.

ಸುಕುಮಾರ್‌ಗೆ ಈ ರೀತಿಯ ಹೈಕ್ಲಾಸ್ ಆಕ್ಷನ್ ಸಿನಿಮಾಗಳು ಸಹ ಹೊಸದೇನೂ ಅಲ್ಲ ಈ ಹಿಂದೆ ಜೂ.ಎನ್‌ಟಿಆರ್ ನಟಿಸಿದ್ದ ಸೂಪರ್-ಡೂಪರ್ ಹಿಟ್ ಸಿನಿಮಾ 'ನಾನ್ನಕು ಪ್ರೇಮ ತೋ' ನಿರ್ದೇಶನ ಮಾಡಿದ್ದರು ಸುಕುಮಾರ್. ಈ ಸಿನಿಮಾ ಸಹ ಹೈಕ್ಲಾಸ್ ಆಕ್ಷನ್ ಕತೆಯನ್ನು ಹೊಂದಿತ್ತು.

'ಪುಷ್ಪ 2' ಸಿನಿಮಾದ ಬಿಡುಗಡೆ ಬಳಿಕ 'ದಿ ರ್ಯಾಂಪೇಜ್' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಪ್ರಸ್ತುತ ವಿಜಯ್ ದೇವರಕೊಂಡ ಸಹ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾದಲ್ಲಿ ವಿಜಯ್ ನಟಿಸಿದ್ದು, ಸಿನಿಮಾವು ಆಗಸ್ಟ್ 25ಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
Actor Vijay Devarakonda and Sukumar combination new movie named as The Rampage. This movie will start shooting after the release of Pushpa 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X